ETV Bharat / city

ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ಸು; ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ನಾಯಕರು - ಈಟಿವಿ ಭಾರತ ಕನ್ನಡ

ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೊ ಯಾತ್ರೆಗೆ ರಾಜ್ಯದಲ್ಲಿ ಉತ್ತಮ ಜನಸ್ಪಂದನೆ ದೊರೆಯುತ್ತಿದೆ. ಕಾಂಗ್ರೆಸ್​ ನಾಯಕರು ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು,ರಾಜ್ಯ ಕಾಂಗ್ರೆಸ್​ ನಾಯಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

bharat-jodo-padayathra-in-karnataka
ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ಸು; ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ನಾಯಕರು
author img

By

Published : Oct 11, 2022, 6:18 PM IST

ಬೆಂಗಳೂರು : ರಾಹುಲ್​ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ರಾಹುಲ್ ಗಾಂಧಿ ಜತೆ ಪಾದಯಾತ್ರೆಯಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಕಷ್ಟು ಸುಸ್ತಾದರೂ, ಯಾತ್ರೆ ನೀಡುತ್ತಿರುವ ಯಶಸ್ಸು ರಾಜ್ಯ ನಾಯಕರ ಯಶಸ್ಸನ್ನು ಇಮ್ಮಡಿಗೊಳಿಸಿದೆ.

ಒಟ್ಟು 21 ದಿನಗಳ ಪಾದಯಾತ್ರೆಯಲ್ಲಿ ಈಗಾಗಲೇ 11 ದಿನದ ನಡಿಗೆ ಮುಕ್ತಾಯವಾಗಿದೆ. ಇನ್ನು 9 ದಿನದ ಪಾದಯಾತ್ರೆ ಬಾಕಿ ಇದೆ. ಇದರಲ್ಲಿ ಒಂದೆರಡು ದಿನ ವಿರಾಮ ಸಿಗಬಹುದು. ಆದರೆ ಕನಿಷ್ಠ ಒಂದು ವಾರದ ನಡಿಗೆಯಂತೂ ಬಾಕಿ ಉಳಿದಿದೆ. ಸೆ.7 ರಿಂದ ಆರಂಭಿಸಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಇಂದು 34ನೇ ದಿನಕ್ಕೆ ಕಾಲಿರಿಸಿದೆ. ಕೇರಳ ಮತ್ತು ತಮಿಳುನಾಡಿಗಿಂತ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಜನಸ್ಪಂದನೆ ಸಿಗುತ್ತಿದೆ. ಅತ್ಯುತ್ಸಾಹದಲ್ಲಿ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಇವರಿಗೆ ಸರಿಸಮನಾಗಿ ರಾಜ್ಯ ನಾಯಕರು ಕಷ್ಟಪಟ್ಟು ಹೆಜ್ಜೆಹಾಕುತ್ತಿದ್ದಾರೆ.

ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ಸು; ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ನಾಯಕರು

ಭಾರತ್​ ಜೋಡೋ ಯಾತ್ರೆಗೆ ಉತ್ತಮ ಜನಸ್ಫಂದನೆ : ಯಾತ್ರೆಯ ಯಶಸ್ಸಿನಲ್ಲಿ ರಾಜ್ಯದ ನಾಯಕರ ಪಾಲ್ಗೊಳ್ಳುವಿಕೆ ಹಾಗೂ ಬೆಂಬಲದ ವಿಚಾರದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ರಾಜ್ಯ ನಾಯಕರ ಶಾರೀರಿಕ ದಣಿವನ್ನು ಮರೆಸಿ, ಉತ್ಸಾಹದಿಂದ ಹೆಜ್ಜೆ ಹಾಕಲು ಸಹಕಾರ ಮಾಡಿಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಸ್ತಿನ ನಡುವೆಯೇ ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಿನವಿಡೀ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿಲ್ಲವಾದರೂ, ತಮ್ಮ ಉಪಸ್ಥಿತಿಯನ್ನು ಎಲ್ಲಾ ಕಡೆ ತೋರಿಸುತ್ತಿದ್ದಾರೆ.

ಸಕ್ರಿಯವಾಗಿ ಭಾಗಿಯಾದ ರಾಜ್ಯನಾಯಕರು : ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕೆಲವರು ತಮಗೆ ನೀಡಿದ ಗುರಿಯಷ್ಟು ಸಂಖ್ಯೆಯಲ್ಲಿ ಜನರನ್ನು ಸೇರಿಸಿಲ್ಲ. ಆದರೆ, ನಿರೀಕ್ಷೆ ಮಾಡಿರದ ನಾಯಕರು ದೊಡ್ಡ ಮಟ್ಟದಲ್ಲಿ ಜನ ಬೆಂಬಲ ತೋರಿಸಿದ್ದಾರೆ. ಒಟ್ಟಾರೆ ಹೋದಲ್ಲೆಲ್ಲಾ ರಾಹುಲ್ ಗಾಂಧಿಗೆ ಜನ ಬೆಂಬಲ ಚೆನ್ನಾಗಿ ಸಿಗುತ್ತಿದ್ದು, ರಾಜ್ಯದಲ್ಲಿ ಅವರು ಅತ್ಯುತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ.

ಉತ್ತಮ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ರಾಹುಲ್, ಇಮ್ಮಡಿ ಉತ್ಸಾಹದಿಂದ ಮುನ್ನಡೆದಿದ್ದಾರೆ. ಆದರೆ, ರಾಜ್ಯ ನಾಯಕರಲ್ಲಿ ಹಲವರು ವಯಸ್ಸು, ಅನಾರೋಗ್ಯ, ಶಾರೀರಿಕ ದೌರ್ಬಲ್ಯ ಇತ್ಯಾದಿ ಕಾರಣಗಳಿಂದಾಗಿ ಅತ್ಯುತ್ಸಾಹದಿಂದ ನಡೆಯಲಾಗದೇ ಹೋಗಿದ್ದಾರೆ. ಆದರೆ ತಮ್ಮ ಉಪಸ್ಥಿತಿಯನ್ನು ಎಲ್ಲಿಯೂ ಕಡೆಗಣಿಸಿಲ್ಲ.

ಹಿಂದೆ ಮೇಕೆದಾಟು ಪಾದಯಾತ್ರೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಎರಡು ಹಂತದಲ್ಲಿ ಹತ್ತು ದಿನ ಪಾದಯಾತ್ರೆ ಮಾಡಿದ್ದರು. ಆದರೆ, ಈಗ ಒಂದೇ ಹಂತದಲ್ಲಿ ಕೇವಲ ನಾಲ್ಕು ದಿನ ಮಾತ್ರ ವಿರಾಮ ಪಡೆದು ನಿರಂತರವಾಗಿ 505 ಕಿ.ಮೀ. ದೂರವನ್ನು ನಿತ್ಯ 25 ಕಿ.ಮೀ.ಯಂತೆ ಕ್ರಮಿಸುವುದು ಕಾಂಗ್ರೆಸ್ ರಾಜ್ಯ ನಾಯಕರಿಗೆ ಕಷ್ಟಸಾಧ್ಯವಾಗುತ್ತಿದೆ. ಆದರೆ, ಯಾತ್ರೆಯ ಯಶಸ್ಸಿನಲ್ಲಿ ಭಾಗಿಯಾಗಬೇಕೆಂಬ ಉದ್ದೇಶದಿಂದ ಸಕ್ರಿಯವಾಗಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ ಸುಸ್ತಿನ ನಡುವೆಯೆ ಕಷ್ಟಪಟ್ಟು ಹೆಜ್ಜೆಹಾಕುತ್ತಿದ್ದಾರೆ.

ಕಾಂಗ್ರೆಸ್​ನಿಂದ ಚುನಾವಣೆಗೆ ಸಿದ್ಧತೆ : ಮುಂದಿನ ಡಿಸೆಂಬರ್ ಒಳಗೆ ಬಿಬಿಎಂಪಿ ಚುನಾವಣೆ ಮುಗಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಇದರ ಜತೆ ಇನ್ನು ಕೆಲ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಇದರ ನಡುವೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು. ರಾಜ್ಯದಲ್ಲಿ ಈ ಸ್ಥಿತಿ ಇರುವಾಗ ಅದಕ್ಕೆ ಸಹ ರಾಜ್ಯ ನಾಯಕರು ಓಡಾಡಬೇಕಿದೆ. ಈ ಎಲ್ಲ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರಿಗೆ ನೈತಿಕ ಬಲ ಹೆಚ್ಚಿಸುವ ರೀತಿಯಲ್ಲಿ ಈ ಪಾದಯಾತ್ರೆಯ ಯಶಸ್ಸು ಲಭಿಸಿದೆ.

ಪಾದಯಾತ್ರೆಯಿಂದ ಪಕ್ಷಕ್ಕೆ ಬಲ : ಭಾರತ್ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕುತ್ತಿದ್ದಾರೆ. ನಮಗೆ ಸಿಗುತ್ತಿರುವ ಯಶಸ್ಸಿನಿಂದ ಬಿಜೆಪಿ ಸಹ ಭಯ ಬಿದ್ದಿದೆ. ರಾಹುಲ್ ಜನಪ್ರಿಯತೆ ಕುಗ್ಗಿಸಲು ಯತ್ನಿಸಿದ್ದ ಬಿಜೆಪಿಯ 8 ವರ್ಷಗಳ ಪ್ರಯತ್ನ ಒಂದು ಪಾದಯಾತ್ರೆ ಮೂಲಕ ಅಳಿಸಿ ಹೋಗಿದೆ ಎಂದು ಹೇಳಿದರು.

ನಿರಂತರವಾಗಿ ಪಾದಯಾತ್ರೆ ಸಾಗುವುದು ಕಷ್ಟಸಾಧ್ಯ. ಆದರೆ ರಾಹುಲ್ ಗಾಂಧಿ ಉತ್ಸಾಹಕ್ಕೆ ನಾವೆಲ್ಲ ಮಾರುಹೋಗಿದ್ದೇವೆ. ಅವರೊಂದಿಗೆ ಹೆಜ್ಜೆ ಹಾಕುವುದೇ ಒಂದು ಹೆಮ್ಮೆಯ ಸಂಕೇತ. ನಮಗಾಗಿರುವ ಬಳಲಿಕೆಯನ್ನು ಸಹ ಮರೆಯುವಷ್ಟು ಯಶಸ್ವಿಯಾಗಿ ಪಾದಯಾತ್ರೆ ಸಾಗಿದೆ. ತಮಿಳುನಾಡು, ಕೇರಳಕ್ಕಿಂತ ಕರ್ನಾಟಕದಲ್ಲಿ ಇದರ ಯಶಸ್ಸು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿಯೂ ಯಾತ್ರೆ ಯಶಸ್ವಿಯಾಗಿ ಮುನ್ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ :ಅಸ್ತಿತ್ವ ಉಳಿಸಿಕೊಳ್ಳಲು ರಾಹುಲ್​ ಗಾಂಧಿ ಜೋಡೋ ಯಾತ್ರೆ.. ಸಿಎಂ ಬೊಮ್ಮಾಯಿ ಲೇವಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.