ಖ್ಯಾತ ಉದ್ಯಮಿ, ಸಾಮಾಜಿಕ ಪ್ರವರ್ತಕ ರತನ್​ ಟಾಟಾ ಅವರಿಂದ ಮತ ಹಕ್ಕು ಚಲಾವಣೆ: ವಿಡಿಯೋ - Ratan Tata - RATAN TATA

🎬 Watch Now: Feature Video

thumbnail

By ETV Bharat Karnataka Team

Published : May 20, 2024, 3:41 PM IST

ಮುಂಬೈ: 2024ರ ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದೆ. 8 ರಾಜ್ಯಗಳ 49 ಲೋಕಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 36.73 ಮತದಾನವಾಗಿದೆ.

ಟಾಟಾ ಸಮೂಹದ ಮಾಜಿ ಅಧ್ಯಕ್ಷ, ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ದಕ್ಷಿಣ ಮುಂಬೈನಲ್ಲಿ ತಮ್ಮ ಮತ ಹಕ್ಕನ್ನು ಚಲಾಯಿಸಿದರು. ಜೊತೆಗೆ ಶಾಸಕ ಅಸ್ಲಂ ಶೇಖ್ ಅವರೂ ತಮ್ಮ ಮತ ಹಕ್ಕನ್ನು ಚಲಾಯಿಸಿದರು.

ಇಂದು ನಡೆಯುತ್ತಿರುವ 8 ರಾಜ್ಯಗಳ ಪೈಕಿ ಈವರೆಗೂ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಶೇಕಡಾ 27.78 ರಷ್ಟು ಜನರು ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಲಡಾಖ್​ನಲ್ಲಿ ಅತ್ಯಧಿಕ ಎಂದರೆ ಶೇ. 52.02 ಮತದಾನ ಪ್ರಮಾಣ ದಾಖಲಾಗಿದೆ.

ಮತದಾನಕ್ಕೂ ಒಂದು ದಿನ ಮುಂಚೆ ಅಂದರೆ ಮೇ 19 ರಂದು ಕೈಗಾರಿಕೋದ್ಯಮಿ ರತನ್​ ಟಾಟಾ ಅವರು ಮತದಾನ ಮಾಡಲು ಮುಂಬೈ ಜನರಲ್ಲಿ ಕೋರಿದ್ದರು. ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಜಾಗೃತಿ ಸಂದೇಶ ಹಂಚಿಕೊಂಡಿದ್ದ ಅವರು, ಮೇ 20 ರಂದು 5ನೇ ಹಂತದ ಮತದಾನ ನಡೆಯಲಿದೆ. ಮಹಾರಾಷ್ಟ್ರದ ಎಲ್ಲ ಜನರು ಜವಾಬ್ದಾರಿಯುತವಾಗಿ ಮತದಾನ ಮಾಡಿ ಎಂದು ಕರೆ ನೀಡಿದ್ದರು.

ಮುಂಬೈನ 6 ಲೋಕಸಭಾ ಸ್ಥಾನಗಳಾದ ಮುಂಬೈ ಉತ್ತರ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ, ಮುಂಬೈ ಉತ್ತರ ಸೆಂಟ್ರಲ್, ಮುಂಬೈ ದಕ್ಷಿಣ ಮತ್ತು ಮುಂಬೈ ದಕ್ಷಿಣ ಸೆಂಟ್ರಲ್​ ಸೇರಿದಂತೆ ಧುಲೆ, ದಿಂಡೋರಿ, ನಾಸಿಕ್, ಪಾಲ್ಘರ್, ಭಿವಂಡಿ, ಕಲ್ಯಾಣ್, ಥಾಣೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಇದನ್ನೂ ಓದಿ: 1 ಗಂಟೆಯವರೆಗೆ 36.73% ಮತದಾನ; ಮಹಾರಾಷ್ಟ್ರದಲ್ಲಿ ಅತಿ ಕಡಿಮೆ, ಲಡಾಖ್​ನಲ್ಲಿ ಅತಿ ಹೆಚ್ಚು - Voting Turnout

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.