ಮಹಾಕುಂಭ ನಗರ(ಪ್ರಯಾಗ್‌ರಾಜ್, ಯುಪಿ): ಮಕರ ಸಂಕ್ರಾಂತಿಯ ಪುಣ್ಯದಿನವಾದ ಇಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ 1.38 ಕೋಟಿ ಭಕ್ತರು, ಸಾಧು-ಸಂತರು ಪುಣ್ಯಸ್ನಾನ ಮಾಡಿದರು. ಶ್ರೀ ಪಂಚಾಯತಿ ಅಖಾರ ಮಹಾನಿರ್ವಾಣಿ ಮತ್ತು ಶ್ರೀ ಶಂಭು ಪಂಚಾಯತಿ ಅಟಲ್ ಅಖಾರದ ಸದಸ್ಯರು ಮೊದಲು ಸ್ನಾನ ಮಾಡಿದರು. ಮಕರ ಸಂಕ್ರಾಂತಿಯ ಇಂದಿನ ಶುಭ ಸಂದರ್ಭದಲ್ಲಿ ಮಹಾಕುಂಭದ ಮೊದಲ ಅಮೃತ ಸ್ನಾನದ ನಿರಂಜನಿ ಅಖಾರದ ಮೆರವಣಿಗೆಗೆ ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಶಾನಂದ ಗಿರಿ ಚಾಲನೆ ನೀಡಿದರು.
ಮೊದಲ 'ಅಮೃತ ಸ್ನಾನ'ವು ಹಲವು ರೀತಿಯಲ್ಲಿ ವಿಶೇಷವಾಗಿದೆ. 'ಪುಷ್ಯ ಪೂರ್ಣಿಮಾ' ಪ್ರಯುಕ್ತ ಸಂಗಮ ಪ್ರದೇಶದಲ್ಲಿ ಸೋಮವಾರ ಮೊದಲ ಪ್ರಮುಖ ಸ್ನಾನದ ನಂತರ ಈ ಅಮೃತ ಸ್ನಾನ ನಡೆದಿದೆ. ಮಹಾಕುಂಭದಲ್ಲಿ ವಿವಿಧ ಪಂಗಡಗಳ ಹದಿಮೂರು ಅಖಾರಗಳು ಭಾಗವಹಿಸುತ್ತಿವೆ.
#WATCH | ANI drone camera captures a bird's eye view of the first 'Amrit Snan' during the ongoing #MahakumbhMela2025 in Prayagraj, UP pic.twitter.com/7AUug82yhl
— ANI (@ANI) January 14, 2025
ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಗೆ ಒತ್ತು ನೀಡುವ ಮೂಲಕ ಹೆಸರುವಾಸಿಯಾದ ನಿರಂಜನಿ ಅಖಾರಾ ಈ ಪವಿತ್ರ ಕೂಟದಲ್ಲಿ ಭಾಗವಹಿಸುವ ಮಹತ್ವದ ಅಖಾರಾಗಳಲ್ಲಿ ಒಬ್ಬರು. ಇವರ ಬೋಧನೆಗಳು ಆಂತರಿಕ ಅನ್ವೇಷಣೆಯ ಪರಿವರ್ತಕ ಶಕ್ತಿಯ ಮೇಲೆ ಕೇಂದ್ರೀಕರಿಸುತ್ತವೆ. ಮತ್ತು ಇದನ್ನು ಅಭ್ಯಾಸ ಮಾಡುವವರಿಗೆ ಆಧ್ಯಾತ್ಮಿಕ ಜಾಗೃತಿಯತ್ತ ಮಾರ್ಗದರ್ಶನ ನೀಡುತ್ತದೆ.
#MahaKumbhMela2025 | Prayagraj: More than 1 crore devotees have taken a holy dip till 8:30 am today.
— ANI (@ANI) January 14, 2025
Source: Information Department, Government of Uttar Pradesh pic.twitter.com/g5DywGR52H
ಮೈ ಕೊರೆಯುವ ಚಳಿಯಲ್ಲೂ ಸ್ನಾನಕ್ಕೆ ತೆರಳುವ ವೇಳೆ ಭಕ್ತರು 'ಹರ ಹರ ಮಹಾದೇವ್', 'ಜೈ ಶ್ರೀ ರಾಮ್' ಮತ್ತು 'ಜೈ ಗಂಗಾ ಮೈಯ್ಯ' ಎಂಬೆಲ್ಲಾ ಘೋಷಣೆಗಳನ್ನು ಮೊಳಗಿಸಿದರು.
ಮಕರ ಸಂಕ್ರಾಂತಿ ಮತ್ತು ಬಸಂತ್ ಪಂಚಮಿಯಂದು ಸನಾತನ ಧರ್ಮದ 13 ಅಖಾರಗಳ 'ಅಮೃತ ಸ್ನಾನ'ದ ದಿನಾಂಕ ಹಾಗೂ ಸಮಯದ ಕುರಿತು ಮಹಾ ಕುಂಭಮೇಳದ ಆಡಳಿತ ಆದೇಶ ಹೊರಡಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ತಿಳಿಸಿದೆ.
ಅಯೋಧ್ಯೆಯಲ್ಲಿ ಭಗವಾನ್ ರಾಮ್‌ಲಲ್ಲಾನ ಮಹಾಪ್ರಾಣ ಪ್ರತಿಷ್ಠಾಪನೆಯ ನಂತರ 'ಅಮೃತ ಸ್ನಾನ'ವು ಮೊದಲ ಮಹಾ ಸ್ನಾನವಾಗಲಿದೆ ಎಂದು ಪ್ರಯಾಗ್‌ರಾಜ್‌ನ ರಾಮ್ ನಾಮ್ ಬ್ಯಾಂಕ್ ಸಂಚಾಲಕ ಅಶುತೋಷ್ ವರ್ಷ್ನಿ ಹೇಳಿದ್ದಾರೆ.