ಮೆಸ್‌ಗೆ ನುಗ್ಗಿ ದರೋಡೆಗೆ ಯತ್ನ; ಲೂಟಿ ಮಾಡಿದ್ದ ಬಾಟಲಿಗೆ ಹಣ ಕೊಟ್ಟು ಹೊರಟುಹೋದ ಕಳ್ಳ! - VARIETY THIEF ROBBERY - VARIETY THIEF ROBBERY
🎬 Watch Now: Feature Video
Published : Jul 27, 2024, 1:46 PM IST
ರಂಗಾರೆಡ್ಡಿ (ತೆಲಂಗಾಣ): ಜಿಲ್ಲೆಯ ಮಹೇಶ್ವರಂನಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಅಚ್ಚರಿ ಮೂಡಿಸಿದೆ. ಜುಲೈ 18 ರಂದು ಮಹೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್‌ಒ ಕಚೇರಿ ಬಳಿಯ ವಿನಾಯಕ ಮೆಸ್‌ಗೆ ಕಳ್ಳನೊಬ್ಬ ನುಗ್ಗಿದ್ದ. ಈ ಮೇನ್ ಡೋರ್ ಅನ್ನು ಮುರಿದು ಒಳಗೆ ಪ್ರವೇಶಿಸಿದ್ದ. ಶಂಕಿತ ವ್ಯಕ್ತಿ ತಡರಾತ್ರಿ ಕೌಂಟರ್‌ಗಳಲ್ಲಿ ಹಣಕ್ಕಾಗಿ ತಡಕಾಡಿದ್ದ. ನಂತರ ಇಡೀ ಮೆಸ್ ಅನ್ನು ಹುಡುಕಿದ್ರು ಸಹ ಆತನಿಗೆ ಒಂದು ನಯಾ ಪೈಸೆ ಕೂಡ ಸಿಕ್ಕಿರಲಿಲ್ಲ.
ಸಿಸಿಟಿವಿ ಕ್ಯಾಮೆರಾ ಮುಂದೆ ಬಂದು ಸನ್ನೆ ಮಾಡುವ ಮೂಲಕ ಕಳ್ಳ ತನ್ನ ಗೋಳು ಹೇಳಿಕೊಂಡಿದ್ದಾನೆ. ‘ಇಲ್ಲಿ ಒಂದು ರೂಪಾಯಿಯೂ ಇಲ್ಲ. ಇದೆಂಥ ಮೆಸ್ ಅಂತಾ ಬೈದುಕೊಂಡಿದ್ದಾನೆ. ಎಲ್ಲವನ್ನು ತಡಕಾಡಿದ ಬಳಿಕ ಬಾಯಾರಿಕೆಯಾಗುತ್ತಿದೆ ಎಂದು ಅಲ್ಲೇ ಇದ್ದ ಫ್ರಿಡ್ಜ್ನಲ್ಲಿದ್ದ ನೀರಿನ ಬಾಟಲಿ ತೆಗೆದು ನೀರು ಕುಡಿದಿದ್ದಾನೆ. ಬಳಿಕ ಅದರ ಹಣವನ್ನು ಕೊಡುವುದಾಗಿ ಹೇಳಿ ಬಾಟಲಿಯ ಹಣ 20 ರೂಪಾಯಿಯನ್ನು ಅಲ್ಲೇ ಇಟ್ಟು ಹೊರಟು ಹೋಗಿದ್ದಾನೆ.
ಮೆಸ್ನಲ್ಲಿ ಕಳ್ಳನಿಗೆ ಏನೂ ಸಿಗದಿದ್ದಾಗ ಕ್ಲೋಸ್ಡ್ ಸರ್ಕಿಟ್ ಟೆಲಿವಿಷನ್ ಕ್ಯಾಮೆರಾದತ್ತ ತಿರುಗಿ ನಿರಾಸೆಯಿಂದ ಕೈಮುಗಿದು ‘ಲೂಟಿ’ ಮಾಡಿದ್ದ ನೀರಿನ ಬಾಟಲಿಗೆ ಹಣ ಕೊಟ್ಟು ಹೊರಟು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಹೇಶ್ವರಂ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಓದಿ: ಪೊಲೀಸರ ಮೇಲೆ ದಾಳಿಗೆ ಯತ್ನ, ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಇನ್ಸ್ಪೆಕ್ಟರ್ - Shoot Out