ಬಂಡೀಪುರದಲ್ಲಿ ಆನೆ ಮೇಲೆ ದಾಳಿಗೆ ವಿಫಲ ಯತ್ನ; ಕೆ.ಗುಡಿಯಲ್ಲಿ ಬಿಸಿಲಿಗೆ ಮೈಯೊಡ್ಡಿದ ಹುಲಿ- ವಿಡಿಯೋ ನೋಡಿ - TIGER ATTACKS ELEPHANT
🎬 Watch Now: Feature Video
Published : Jan 13, 2025, 12:40 PM IST
ಚಾಮರಾಜನಗರ: ಹುಲಿ ಕೆಲವೊಮ್ಮೆ ತನಗಿಂತ ಬಲಿಷ್ಠ ಪ್ರಾಣಿ ಆನೆಯನ್ನೇ ಬೇಟೆಯಾಡುತ್ತದೆ. ಅದರಂತೆ, ಗುಂಪಿನಲ್ಲಿ ಮೇಯುತ್ತಿದ್ದ ಆನೆಯ ಮೇಲೆ ಹುಲಿ ದಾಳಿ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ. ಈ ದೃಶ್ಯವನ್ನು ಸಫಾರಿಗೆ ತರಳಿದ್ದ ಪ್ರವಾಸಿಗರು ಕಂಡು ಥ್ರಿಲ್ ಆದರು.
ತಮ್ಮ ಪಾಡಿಗೆ ಮೇಯುತ್ತಿದ್ದ ಆನೆಗಳ ಹಿಂಡಿನ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿದ್ದ ಹುಲಿ, ಆನೆಯ ಕಾಲಿನ ಸಮೀಪ ಎರಗಿದೆ. ಇದರಿಂದ ತಕ್ಷಣ ಎಚ್ಚೆತ್ತ ಆನೆಗಳ ಹಿಂಡು ಘೀಳಿಟ್ಟು ಹುಲಿಯನ್ನು ಹಿಮ್ಮೆಟ್ಟಿಸಿದೆ.
ಹುಲಿಯನ್ನು ಕಂಡ ಪ್ರವಾಸಿಗರು ರೋಮಾಂಚನಗೊಂಡರು. ಬೇಟೆ ಯತ್ನದ ವಿಡಿಯೋವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೆಲ ದಿನಗಳ ಹಿಂದೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಹುಲಿಯೊಂದು ಆನೆ ಮರಿಯನ್ನು ಬೇಟೆಯಾಡಿ ಕೊಂದು ಹಾಕಿತ್ತು.
ಬಿಸಿಲಿಗೆ ಮೈಯೊಡ್ಡಿದ ಹುಲಿರಾಯ: ಚಾಮರಾಜನಗರ ತಾಲೂಕಿನ ಕೆ.ಗುಡಿ ಸಫಾರಿಯಲ್ಲಿ ಪ್ರವಾಸಿಗರಿಗೆ ಇಂದು ಸೂಪರ್ ಮಂಡೇ ಆಗಿದ್ದು, ಹುಲಿ ದರ್ಶನ ಕೊಟ್ಟಿದೆ. ಚುಮು-ಚುಮು ಚಳಿ ನಡುವೆ ಬಿಸಿಲಿಗೆ ಮೈಯೊಡ್ಡಿದ ಹುಲಿಯನ್ನು ಕಂಡು ಪ್ರವಾಸಿಗರು ಪುಳಕಗೊಂಡರು.
ಇದನ್ನೂ ಓದಿ: ರೈಲ್ವೆ ಬ್ಯಾರಿಕೇಡ್ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಕಾಡಾನೆ; ಜೆಸಿಬಿ ಸಹಾಯದಿಂದ ರಕ್ಷಣೆ- ವಿಡಿಯೋ