ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ 'ವಿಡಾಮುಯರ್ಚಿ' ಫೆಬ್ರವರಿ 6ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಸಿನಿಮಾ ಬಿಡುಗಡೆಯಾದ 14 ದಿನಗಳಲ್ಲಿ 79.35 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ 1997ರ ಅಮೆರಿಕನ್ ಥ್ರಿಲ್ಲರ್ 'ಬ್ರೇಕ್‌ಡೌನ್'ನಿಂದ ಪ್ರೇರಿತವಾಗಿದ್ದು, ತನ್ನ ಹೈ-ಆ್ಯಕ್ಟೇನ್ ಆ್ಯಕ್ಷನ್ ಮತ್ತು ಕಥಾಹಂದರದಿಂದ ಮೆಚ್ಚುಗೆ ಪಡೆದುಕೊಂಡಿದೆ.
ನಟನ ಅಪಾರ ಸಂಖ್ಯೆಯ ಅಭಿಮಾನಿಗಳಿಗಾಗಿ, ಚಿತ್ರದ ಒಟಿಟಿ ಬಿಡುಗಡೆಯ ಕುರಿತು ಒಂದು ಕುತೂಹಲಕಾರಿ ಅಪ್ಡೇಟ್ ಇಲ್ಲಿದೆ. ಮಾಗಿಜ್ ತಿರುಮೇನಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವೀಗ ಹೆಚ್ಚಿನ ಪ್ರೇಕ್ಷಕರನ್ನು ತಲುಪೋ ಸಲುವಾಗಿ ಒಟಿಟಿ ಬಿಡುಗಡೆಯತ್ತ ಗಮನ ಹರಿಸಿದೆ. ಹೌದು, 'ವಿಡಾಮುಯರ್ಚಿ' ಮಾರ್ಚ್ 28ರಂದು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ.
ನಿಖರ ವಿವರಗಳನ್ನು ಚಿತ್ರ ತಯಾರಕರಿನ್ನೂ ದೃಢೀಕರಿಸದಿದ್ದರೂ, ನೆಟ್‌ಫ್ಲಿಕ್ಸ್ ಒಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿರೋದು ಖಚಿತ. ಚಿತ್ರಮಂದಿರಗಳಲ್ಲಿನ್ನೂ ಸಿನಿಮಾ ನೋಡದ ಅಭಿಮಾನಿಗಳು ತಾವಿದ್ದ ಸ್ಥಳದಿಂದಲೇ ಥ್ರಿಲ್ಲಿಂಗ್, ಆ್ಯಕ್ಷನ್, ಸಸ್ಪೆನ್ಸ್ ಸಿನಿಮಾ ನೋಡಬಹುದಾಗಿದೆ.
ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಶಾಂತ್ ನೀಲ್-ಜೂ.ಎನ್ಟಿಆರ್ ಸಿನಿಮಾ ಶೂಟಿಂಗ್ ಶುರು: ಮೊದಲ ಸೀನ್ ಹೇಗಿದೆ?
ಸನ್ ಟಿವಿಯೊಂದಿಗೆ ಸ್ಯಾಟಲೈಟ್ ರೈಟ್ಸ್ ಪಡೆದುಕೊಂಡಿದ್ದು, ದೂರದರ್ಶನ ಪ್ರೀಮಿಯರ್ ಅನ್ನೂ ಖಚಿತಪಡಿಸಿಕೊಂಡಿದೆ. ಚಿತ್ರದ ಟಿವಿ ಪ್ರೀಮಿಯರ್ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ತಮಿಳು ಹೊಸ ವರ್ಷದ ಆಚರಣೆಯ ಸಮಯದಲ್ಲಿ, ಅಂದರೆ ಏಪ್ರಿಲ್ 14ರಂದು ಈ ಚಿತ್ರ ಟಿವಿಯಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ. 'ವಿಡಾಮುಯರ್ಚಿ' ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸದಿದ್ದರೂ, ಅದರ ಒಟಿಟಿ ಮತ್ತು ಟಿವಿ ಪ್ರೀಮಿಯರ್‌ಗಳಿಗಾಗಿ ನಟನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Tune in to the sound of VIDAAMUYARCHI 🎧🔥 Full Album streaming on all audio platforms! 🔊
— Lyca Productions (@LycaProductions) February 17, 2025
🔗 https://t.co/ubT9bvBJF2
VIDAAMUYARCHI TRIUMPHS 📽️✨#Vidaamuyarchi #Pattudala #EffortsNeverFail#AjithKumar #MagizhThirumeni @LycaProductions #Subaskaran @gkmtamilkumaran… pic.twitter.com/sp8dIsoFHR
ಇದನ್ನೂ ಓದಿ: 6 ದಿನಗಳಲ್ಲಿ ₹197 ಕೋಟಿ: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ 'ಛಾವಾ' ಹವಾ
ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಅಜಿತ್ ಜೊತೆಗೆ ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ, ರೆಜಿನಾ ಕ್ಯಾಸಂದ್ರ ಸೇರಿದಂತೆ ಹಲವರು ನಟಿಸಿದ್ದಾರೆ. ಉತ್ತಮ ವಿಮರ್ಶೆಗಳನ್ನು ಗಳಿಸಿದರೂ, ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ದೊಡ್ಡ ಮಟ್ಟದಲ್ಲಿಲ್ಲ.