ETV Bharat / health

ವಿಶ್ವ 'ಒಆರ್​ಎಸ್'​ ದಿನ: ನಿರ್ಜಲೀಕರಣ, ಅತಿಸಾರದ ವೇಳೆ ನೆನಪಾಗುವ ಇದರ ಬಗ್ಗೆ ಸಂಪೂರ್ಣ ಮಾಹಿತಿ - World Oral Rehydration Solution Day - WORLD ORAL REHYDRATION SOLUTION DAY

ಇಂದು ವಿಶ್ವ ಒರಲ್​ ರಿಹೈಡ್ರೇಷನ್​ ಸಲ್ಯೂಷನ್(ಒಆರ್​ಎಸ್) ದಿನ.​ ಈ ದಿನ ಇತಿಹಾಸ ಮತ್ತು ಮಹತ್ವ, ಒಆರ್​ಎಸ್​ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.

ವಿಶ್ವ 'ಒಆರ್​ಎಸ್'​ ದಿನ
ವಿಶ್ವ 'ಒಆರ್​ಎಸ್'​ ದಿನ (ETV Bharat)
author img

By ETV Bharat Karnataka Team

Published : Jul 28, 2024, 11:55 PM IST

ನವದೆಹಲಿ: ಒರಲ್​ ರಿಹೈಡ್ರೇಷನ್​ ಸಲ್ಯೂಷನ್​ (ಮೌಖಿಕ ಪುನರ್ಜಲೀಕರಣ ಪರಿಹಾರ)ನ ಪ್ರಾಮುಖ್ಯತೆಯನ್ನು ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮತ್ತು ನಿರ್ಜಲೀಕರಣ ಹಾಗೂ ಅತಿಸಾರದ ವಿರುದ್ಧ ಹೋರಾಡಲು ಜಾಗತಿಕವಾಗಿ ಪ್ರತಿವರ್ಷ ಜುಲೈ 29 ರಂದು ವಿಶ್ವ ಒಆರ್​ಎಸ್​ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸ ಮತ್ತು ಮಹತ್ವ: 1971ರ ಯುದ್ಧದ ಸಮಯದಲ್ಲಿ ಪಶ್ಚಿಮ ಬಂಗಾಳದ ಬೊಂಗಾವ್‌ನ ನಿರಾಶ್ರಿತರ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸುತ್ತಿದ್ದ ಮಕ್ಕಳ ತಜ್ಞ ಡಾ. ದಿಲೀಪ್ ಮಹಲನಾಬಿಸ್ ಅವರು ಒಆರ್​ಎಸ್​ ಕಂಡುಹಿಡಿದರು

ನಂತರ, ಅತಿಸಾರ ಮತ್ತು ನಿರ್ಜಲೀಕರಣದಿಂದ ಉಂಟಾಗುವ ಮಕ್ಕಳ ಸಾವಿನ ಪ್ರಕರಣಗಳನ್ನು ಕಡಿಮೆ ಮಾಡುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) 2001 ರಲ್ಲಿ ವಿಶ್ವ ಒಆರ್​ಎಸ್​ ದಿನವನ್ನು ಆಚರಿಸಲು ಪ್ರಾರಂಭಿಸಿತು.

ಒಆರ್​ಎಸ್​ ಎಂದರೇನು?: ದೇಹದಲ್ಲಿ ಅತಿಸಾರ ಮತ್ತು ನಿರ್ಜಲೀಕರಣ ಗುಣಪಡಿಸುವಲ್ಲಿ ಒಆರ್​ಎಸ್​ ಮಹತ್ವದ ಪಾತ್ರ ವಹಿಸುತ್ತದೆ. ಈ ಅತಿಸಾರ ಮತ್ತು ನಿರ್ಜಲೀಕರಣ ಅನೇಕ ಕಾರಣಗಳಿಂದಾಗಿ ತೀವ್ರ ಮತ್ತು ಸಾಮಾನ್ಯವಾಗಿದೆ. ಗ್ಲುಕೋಸ್-ಎಲೆಕ್ಟ್ರೋಲೈಟ್​ಗಳಲ್ಲಿ ಹೇರಳವಾಗಿರುವ ದ್ರಾವಣವನ್ನು ತಯಾರಿಸಲು ಒಆರ್​ಎಸ್ ಸಹಾಯ ಮಾಡುತ್ತದೆ. ಒಆರ್​ಎಸ್ ಅಗತ್ಯ ಪ್ರಮಾಣದ ಗ್ಲೂಕೋಸ್, ಸೋಡಿಯಂ ಮತ್ತು ಇತರ ಎಲೆಕ್ಟ್ರೋಲೈಟ್ ಗಳನ್ನು ದೇಹಕ್ಕೆ ಒದಗಿಸುತ್ತದೆ.

ಒಆರ್​ಎಸ್​ ಎಂಬುದು ಬಾಯಿಯ ಮೂಲಕ ತೆಗೆದುಕೊಳ್ಳುವ ದ್ರಾವಣವಾಗಿದೆ. ದ್ರಾವಣ ಮತ್ತು ಎಲೆಕ್ಟ್ರೋಲೈಟ್​ಗಳನ್ನು ಕರುಳು ಸುಲಭವಾಗಿ ಹೀರಿಕೊಳ್ಳುವಂತೆ ಒಆರ್​ಎಸ್​ ಅನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಅಭಿವೃದ್ಧಿಪಡಿಸಿದೆ. ನಿರ್ಜಲೀಕರಣ ಗುಣಪಡಿಸಲು ಮತ್ತು ಅತಿಸಾರ ರೋಗದೊಂದಿಗೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಒಆರ್​ಎಸ್ ಅನ್ನು ಬಳಸಲಾಗುತ್ತದೆ.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಹೇಳಿದ್ದೇನು?: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನ್ಯುಮೋನಿಯಾದ ನಂತರ ಅತಿಸಾರವು ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ. 4ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಹಿಂದಿನ ಎರಡು ವಾರಗಳಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 9.2 ರಷ್ಟು ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದೆ. 2005 ರಲ್ಲಿ ಇದರ ಪ್ರಮಾಣ ಶೇ.9 ರಷ್ಟಿತ್ತು.

" ಅತಿಸಾರದ ವೇಳೆ ಸೂಕ್ತ ರಿಹೈಡ್ರೇಷನ್ ಚಿಕಿತ್ಸೆ ಮುಖ್ಯವಾಗಿದೆ. ಮಾಲಿಕ್ಯುಲರ್ ತಂತ್ರಜ್ಞಾನದಲ್ಲಿನ ಪ್ರಗತಿಯು ಅತಿಸಾರದ ರೋಗಶಾಸ್ತ್ರ ಮತ್ತು ಪ್ಯಾಥೊಫಿಸಿಯಾಲಜಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಯಿತು. ಇದು ಓರಲ್​ ರಿಹೈಡ್ರೇಷನ್​ ಚಿಕಿತ್ಸೆಯ ಪರಿಕಲ್ಪನೆ ಮತ್ತು ಸುಧಾರಣೆಗೆ ಸಹಾಯ ಮಾಡಿತು" ಎಂದು ಐಎಪಿ ಹೇಳಿದೆ.

ಒಆರ್​ಎಸ್​ ಅನ್ನು ಯಾವಾಗ ಸೇವಿಸಬೇಕು?: ಅತಿಸಾರ, ನಿರ್ಜಲೀಕರಣ ಮತ್ತು ವಾಂತಿ ಇರುವ ಸಂದರ್ಭದಲ್ಲಿ ಒಆರ್​ಎಸ್​ ಸೇವನೆ ಉಪಯುಕ್ತ. ಅತಿಸಾರವು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ದೇಹದಲ್ಲಿ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಒಆರ್​ಎಸ್​ ಸೇವನೆಯು ಈ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಅತಿಸಾರ ರೋಗವು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಮಕ್ಕಳ ಸಾವಿಗೆ ಅತಿಸಾರವು ಮೂರನೇ ಪ್ರಮುಖ ಕಾರಣವಾಗಿದೆ. ಅನೈರ್ಮಲ್ಯ ಕಾರಣದಿಂದ ಉಂಟಾಗುವ ಅತಿಸಾರವು ಗಂಭೀರ, ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. ಅತಿಸಾರ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ 1978 ರಲ್ಲಿ ಓರಲ್ ರೀಹೈಡ್ರೇಷನ್ ಥೆರಪಿ (ಒಆರ್​ಟಿ) ಯನ್ನು ಜಾರಿಗೆ ತಂದು ಜಾಗತಿಕ ಅತಿಸಾರ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಿತು.

ಖ್ಯಾತ ಮಕ್ಕಳ ತಜ್ಞೆ ಡಾ.ಸಂಗೀತಾ ಯಾದವ್ ಮಾತನಾಡಿ, "ಜಾಗತಿಕವಾಗಿ ಪ್ರತಿ ವರ್ಷ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 1.7 ಬಿಲಿಯನ್ ಮಕ್ಕಳು ಅತಿಸಾರದಿಂದ ಬಳಲುತ್ತಿದ್ದಾರೆ ಮತ್ತು ಪ್ರತಿವರ್ಷ ಸುಮಾರು 5,25,000 ಮಕ್ಕಳು ಸಾಯುತ್ತಿದ್ದಾರೆ. ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವನ್ನು ಒಆರ್​ಎಸ್​ ನೀಡುವ ಮೂಲಕ ತಡೆಗಟ್ಟಬಹುದು ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಇದು 1980ರ ಆರಂಭದಿಂದಲೂ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಮಿತಿ ರಹಿತ​' ಆರೋಗ್ಯ ವಿಮಾ ಯೋಜನೆ: ಎಷ್ಟು ಬಾರಿಯಾದರೂ, ಎಷ್ಟುಬೇಕಾದರೂ ಕ್ಲೈಮ್ ಮಾಡಿ! - Unlimited Health Insurance

ETV Bharat Logo

Copyright © 2025 Ushodaya Enterprises Pvt. Ltd., All Rights Reserved.