ETV Bharat / international

ಅಮೆರಿಕ ಹೊರಬಿದ್ದ ಬೆನ್ನಲ್ಲೇ, ಡಬ್ಲ್ಯೂಎಚ್​​ಒಗೆ ಬೆಂಬಲ ಘೋಷಿಸಿದ ಚೀನಾ - CHINA SUPPORT TO WHO

ಚೀನಾ ಮತ್ತು ಅಮೆರಿಕ ಪ್ರತಿಸ್ಪರ್ಧಿ ರಾಷ್ಟ್ರಗಳು ಎಂಬುದರಲ್ಲಿ ಅನುಮಾನವಿಲ್ಲ. ಅದು WHOದ ವಿಚಾರದಲ್ಲೂ ಪ್ರತಿಫಲಿಸಲಿದೆ.

ಡಬ್ಲ್ಯೂಎಚ್​​ಒಗೆ ಬೆಂಬಲ ಘೋಷಿಸಿದ ಚೀನಾ
ಡಬ್ಲ್ಯೂಎಚ್​​ಒಗೆ ಬೆಂಬಲ ಘೋಷಿಸಿದ ಚೀನಾ (ETV Bharat)
author img

By PTI

Published : Jan 21, 2025, 9:44 PM IST

ಬೀಜಿಂಗ್ (ಚೀನಾ) : ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (WHO) ಯಿಂದ ಅಮೆರಿಕ ಹಿಂದೆ ಸರಿಯುವುದಾಗಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಘೋಷಿಸಿದ ಬೆನ್ನಲ್ಲೇ, ಚೀನಾವು ತನ್ನ ಬೆಂಬಲವನ್ನು ಪ್ರಕಟಿಸಿದೆ.

ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್​ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಅಮೆರಿಕವು ಡಬ್ಲ್ಯುಎಚ್‌ಒನಿಂದ ಹೊರಬರುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಇದು ಐದು ವರ್ಷಗಳ ಅಂತರದಲ್ಲಿ ಅಮೆರಿಕವು ಎರಡನೇ ಬಾರಿಗೆ ಡಬ್ಲ್ಯೂಎಚ್​ಒದಿಂದ ಹಿಂದೆ ಸರಿದಂತಾಗಿದೆ.

ಟ್ರಂಪ್ ಅವರ ಈ ನಿರ್ಧಾರ ಹೊರಬಿದ್ದ ಬಳಿಕ, ಚೀನಾವು ತನ್ನ ಬೆಂಬಲವನ್ನು ದೃಢಪಡಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಗೆ ತಮ್ಮ ಬೆಂಬಲವನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಜಾಗತಿಕ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಬ್ಲ್ಯೂಎಚ್​​ಒ ಅಧಿಕೃತ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸಬೇಕೇ ಹೊರತು, ಅದನ್ನು ದುರ್ಬಲಗೊಳಿಸಬಾರದು ಎಂದು ಗುವೊ ತಿಳಿಸಿದ್ದಾರೆ.

WHO ಟೀಕಾಕಾರ ಟ್ರಂಪ್​: ಟ್ರಂಪ್ ಹಿಂದಿನಿಂದಲೂ WHO ಅನ್ನು ಟೀಕಿಸುತ್ತಿದ್ದಾರೆ. ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಬಳಿಕ ಬಂದ ಜೋ ಬೈಡನ್​ ಟ್ರಂಪ್ ಅವರ ನಿರ್ಧಾರವನ್ನು ರದ್ದುಗೊಳಿಸಿದ್ದರು.

ಟ್ರಂಪ್​ ನಿರ್ಧಾರಕ್ಕೆ ಕಾರಣಗಳಿವು: ಕೋವಿಡ್​ -19 ಸಾಂಕ್ರಾಮಿಕ ಸೇರಿ ಇತರ ಅಂತಾರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯೂಎಚ್​ಒ ವಿಫಲವಾಗಿದೆ. ಈ ಕಾರಣಕ್ಕಾಗಿ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ನಿರ್ಗಮಿಸುತ್ತದೆ ಎಂದು ಟ್ರಂಪ್ ಹೇಳಿದ್ದರು.

ಅಮೆರಿಕವು ಡಬ್ಲ್ಯುಎಚ್​​ಒದ ಅರಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಅದರ ಒಟ್ಟು ನಿಧಿಯ ಶೇ.18 ರಷ್ಟು ಕೊಡುಗೆಯನ್ನು ಅಮೆರಿಕ​ ನೀಡುತ್ತಿತ್ತು. ನೂತನ ಅಧ್ಯಕ್ಷರ ಹಿಂತೆಗೆತವು, ಕ್ಷಯ, ಎಚ್​ಐವಿ ಅಥವಾ ಏಡ್ಸ್​ ಸೇರಿ ಇತರ ಆರೋಗ್ಯ ತುರ್ತುಸ್ಥಿತಿಗಳನ್ನು ನಿರ್ವಹಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಸಮಸ್ಯೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಓದಿ: ಡಾಲರ್​ ಬದಲಿಸಿದರೆ ಶೇ.100 ರಷ್ಟು ಸುಂಕ: ಬ್ರಿಕ್ಸ್​ ರಾಷ್ಟ್ರಗಳಿಗೆ ಟ್ರಂಪ್​ ಬೆದರಿಕೆ

ಡೊನಾಲ್ಡ್​​ ಟ್ರಂಪ್​​ ಪ್ರಮಾಣವಚನ ಸಮಾರಂಭದಲ್ಲಿ ಎಲಾನ್​ ಮಸ್ಕ್​ 'ನಾಜಿ ಸೆಲ್ಯೂಟ್​': ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.