ETV Bharat / state

50ನೇ ವರ್ಷದ ಕೇಕ್ ಶೋ: ಗಮನ ಸೆಳೆದ ರತನ್ ಟಾಟಾ, ಎಸ್.ಎಂ.ಕೃಷ್ಣ ಕಲಾಕೃತಿಗಳು - CAKE SHOW

ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ 50ನೇ ವರ್ಷದ ಕೇಕ್​ ಶೋ ನಡೆಯುತ್ತಿದೆ. ರತನ್​ ಟಾಟಾ, ಎಸ್.ಎಂ.ಕೃಷ್ಣ ಅವರ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿವೆ.

cake show
ಕೇಕ್ ಶೋ (ETV Bharat)
author img

By ETV Bharat Karnataka Team

Published : 5 hours ago

Updated : 4 hours ago

ಬೆಂಗಳೂರು: ನಗರದ ಪ್ಯಾಲೇಸ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಐತಿಹಾಸಿಕ 50ನೇ ವರ್ಷದ ಕೇಕ್ ಶೋ ಈ ಬಾರಿಯ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪುಟಾಣಿಗಳು, ವಯಸ್ಕರನ್ನು ಮತ್ತು ಹಿರಿಯರನ್ನು ಕೇಕ್ ಶೋ ಆಕರ್ಷಿಸಿದೆ. ಪ್ರಮುಖವಾಗಿ, ದಿವಂಗತ ರತನ್ ಟಾಟಾ ಮತ್ತು ಎಸ್.ಎಂ.ಕೃಷ್ಣ ಅವರನ್ನು ಹೋಲುವ ಕೇಕ್​ಗಳ ಮುಂದೆ ಜನರು ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಯಶಸ್ವಿ ಉದ್ಯಮಿಯಾಗಿ ಮಾನವೀಯತೆಯ ಪ್ರತಿರೂಪವಾಗಿ ಬದುಕಿದ ರತನ್ ಟಾಟಾ ಅವರ ಕಲಾಕೃತಿಯನ್ನು ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ಸಂಸ್ಥೆ ಪ್ರದರ್ಶನಕ್ಕಿಟ್ಟಿದೆ. ಈ ಕೇಕ್ 250 ಕಿಲೋ ಗ್ರಾಂ ತೂಕವಿದೆ. ಶಾಂತನು, ಮಹೇಶ್ ಮತ್ತು ರಾಹುಲ್ ಅವರ ತಂಡ 10 ದಿನಗಳಷ್ಟು ಸಮಯ ತೆಗೆದುಕೊಂಡು ಈ ಕಲಾಕೃತಿಯನ್ನು ರಚಿಸಿದ್ದಾರೆ. ಮುಖದ ವೈಶಿಷ್ಟ್ಯತೆ, ಅಭಿವ್ಯಕ್ತಿ ಮತ್ತು ನೋಟವನ್ನು ಕೇಕ್ ಮೂಲಕ ತೋರ್ಪಡಿಸಲಾಗಿದೆ. ಅವರ ವ್ಯಕ್ತಿತ್ವದ ನಿಖರ ಚಿತ್ರಣವನ್ನು ನೀಡುವ ಕೇಕ್ ಇದಾಗಿದೆ. ಎಸ್.ಎಂ.ಕೃಷ್ಣ ಮೇಜಿನ ಬಳಿ ಕುಳಿತಿರುವುದನ್ನು ಕೇಕ್ ಮೂಲಕ ಪ್ರಸ್ತುತಪಡಿಸಲಾಗಿದೆ. ಸುತ್ತಲೂ ಫೈಲ್‌ಗಳು, ಪರಿಕರಗಳು ಮತ್ತು ಭಾರತೀಯ ಧ್ವಜದ ಕೇಕ್ ಅನ್ನು ಡೆಸ್ಕ್ ಮೇಲಿಡಲಾಗಿದೆ.

ಕೇಕ್ ಶೋ ವ್ಯವಸ್ಥಾಪಕ ಗೌತಮ್ ಅಗರ್ವಾಲ್ ಹಾಗೂ ಇತರರು ಮಾತನಾಡಿದರು (ETV Bharat)

ಕೇಕ್ ಶೋ ವ್ಯವಸ್ಥಾಪಕ ಗೌತಮ್ ಅಗರ್ವಾಲ್ ಮಾತನಾಡಿ, "ಕೇಕ್​ ಶೋನಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಉದ್ಯಮಿ ರತನ್ ಟಾಟಾ, ರಾಮಮಂದಿರದ ಕೇಕ್ ಕಲಾಕೃತಿಗಳು ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಇಲ್ಲಿಯವರೆಗೆ ಸುಮಾರು 20 ಸಾವಿರ ಜನರು ಭೇಟಿ ನೀಡಿ ಪ್ರದರ್ಶನವನ್ನು ಆಸ್ವಾದಿಸಿದ್ದಾರೆ" ಎಂದು ಹೇಳಿದರು.

ಡಿಸೈನರ್ ಶೀಲಾ ದಿನಕರ್ ಮಾತನಾಡಿ, "ಇದೇ ಮೊದಲ ಬಾರಿಗೆ ಕೇಕ್​ ಶೋಗೆ ಬಂದಿದ್ದೇನೆ. ಎಸ್.ಎಂ.ಕೃಷ್ಣ ಅವರ ಕಲಾಕೃತಿ ನೋಡಿ ತುಂಬಾ ಖುಷಿಯಾಯಿತು. ಮಕ್ಕಳನ್ನು ಕರೆದುಕೊಂಡು ಎಲ್ಲರೂ ಬನ್ನಿ" ಎಂದರು.

ನಿವೃತ್ತ ಪ್ರಾಧ್ಯಾಪಕಿ ರಾಜೇಶ್ವರಿ ಮಾತನಾಡಿ, "ಕೇಕ್ ಶೋಗೆ ನಾನು ಆರಂಭದಿಂದಲೂ ಬರುತ್ತಿದ್ದೇನೆ. ಇಲ್ಲಿ ಪ್ರತಿಬಾರಿಯೂ ಯಾವುದಾದ್ರೂ ಒಂದು ಥೀಮ್​ ಮೂಲಕ ಕೇಕ್ಸ್​ ಮಾಡ್ತಾರೆ. ಈ ಬಾರಿ ಕ್ರಿಸ್​ಮಸ್​ ಟ್ರಿ ಹಾಗೂ ಅಯೋಧ್ಯೆ ರಾಮಮಂದಿರವನ್ನು ಅದ್ಭುತವಾಗಿ ಮಾಡಿದ್ದಾರೆ" ಎಂದು ಹೇಳಿದರು.

ಬಾಲಕ ಆರ್ಯ ಮಾತನಾಡಿ, "ಕೇಕ್​ ಶೋ ತುಂಬಾ ಚೆನ್ನಾಗಿದೆ. ಅಯೋಧ್ಯೆ ರಾಮಮಂದಿರದ ಕಲಾಕೃತಿ ನನಗೆ ಇಷ್ಟವಾಯಿತು" ಎಂದರು.

ಇದನ್ನೂ ಓದಿ: ಕೇಕ್ ಜಗತ್ತಿನ ಅದ್ಭುತ ಲೋಕದ ಪಯಣಕ್ಕೆ 50 ವರ್ಷಗಳ ಸಂಭ್ರಮ: ಇಂದಿನಿಂದ ಕೇಕ್ ಶೋ ಆರಂಭ - CAKE SHOW

Last Updated : 4 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.