Watch Dog Killed by Leopard..ಧಾರವಾಡದಲ್ಲಿ ಮನೆಗೆ ಬಂದು ನಾಯಿ ಕೊಂದ ಚಿರತೆ - LEOPARD ATTACK

🎬 Watch Now: Feature Video

thumbnail

By ETV Bharat Karnataka Team

Published : Oct 21, 2024, 10:30 AM IST

ಧಾರವಾಡ: ಜಿಲ್ಲೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಮನೆಗೆ ಬಂದು ನಾಯಿಯನ್ನು ಕೊಂದು ಚಿರತೆ ಹೊತ್ತೊಯ್ದ ಘಟನೆ ಜಿಲ್ಲೆಯ ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ನಡೆದಿದೆ.

ಚಿರತೆ ನಾಯಿಯನ್ನು ಕೊಲ್ಲುವ ದೃಶ್ಯ ಮನೆ ಎದುರಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಂಗಮೇಶ ದೂಪದಾಳ ಎಂಬುವವರ ತೋಟದ ಮನೆ ಎದುರು ಬಂದಿದ್ದ ಚಿರತೆ ಸಂಗಮೇಶ ಅವರ ನಾಯಿಯನ್ನು ಕೊಂದು ಹೊತ್ತೊಯ್ದಿದೆ.

ಕಳೆದ ಹಲವು ದಿನಗಳಿಂದ ಚಿರತೆ ಬಗ್ಗೆ ಸಾರ್ವಜನಿಕರಿಗೆ ಆತಂಕ ಶುರುವಾಗಿತ್ತು. ಸ್ಥಳೀಯರು ಅರಣ್ಯ ಇಲಾಖೆಗೂ ತಿಳಿಸಿದ್ದರು. ಆದರೆ, ಚಿರತೆ ಇರುವ ಬಗ್ಗೆ ಖಚಿತವಾಗಿಲ್ಲ ಎಂದು ಅರಣ್ಯ ಇಲಾಖೆ ಹೇಳಿದ್ದರು. ಈಗ ಸಿಸಿ ಕ್ಯಾಮರಾದಲ್ಲಿ ಚಿರತೆಯ ಚಲನವಲನ ಸೆರೆಯಾಗಿದ್ದು, ಜನರಲ್ಲಿದ್ದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಕಳೆದ‌ ಕೆಲ ದಿನಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹ ಚಿರತೆ ರಸ್ತೆ ದಾಟುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾಣಿಸಿಕೊಂಡ ಚಿರತೆ - Leopard near court premises

ಇದನ್ನೂ ಓದಿ:ಹೈದರಾಬಾದ್​:​ ಮೆಟ್ರೋ ನಿಲ್ದಾಣದ ಬಳಿ ಕಾಣಿಸಿಕೊಂಡ ಚಿರತೆ, ಜನರಲ್ಲಿ ಆತಂಕ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.