ETV Bharat / state

ಮಂಡ್ಯ: ಮನೆಗೆ ನುಗ್ಗಿ ಮರ ಕತ್ತರಿಸುವ ಯಂತ್ರದಿಂದ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಕೊಂದ ದುರುಳ! ಸಿಸಿಟಿವಿ ವಿಡಿಯೋ - MANDYA MURDER CASE

ಪಾಂಡವಪುರದ ಒಂಟಿ ಮನೆಗೆ ನುಗ್ಗಿದ ದುರುಳನೊಬ್ಬ ಕಗ್ಗೊಲೆ ಮಾಡಿದ್ದಾನೆ. ಘಟನೆಯಲ್ಲಿ ಮನೆ ಮಾಲೀಕ ಭೀಕರವಾಗಿ ಕೊಲೆಗೀಡಾಗಿದ್ದರೆ, ಅವರ ಪತ್ನಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

MANDYA  TREE CUTTING MACHINE  MURDER  ಪಾಂಡವಪುರ ಒಂಟಿ ಮನೆ
ಮನೆಗೆ ಮರ ಕತ್ತರಿಸುವ ಯಂತ್ರದೊಂದಿಗೆ ಬಂದು ರಕ್ತಪಾತ ಹರಿಸಿದ ದುರುಳ! (ETV Bharat)
author img

By ETV Bharat Karnataka Team

Published : Dec 22, 2024, 10:46 AM IST

ಮಂಡ್ಯ: ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮರ ಕತ್ತರಿಸುವ ಯಂತ್ರದಿಂದ ಹತ್ಯೆಗೈದ ಭಯಾನಕ ಘಟನೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದ ಮನೆಯಲ್ಲಿ ಶನಿವಾರ ನಡೆದಿದೆ.

ಸಂಜೆ 7 ಗಂಟೆಯ ವೇಳೆಗೆ ಮರ ಕತ್ತರಿಸುವ ಯಂತ್ರದೊಂದಿಗೆ ಮನೆಗೆ ನುಗ್ಗಿದ ದುಷ್ಕರ್ಮಿ, ಮನೆ ಮಾಲೀಕ ರಮೇಶ್​ ಎಂಬವರ ಪತ್ನಿ ಯಶೋಧಮ್ಮ ಎಂಬವರ ಬಳಿ, "ನಿಮ್ಮ ಮನೆಗೆ ಮರ ಕತ್ತರಿಸುವ ಯಂತ್ರ ಬಂದಿದೆ. ನಿಮ್ಮ ಮನೆಯವರೇ ಆರ್ಡರ್ ಮಾಡಿದ್ದಾರೆ. ತೆಗೆದುಕೊಳ್ಳಿ" ಎಂದಿದ್ದಾನೆ.

ಮನೆಗೆ ನುಗ್ಗಿ ಮರ ಕತ್ತರಿಸುವ ಯಂತ್ರದಿಂದ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಕೊಂದ ದುರುಳ! ಸಿಸಿಟಿವ ದೃಶ್ಯ (ETV Bharat)

ಇದಕ್ಕೆ ಯಶೋಧಮ್ಮ, "ನಾವು ಯಾರೂ ಆರ್ಡರ್ ಮಾಡಿಲ್ಲ" ಎಂದಿದ್ದಾರೆ. ತಕ್ಷಣವೇ ಆತ, ಕತ್ತರಿಸುವ ಯಂತ್ರವನ್ನು ಆನ್ ಮಾಡಿ ಯಶೋಧಮ್ಮನ ಕುತ್ತಿಗೆಗೆ ಹಿಡಿದಿದ್ದಾನೆ. ಯಂತ್ರ ಅವರ ಕೆನ್ನೆಗೆ ತಾಗಿ, ಗಾಯಗೊಂಡು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ.

ಬಳಿಕ ಸೀದಾ ಮನೆಯೊಳಗೆ ನುಗ್ಗಿದ ಆರೋಪಿ ಮಲಗಿದ್ದ ರಮೇಶ್ ಅವರನ್ನು ನೋಡಿ ಅವರ ಕುತ್ತಿಗೆಗೂ ಯಂತ್ರ ಹಿಡಿದಿದ್ದಾನೆ. ತಕ್ಷಣ ಎಚ್ಚರಗೊಂಡ ಯಶೋಧಮ್ಮ, ರಮೇಶ್​ ಅವರಿದ್ದ ಕೊಠಡಿಯ ಬಾಗಿಲು ಹಾಕಿ‌ ಲಾಕ್​ ಮಾಡಿ ಅಕ್ಕಪಕ್ಕದವರನ್ನು ಜೋರಾಗಿ ಕೂಗಿ ಕರೆದಿದ್ದಾರೆ. ಆದರೆ ಅಷ್ಟರಲ್ಲಿ ರಮೇಶ್ ಹತ್ಯೆಯಾಗಿದ್ದರು. ನಂತರ ಸ್ಥಳಕ್ಕೆ ಬಂದ ಸ್ಥಳೀಯರು ಹಂತಕನನ್ನು ಮನೆಯ ಒಳಗೆ ಕೂಡಿ ಹಾಕಿ, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಭಯಾನಕ ಘಟನೆ ಇಡೀ ಮಂಡ್ಯ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಸ್ವಂತ ಉದ್ಯಮ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ: ಸ್ವಗ್ರಾಮಕ್ಕೆ ತೆರಳುವಾಗ ಇಡೀ ಕುಟುಂಬ ದುರಂತ ಅಂತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.