ಮಂಡ್ಯ: ಮಡಳ್ಳಿ ಗ್ರಾಮದ ರೈತರ ಜಮೀನಿನಲ್ಲಿ 12 ಅಡಿ ಉದ್ದದ ಹೆಬ್ಬಾವು ಪತ್ತೆ
🎬 Watch Now: Feature Video
Published : Oct 27, 2024, 11:37 AM IST
ಮಂಡ್ಯ: ಹಲಗೂರು ಸಮೀಪದ ಮಡಳ್ಳಿ ಗ್ರಾಮದಲ್ಲಿ ಚಲುವರಾಜು ಎಂಬವರ ಜಮೀನಿನಲ್ಲಿ ಶನಿವಾರ 12 ಅಡಿ ಉದ್ದದ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಲಗೂರಿನ ಉರಗಪ್ರೇಮಿ ಜಗದೀಶ್ ಎಂಬವರು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದು ಉತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಈ ಕುರಿತು ದೊಡ್ಡ ಯಲಚಗೆರೆ ಗ್ರಾಮದ ನಿವಾಸಿ ನಾಗರಸ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಹೆಬ್ಬಾವು ಹಾಗೂ ನಾಗರಹಾವುಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ನಮ್ಮ ಗ್ರಾಮದ ಸಮೀಪ ಕೋಳಿ ಫಾರಂ ಇದೆ. ಇದರಿಂದಾಗಿ ಇಲ್ಲಿ ನೊಣಗಳ ಉಪಟಳವೂ ಜಾಸ್ತಿ. ಮೊರಾರ್ಜಿ ವಸತಿ ಶಾಲೆ ಇದರ ಪಕ್ಕದಲ್ಲೇ ಇದ್ದು, ಶಾಲೆಯ ಮಕ್ಕಳು ಊಟ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ" ಎಂದು ಹೇಳಿದರು.
ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೆಬ್ಬಾವು, ಕಾಳಿಂಗ ಸರ್ಪ ಸೇರಿದಂತೆ ಇತರೆ ಹಾವುಗಳ ಹೆಚ್ಚೆಚ್ಚು ಪತ್ತೆಯಾಗುತ್ತವೆ. ಇದೀಗ ಕಾಡುನಾಶ, ಆಹಾರದ ಕೊರತೆಯ ಕಾರಣ ಅವು ನಾಡಿಗೆ ಲಗ್ಗೆ ಇಡುತ್ತಿವೆ. ಅದಲ್ಲೂ ಕೋಳಿ ಫಾರಂ ಕಂಡರೆ ಅವುಗಳ ಓಡಾಟ ತುಸು ಹೆಚ್ಚೇ ಎಂದು ಜನರು ಹೇಳಿದ್ದಾರೆ.
ಇದನ್ನೂ ಓದಿ: ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವು : ವಿಡಿಯೋ - python found