ಪಟಾಕಿ ಕಾರ್ಖಾನೆಗೆ ಬೆಂಕಿ; ಏಳು ಮಂದಿ ಸಾವು, ಅನೇಕರಿಗೆ ಗಾಯ

🎬 Watch Now: Feature Video

thumbnail

By ETV Bharat Karnataka Team

Published : Feb 25, 2024, 4:16 PM IST

Updated : Feb 25, 2024, 6:06 PM IST

ಕೌಶಾಂಬಿ (ಉತ್ತರ ಪ್ರದೇಶ): ಜಿಲ್ಲೆಯ ಭಾರ್ವಾರಿ ಪಟ್ಟಣದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ (25 ಫೆಬ್ರವರಿ 2024) ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರೆ, ಐವರು ಸುಟ್ಟ ಗಾಯದಿಂದ ಬಳಲುತ್ತಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಸಾಕಷ್ಟು ಪ್ರಯತ್ನದ ನಂತರ ಪೊಲೀಸರು ಒಳಗಿದ್ದ ಜನರನ್ನು ಹೊರತೆಗೆದರು.  

ಕೊಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾರ್ವಾರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಖಲ್ಲಾಬಾದ್ ಪ್ರದೇಶದಲ್ಲಿ ವಸತಿ ಪ್ರದೇಶದ ಹೊರಗೆ ಪಟಾಕಿ ಕಾರ್ಖಾನೆ ಇದೆ. ಕಾರಣಾಂತರಗಳಿಂದ ಭಾನುವಾರ ಮಧ್ಯಾಹ್ನ ಇಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಾದ ನಂತರ ಜೋರಾಗಿ ಸ್ಫೋಟಗಳು ಸಂಭವಿಸಿದವು. ದಟ್ಟ ಹೊಗೆಯನ್ನು ಕಂಡು ಜನರು ಭಯಭೀತರಾಗಿದ್ದರು. ಈ ಘಟನೆ ನಡೆದಾಗ ಕಾರ್ಖಾನೆಯೊಳಗೆ ಅನೇಕರು ಇದ್ದರು. ಸ್ಥಳದಲ್ಲಿ ಜನಜಂಗುಳಿ ನೆರೆದಿತ್ತು. ಮಾಹಿತಿ ಪಡೆದು ಪೊಲೀಸರೂ ಸ್ಥಳಕ್ಕೆ ಆಗಮಿಸಿದ್ದರು. ಹಲವಾರು ಅಗ್ನಿಶಾಮಕ ವಾಹನಗಳನ್ನು ಬೆಂಕಿ ನಂದಿಸಲು ನಿರತರಾದವು. ಒಳಗೆ ಸಿಕ್ಕಿಬಿದ್ದವರನ್ನು ರಕ್ಷಿಸಲು ಪೊಲೀಸರು ಪ್ರಯತ್ನ ಆರಂಭಿಸಿದರು. ಬಹಳ ಪ್ರಯತ್ನದಿಂದ ಅನೇಕ ಜನರನ್ನು ಹೊರತೆಗೆಯಲಾಯಿತು. ಆದರೆ ಅಷ್ಟರಲ್ಲಿ 7 ಜನರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಈ ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೌಸರ್ ಅಲಿ, ಶಾಹಿದ್ ಅಲಿ, ಶಿವನಾರಾಯಣ್, ರಾಮ್ ಭವನ್ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ಎಡಿಜಿ ಪ್ರಯಾಗ್​ರಾಜ್, ಭಾನು ಭಾಸ್ಕರ್, ಐಜಿ ಪ್ರಯಾಗ್​ರಾಜ್ ಪ್ರೇಮ್ ಗೌತಮ್ ಮತ್ತು ಎಸ್ಪಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ್​ ಅವರೊಂದಿಗೆ ಘಟನಾ ಸ್ಥಳಕ್ಕೆ ತಲುಪಿದರು. ಬೆಂಕಿ ಎಷ್ಟು ಭೀಕರವಾಗಿತ್ತು ಎಂದರೆ ಒಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ದೇಹದ ಭಾಗಗಳು ಬಹಳ ದೂರದಲ್ಲಿ ಛಿದ್ರಗೊಂಡು ಬಿದ್ದಿದ್ದವು. ಬೆಂಕಿ ನಿಯಂತ್ರಿಸಲು ಸಿಎಫ್​ಒಆರ್​ಕೆ ಪಾಂಡೆ ನೇತೃತ್ವದಲ್ಲಿ ಐದು ತಂಡಗಳನ್ನು ನಿಯೋಜಿಸಲಾಗಿತ್ತು. ರಾಸಾಯನಿಕ ಬಳಸಿ ಬೆಂಕಿ ನಂದಿಸಲಾಯಿತು.

ಎಡಿಜಿ ಪ್ರಯಾಗ್‌ರಾಜ್ ಭಾನು ಭಾಸ್ಕರ್ ಮಾತನಾಡಿ, ಭಾರವರಿ ಪಟ್ಟಣದ ಖಲೀಲಾಬಾದ್‌ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಭಾರೀ ಸ್ಫೋಟ ಸಂಭವಿಸಿದೆ. ಅನೇಕ ಜನರು ಒಳಗೆ ಸಿಲುಕಿಕೊಂಡಿದ್ದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸಾಕಷ್ಟು ಪ್ರಯತ್ನದ ನಂತರ ಒಳಗೆ ಸಿಲುಕಿದ್ದ ಜನರನ್ನು ಹೊರ ತೆಗೆಯಲಾಯಿತು. ಈ ಬೆಂಕಿಯಲ್ಲಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಇನ್ನು, ಎಂಟು ಮಂದಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ ಅಂತಾ ತಿಳಿಸಿದರು. 

ಓದಿ: ₹35 ಕಳ್ಳತನ: ಶಾಲೆಯ ಮಕ್ಕಳಿಂದ ದುರ್ಗಾ ದೇವಿ ಮುಂದೆ 'ಕದ್ದಿಲ್ಲ' ಎಂದು ಆಣೆ ಪಡೆದ ಶಿಕ್ಷಕಿ!

Last Updated : Feb 25, 2024, 6:06 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.