ETV Bharat / state

1804 ಅಡಿ ತಲುಪಿದ ಲಿಂಗನಮಕ್ಕಿ ಡ್ಯಾಂ ನೀರಿನಮಟ್ಟ: ಜಲಾಶಯದ ಗೇಟ್ ಪೂಜೆ ಸಲ್ಲಿಸಿದ ಅಧಿಕಾರಿಗಳು - Linganamakki Dam Water Level

ಲಿಂಗನಮಕ್ಕಿ ಡ್ಯಾಂ ನೀರಿನಮಟ್ಟ 1804 ಅಡಿ ತಲುಪಿದ್ದು, ಅಧಿಕಾರಿಗಳು ಜಲಾಶಯದ ಗೇಟ್​ಗೆ ಪೂಜೆ ಸಲ್ಲಿಸಿದರು.

TUNGA BHADRA DAM  DAM WATER LEVEL  OFFICIALS OFFERED PUJA  SHIVAMOGG
1804 ಅಡಿ ತಲುಪಿದ ಲಿಂಗನಮಕ್ಕಿ ಡ್ಯಾಂ ನೀರಿನಮಟ್ಟ (ETV Bharat)
author img

By ETV Bharat Karnataka Team

Published : Jul 27, 2024, 10:11 AM IST

ಶಿವಮೊಗ್ಗ: ನಾಡಿಗೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯವು ಈ ವರ್ಷ 1804 ಅಡಿ ತಲುಪಿದೆ. ಕಳೆದ ಎರಡು ವರ್ಷಗಳಲ್ಲಿ ಮಳೆ ಕೊರತೆಯಿಂದ ಜಲಾಶಯ ನಿರೀಕ್ಷಿಸಿದ ಮಟ್ಟದಲ್ಲಿ ಭರ್ತಿಯಾಗಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದು, ಲಿಂಗನಮಕ್ಕಿ ಡ್ಯಾಂನ ನೀರಿನಮಟ್ಟ 1800 ಅಡಿ ದಾಟಿದೆ.

ಜಲಾಶಯ 1800 ಅಡಿ ತಲುಪಿದಾಗ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಜಲಾಶಯದ ಆಪರೇಷನ್, ಮೆಂಟೆನೆನ್ಸ್ ಹಾಗೂ ಸಿವಿಲ್ ವಿಭಾಗದ ಇಂಜಿನಿಯರ್​ಗಳು ಸೇರಿ ಡ್ಯಾಂನ ಗೇಟ್ ಆಪರೇಷನ್ ಚೆಕ್ ನಡೆಸುತ್ತಾರೆ. ಜಲಾಶಯ ತುಂಬಿದಾಗ ಗೇಟ್ ತೆಗೆಯಲು ಸಾಧ್ಯವಾಗುತ್ತದೆಯೇ ಎಂಬುದನ್ನು ನೋಡಲು ಗೇಟ್ ಆಪರೇಷನ್ ಅನ್ನು ಪರಿಶೀಲಿಸುತ್ತಾರೆ. ಇಂದು ಜಲಾಶಯದ ಹಿರಿಯ ಇಂಜಿನಿಯರ್​ಗಳು ಗೇಟ್ ಆಪರೇಷನ್ ಚೆಕ್ ಮಾಡಿ, ಸಂಪ್ರದಾಯದಂತೆ ಶರವಾತಿಗೆ ಪೂಜೆ ಸಲ್ಲಿಸಿದರು.

ಗೇಟ್ ಚೆಕ್ ಆಪರೇಷನ್​ಗಾಗಿ ಒಂದು ನಿಮಿಷ ನದಿಗೆ ನೀರನ್ನು ಬಿಟ್ಟರು. ಜಲಾಶಯ ಭರ್ತಿಯಾದ ಮೇಲೆಯೇ ನಾವೆಲ್ಲಾ ಬಾಗಿನ ಅರ್ಪಿಸುವುದು. ಈ ಬಾರಿ ಡ್ಯಾಂ ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಜಲಾಶಯದ ಮುಖ್ಯ ಇಂಜಿನಿಯರ್ ಹೆಚ್.ಆರ್. ರಮೇಶ್ ದೂರವಾಣಿಯಲ್ಲಿ ತಿಳಿಸಿದ್ದಾರೆ.

ಲಿಂಗನಮಕ್ಕಿ ಜಲಾಶಯದಲ್ಲಿ ಒಟ್ಟು ನಾಲ್ಕು ವಿದ್ಯುತ್ ಘಟಕಗಳಿಂದ ಪ್ರತಿ ವರ್ಷ 1469.20 ಯೂನಿಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಅತಿ ಕಡಿಮೆ ದರಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡುವ ಜಲ ವಿದ್ಯುತ್ ಘಟಕ ಇದಾಗಿದೆ.

ತುಂಗಭದ್ರಾ ಜಲಾಶಯವು ಬಹುತೇಕ ಭರ್ತಿ: ತುಂಗಾಭದ್ರಾ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇದೆ. ಈಗಾಗಲೇ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರವಹಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಗುರುವಾರ ಸಂಜೆ ಸಾಕಷ್ಟು ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಜಿಲ್ಲೆಯ ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕು ನದಿ ಭಾಗದ ಗ್ರಾಮಸ್ಥರು ನದಿಪಾತ್ರಕ್ಕೆ ತೆರಳಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆಯಿರುವ ಹಿನ್ನೆಲೆ ನೀರು ಬಿಡುಗಡೆ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಕಂಪ್ಲಿ ಮತ್ತು ಗಂಗಾವತಿ ಸಂಪರ್ಕ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯವಾಗಿ ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸಬಹುದು ಎಂದರು.

ನೂತನ ಸೇತುವೆ ನಿರ್ಮಾಣದ ಕುರಿತು ಸ್ಥಳೀಯ ಶಾಸಕರ ಜೊತೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು. ಕಂಪ್ಲಿಯಲ್ಲಿ ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟ, ವಸತಿ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ. ನೋಡೆಲ್ ಅಧಿಕಾರಿಗಳನ್ನು ನೇಮಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನದಿಪಾತ್ರದ ಬಳಿ ಪೊಲೀಸರನ್ನು ನಿಯೋಜಿಸಿದೆ. ಯಾರೂ ನದಿಪಾತ್ರಕ್ಕೆ ತೆರಳಬಾರದು. ತುರ್ತು ಸಂದರ್ಭಕ್ಕೆ ತಾಲ್ಲೂಕು ಆಡಳಿತ ಅಥವಾ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ: ನದಿ ಪಾತ್ರ, ದಂಡೆ ಮತ್ತು ನದಿಯ ಅಸುಪಾಸಿನಲ್ಲಿ ವಾಸಿಸುವ ಗ್ರಾಮಗಳ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಜಾನುವಾರುಗಳನ್ನು ಜತನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಬಳಿಕ ಕಂಪ್ಲಿ ಪಟ್ಟಣದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಗೋಖಲೆ, ತಹಶೀಲ್ದಾರ್​ ಶಿವರಾಜ್, ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ ಸೇರಿದಂತೆ ಇತರರಿದ್ದರು.

ಓದಿ: ಶಿರೂರು ಗುಡ್ಡ ಕುಸಿತ; ಇನ್ನೂ ಸಿಗದ ಮೂವರ ಸುಳಿವು - ಇಂದಿನಿಂದ ಫ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ - Shiruru Hill Collapse Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.