USA Breaks Team India Record: ಒಮಾನ್ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಮೆರಿಕ ಇತಿಹಾಸ ಸೃಷ್ಟಿಸಿದೆ. ಟೀಂ ಇಂಡಿಯಾ ಹೆಸರಲ್ಲಿದ್ದ ದೊಡ್ಡ ದಾಖಲೆಯೊಂದನ್ನು ಮುರಿದು ಹಾಕಿದೆ.
ಮಂಗಳವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ 2ರ 54ನೇ ಪಂದ್ಯದಲ್ಲಿ ಅಮೆರಿಕ ಮತ್ತು ಒಮಾನ್ ತಂಡಗಳು ಮುಖಾಮುಖಿ ಆಗಿದ್ದವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಅಮೆರಿಕ, 35.3 ಓವರ್ಗಳಿಗೆ 122 ರನ್ ಗಳಿಸಿ ಆಲೌಟ್ ಆಯಿತು. ತಂಡದ ಪರ ಮಿಲಿಂದ್ ಕುಮಾರ್ ಅಜೇಯ 47 ರನ್ ಕಲೆಹಾಕಿ ಹೈಸ್ಕೋರರ್ ಎನಿಸಿಕೊಂಡರು.
History books rewritten in Al-Amerat!
— ICC (@ICC) February 18, 2025
USA claim an ODI record in a stunning League 2 defence 👇 #OMAvUSAhttps://t.co/BJNF6rWEKG
ಒಮಾನ್ ಪರ ಶಕೀಲ್ ಅಹ್ಮದ್ 3 ವಿಕೆಟ್ ಪಡೆದರೆ, ಸಮಯ್ ಶ್ರೀವಾಸ್ತವ ಮತ್ತು ಸಿದ್ಧಾರ್ಥ್ ಬುಕ್ಕಪಟ್ಟಣಂ ತಲಾ ಎರಡು ವಿಕೆಟ್ ಉರುಳಿಸಿದರು.
ಅಮೆರಿಕ ನೀಡಿದ್ದ ಅಲ್ಪಮೊತ್ತ ಬೆನ್ನತ್ತಿದ ಒಮಾನ್ ಕಳಪೆ ಆರಂಭ ಪಡೆಯಿತು. ಹಮ್ಮದ್ ಮಿರ್ಜಾ (29) ಬಿಟ್ಟರೆ ಉಳಿದ ಬ್ಯಾಟರ್‌ಗಳು ಕನಿಷ್ಠ ಎರಡಂಕಿ ಸ್ಕೋರ್ ಗಳಿಸಲೂ ಸಾಧ್ಯವಾಗದೆ ಪೆವಿಲಿಯನ್ ದಾರಿ ಹಿಡಿದರು. ಇದರಿಂದಾಗಿ ಓಮನ್ 25.3 ಓವರ್‌ಗಳಲ್ಲಿ ಕೇವಲ 65 ರನ್‌ಗಳಿಗೆ ಸರ್ವಪತನ ಕಂಡಿತು. ಅಂತಿಮವಾಗಿ ಅಮೆರಿಕ 57 ರನ್ಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಕಡಿಮೆ ಮೊತ್ತದ ಸ್ಕೋರ್ ಡಿಫೆನ್ಸ್ ಮಾಡಿದ ತಂಡವಾಗಿ ಭಾರತದ 40 ವರ್ಷದ ವಿಶ್ವ ದಾಖಲೆ ಮುರಿಯಿತು.
ಭಾರತದ ವಿಶ್ವದಾಖಲೆ ಪುಡಿ: ಈ ಹಿಂದೆ 1985ರಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 126 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 87 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಇದರೊಂದಿಗೆ 38 ರನ್‌ಗಳ ಗೆಲುವು ಸಾಧಿಸಿ ಅತಿ ಕಡಿಮೆ ಸ್ಕೋರ್ ಅನ್ನು ಯಶಸ್ವಿಯಾಗಿ ರಕ್ಷಿಸಿಕೊಂಡು ತಂಡವಾಗಿ ಭಾರತ ವಿಶ್ವದಾಖಲೆ ಬರೆಯಿತು.
ಆ ಬಳಿಕ ಭಾರತದ ಹೆಸರಲ್ಲಿದ್ದ ಯಾವೊಂದು ತಂಡಕ್ಕೂ ಈ ದಾಖಲೆ ಮುರಿಯಲು ಸಾಧ್ಯವಾಗಿರಲಿಲ್ಲ. ಇದೀಗ 40 ವರ್ಷಗಳ ಬಳಿಕ ಅಮೆರಿಕ ಈ ಸಾಧನೆ ಮಾಡಿದೆ.
🚨 NEW RECORD ALERT 🚨#TeamUSA have made history by successfully defending the lowest total in Men’s ODIs against Oman! 👏🔥
— USA Cricket (@usacricket) February 18, 2025
Way to go, boys! 🙌#USAvOMAN | #WeAreUSACricket 🇺🇸 pic.twitter.com/dwc4U1IgvU
ಎರಡನೇ ಕನಿಷ್ಠ ಸ್ಕೋರ್ ದಾಖಲೆ: ಈ ಪಂದ್ಯದಲ್ಲಿ ಅಮೆರಿಕ ಮತ್ತು ಒಮಾನ್ ಒಟ್ಟಾಗಿ 61 ಓವರ್‌ಗಳಲ್ಲಿ 187 ರನ್‌ಗಳನ್ನು ಮಾತ್ರ ಗಳಿಸಿದವು. ಇದು ಏಕದಿನ ಪಂದ್ಯದಲ್ಲಿ ಎರಡೂ ತಂಡಗಳಿಂದ ದಾಖಲಾದ ಎರಡನೇ ಕನಿಷ್ಠ ಸ್ಕೋರ್ ಆಯಿತು. 2014ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕೇವಲ 41 ಓವರ್‌ಗಳಲ್ಲಿ 163 ರನ್‌ಗಳು ಮಾತ್ರ ದಾಖಲಾಗಿದ್ದವು. ಇದು ಏಕದಿನ ಇತಿಹಾಸದಲ್ಲಿ ಎರಡೂ ತಂಡಗಳಿಂದ ದಾಖಲಾದ ಅತ್ಯಂತ ಕನಿಷ್ಠ ಸ್ಕೋರ್ ಆಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಪ್ರಯಾಣಿಸಲಿರುವ ಮೂವರು ಭಾರತೀಯ ಕ್ರಿಕೆಟರ್ಸ್ ! ಕಾರಣವೇನು?