iPhone 17 Series Design Leaked : ಆಪಲ್ ತನ್ನ ಐಫೋನ್ 17 ಸೀರಿಸ್ ಫೋನ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆಯಿದೆ. ಈ ಸೀರಿಸ್ ಬಿಡುಗಡೆಯಾಗಲು ಇನ್ನೂ ಹಲವು ತಿಂಗಳುಗಳು ಬಾಕಿ ಇವೆ. ಆದರೂ ಇವುಗಳ ವಿವರ ಈಗಾಗಲೇ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ಸೀರಿಸ್ನ ಎರಡು ಮಾದರಿಗಳಾದ 'ಐಫೋನ್ 17' ಮತ್ತು 'ಐಫೋನ್ 17 ಪ್ರೊ' ನ ರೆಂಡರ್‌ಗಳು ಪ್ರತ್ಯೇಕವಾಗಿ ಲೀಕ್ ಆಗಿವೆ.
ಈ ಐಫೋನ್‌ಗಳು ರಿಯರ್ ಪ್ಯಾನೆಲ್ನಲ್ಲಿ ಅಡ್ಡಲಾಗಿ ವಿಸ್ತರಿಸುವ ಕ್ಯಾಮರಾ ಬಾರ್ ಅನ್ನು ಒಳಗೊಂಡಿರುತ್ತವಂತೆ ಕಾಣುತ್ತದೆ. ಲೀಕ್ ಆದ ರೆಂಡರ್ವೊಂದರಲ್ಲಿ ಐಫೋನ್ 17 ಅನ್ನು ಎರಡು ಅಡ್ಡಲಾಗಿ ಜೋಡಿಸಲಾದ ರಿಯರ್ ಕ್ಯಾಮರಾಗಳೊಂದಿಗೆ ತೋರಿಸುತ್ತದೆ. ಆದರೂ ಸೋರಿಕೆಯಾದ ಮತ್ತೊಂದು ರೆಂಡರ್ 'ಪ್ರೊ' ಮಾದರಿಯು ಅದರ ಹಿಂದಿನ 'ಐಫೋನ್ 16 ಪ್ರೊ' ನಂತೆಯೇ ಕ್ಯಾಮರಾ ವಿನ್ಯಾಸವನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ.
ಐಫೋನ್ 17, ಐಫೋನ್ 17 ಪ್ರೊ ಡಿಸೈನ್ (ಲೀಕ್) : ಪ್ರಮಾಣಿತ 'ಐಫೋನ್ 17' ಮಾದರಿಯ ರೆಂಡರ್ ಅನ್ನು @MajinBuOfficial ಬಳಕೆದಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ತೋರಿಸಿರುವ ಚಿತ್ರವನ್ನು ನೋಡಿದ್ರೆ, ಈ ಫೋನ್ ರೀಡಿಸೈನ್ಡ್ ರಿಯರ್ ಕ್ಯಾಮರಾ ವಿನ್ಯಾಸದೊಂದಿಗೆ ಬರಬಹುದು ಎಂದು ತೋರುತ್ತದೆ. ಕಳೆದ ವರ್ಷ ಆಪಲ್ ಪ್ರಿವಿಯಸ್ ಮಾಡಲ್ಸ್ನಲ್ಲಿ ನೀಡಿದ್ದ ವರ್ಟಿಕಲ್ ಕ್ಯಾಮರಾ ಲೇಔಟ್ ಬದಲಾಗಿ ಲಂಬ ಕ್ಯಾಮರಾ ಲೇಔಟ್ನಲ್ಲಿ 'ಐಫೋನ್ 16' ಮತ್ತು 'ಐಫೋನ್ 16 ಪ್ಲಸ್' ಮಾಡೆಲ್ಸ್ ಅನ್ನು ಪರಿಚಯಿಸಿದೆ.
According to the information I've managed to obtain, there is a version of the iPhone 17 design that mainly changed the camera layout compared to the previous version.
— Majin Bu (@MajinBuOfficial) February 13, 2025
It is assumed that the camera module of the base version is wider than that of the Air version with a single… pic.twitter.com/Egl2rw2iDl
ಈಗ ಕಂಪನಿ ಐಫೋನ್ 17 ನಲ್ಲಿ ಪ್ರೈಮರಿ ಮತ್ತು ಅಲ್ಟ್ರಾವೈಡ್ ಕ್ಯಾಮರಾಗಳನ್ನು ಎರಡು ಬದಿಯಲ್ಲಿ ವಿಸ್ತರಿಸಿರುವ ಕ್ಯಾಮರಾ ಬಾರ್‌ನಲ್ಲಿ ಅಡ್ಡಲಾಗಿ ಜೋಡಿಸಿರುವಂತೆ ಈ ಹೊಸ ರೆಂಡರ್ ಸೂಚಿಸುತ್ತದೆ. ನಾವು ಬಲಭಾಗದಲ್ಲಿ LED ಫ್ಲ್ಯಾಷ್ ಅನ್ನು ಸಹ ನೋಡಬಹುದು. ಈ ರೆಂಡರ್‌ನಲ್ಲಿ ಕ್ಯಾಮರಾ ಬಾರ್ ಡಾರ್ಕ್ ಕಲರ್ನಲ್ಲಿ ಗೋಚರಿಸುತ್ತದೆ. ಐಫೋನ್ ಮಾತ್ರ ವೈಟ್ ಕಲರ್ನಲ್ಲಿದೆ. ಇದರರ್ಥ 'ಐಫೋನ್ 17' ಮಾದರಿಯ ಎಲ್ಲಾ ಕಲರ್ ಆಪ್ಷನ್ಗಳಲ್ಲಿ ಕ್ಯಾಮರಾ ಬಾರ್ ಒಂದೇ ಬಣ್ಣದ್ದಾಗಿರುವಂತೆ ಕಂಡುಬರುತ್ತದೆ.
ಮತ್ತೊಂದೆಡೆ, 'ಐಫೋನ್ 17 ಪ್ರೊ' ಮಾಡೆಲ್ಗಳ ಬಗ್ಗೆಯೂ ವದಂತಿಗಳು ಹರಡುತ್ತಿವೆ. ಈ ವದಂತಿಯ 'iPhone 17 Pro' ಮಾದರಿಯನ್ನು ಜಾನ್ ಪ್ರೊಸರ್ ಅವರ ಫ್ರಂಟ್‌ಪೇಜ್‌ಟೆಕ್ ಯೂಟ್ಯೂಬ್ ಚಾನಲ್‌ನ ವಿಡಿಯೋದಲ್ಲಿ ಕಾಣಬಹುದು. ಇದು 'ಐಫೋನ್ 17' ನಂತೆ ಅಡ್ಡಲಾಗಿ ವಿಸ್ತರಿಸುವ ಕ್ಯಾಮರಾ ಬಾರ್ ಅನ್ನು ಹೊಂದಿರುವಂತೆ ಕಂಡುಬಂದರೂ, ಇದು ಮೂರು ರಿಯರ್ ಕ್ಯಾಮರಾಗಳೊಂದಿಗೆ ಬಹಳ ಪರಿಚಿತ ವಿನ್ಯಾಸವನ್ನು ಹೊಂದಿದೆ. ಆದಾರೂ ಇದರ ಕ್ಯಾಮರಾ ಬಾರ್ ಐಫೋನ್ 17 ಗಿಂತ ಸ್ವಲ್ಪ ಅಗಲವಾಗಿದೆ.
ಮೂರು ರಿಯರ್ ಕ್ಯಾಮರಾಗಳನ್ನು ಅಡ್ಡಲಾಗಿ ಜೋಡಿಸಲಾದ 'iPhone 17 Pro' ಮಾದರಿಯನ್ನು ತೋರಿಸುವ ಹಿಂದಿನ ರೆಂಡರ್‌ಗಳಿಗಿಂತ ಭಿನ್ನವಾಗಿ, FrontPageTech ರೆಂಡರ್‌ಗಳು ಅದನ್ನು 'iPhone 16 Pro' ನಂತೆಯೇ ವಿನ್ಯಾಸದೊಂದಿಗೆ ತೋರಿಸುತ್ತವೆ. ಕ್ಯಾಮರಾ ಬಾರ್‌ನ ಬಲಭಾಗದ ಕೊನೆಯಲ್ಲಿ LED ಫ್ಲ್ಯಾಷ್ ಇದೆ. ಆದಾರೂ 'ಐಫೋನ್ 17' ಸಿರೀಸ್ ಬಿಡುಗಡೆಗೆ ಇನ್ನೂ ಹಲವು ತಿಂಗಳುಗಳಿವೆ ಎಂಬುದನ್ನು ಓದುಗರು ಗಮನಿಸಬೇಕು.
'ಐಫೋನ್ 16 ಪ್ಲಸ್' ಉತ್ತರಾಧಿಕಾರಿಯನ್ನು ಬದಲಿಸಲು ಆಪಲ್ ಈ ವರ್ಷ 'ಏರ್' ಮಾದರಿಯನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಆದರೂ ಈ ಬಗ್ಗೆ ಪ್ರಸ್ತುತ ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲ. ಬಿಡುಗಡೆಗೆ ಕೆಲವು ತಿಂಗಳುಗಳ ಮೊದಲು ಇದರ ಕುರಿತು ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಓದಿ: ಪ್ರೀಮಿಯಂ ಸ್ಲಿಮ್ ಡಿಸೈನ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ, ಮಿಡಲ್ ರೇಂಜ್ನಲ್ಲಿ ಇದೇ ಟಾಪ್