ETV Bharat / state

ಹಾವೇರಿ: ಅಮಾಯಕರೇ ಟಾರ್ಗೆಟ್! ATMನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ವಂಚಿಸುತ್ತಿದ್ದವ ಅರೆಸ್ಟ್​ - ATM MONEY FRAUD CASE

ಎಟಿಎಂ ಕೇಂದ್ರದಲ್ಲಿ ಮೋಸದಿಂದ ಎಟಿಎಂ ಕಾರ್ಡ್ ಬದಲಿಸಿ‌, ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

accused-arrested-in-atm-money-fraud-case-in-haveri
ಆರೋಪಿ, ಪೊಲೀಸರು (ETV Bharat)
author img

By ETV Bharat Karnataka Team

Published : Jan 22, 2025, 10:23 AM IST

ಹಾವೇರಿ: ಎಟಿಎಂ ಕೇಂದ್ರಕ್ಕೆ ಹಣ ಡ್ರಾ ಮಾಡಿಕೊಳ್ಳಲು ಬರುತ್ತಿದ್ದ ಅಮಾಯಕ ಜನರಿಗೆ ಮೋಸ ಮಾಡಿ, ಎಟಿಎಂ ಕಾರ್ಡ್ ಬದಲಿಸಿ‌ಕೊಂಡು ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಗ್ರಾಮದ ನಿವಾಸಿ ಕಿರಣಕುಮಾರ ಕಾಳೇಗೌಡ (32) ಎಂದು ಗುರುತಿಸಲಾಗಿದೆ. ಈತನಿಂದ 47 ಸಾವಿರ ರೂ. ನಗದು, 28 ಸಾವಿರ ಮೌಲ್ಯದ ಮೊಬೈಲ್, ವಿವಿಧ ಬ್ಯಾಂಕ್​ಗಳ 60ಕ್ಕೂ ಹೆಚ್ಚು ಎಟಿಎಂ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

accused-arrested-in-atm-money-fraud-case-in-haveri
ಆರೋಪಿಯಿಂದ ವಶಕ್ಕೆ ಪಡೆದ ಎಟಿಎಂ ಕಾರ್ಡ್​ಗಳು (ETV Bharat)

ಬದಲಿ ಎಟಿಎಂ ಕಾರ್ಡ್ ಕೊಟ್ಟು ವಂಚನೆ : ಆರೋಪಿ ಕಿರಣಕುಮಾರ ಹಣ ಡ್ರಾ ಮಾಡಿಕೊಳ್ಳುವ ನೆಪದಲ್ಲಿ ಎಟಿಎಂ ಹತ್ತಿರವೇ ನಿಲ್ಲುತ್ತಿದ್ದ. ಎಟಿಎಂಗೆ ಬರುವ ಅನಕ್ಷರಸ್ಥರು, ಅಮಾಯಕರು ಸಹಾಯ ಕೇಳಿದಾಗ ಅವರ ಎಟಿಎಂ ತೆಗೆದುಕೊಂಡು ಪಾಸ್​​ವರ್ಡ್ ಪಡೆಯುತ್ತಿದ್ದ. ಬಳಿಕ ಹಣ ಬರಲಿಲ್ಲ, ಸಮಸ್ಯೆ ಇದೆ ಎಂದು ಅವರಿಗೆ ತನ್ನ ಬಳಿಯಿರುವ ಬದಲಿ ಎಟಿಎಂ ಕಾರ್ಡ್​​ ​ಕೊಡುತ್ತಿದ್ದ. ಈ ವೇಳೆ ಪಾಸ್​ವರ್ಡ್​ ತಿಳಿದುಕೊಂಡಿರುತ್ತಿದ್ದ ಆರೋಪಿಯು ಬಳಿಕ ಬೇರೆ ಎಟಿಎಂಗಳಿಗೆ ತೆರಳಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು 2024 ಆ.6ರಂದು ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ಕಾರ್ಡ್​​ ಬದಲಾವಣೆ ಮಾಡಿ 75 ಸಾವಿರ ಕಳ್ಳತನ ಮಾಡಿದ್ದ. ಬಂಕಾಪುರ ಪಿಎಸ್ಐ ನಿಂಗರಾಜ್ ನೇತೃತ್ವದಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ. ಕಿರಣಕುಮಾರ್ ಅಂತರ್​​ಜಿಲ್ಲೆಯಲ್ಲದೆ, ಅಂತಾರಾಜ್ಯ ವಂಚಕನಾಗಿದ್ದಾನೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ ಬೆದರಿಸಿ ₹11 ಕೋಟಿ ದೋಚಿದ್ದ ಮೂವರು ಸೈಬರ್ ವಂಚಕರ ಬಂಧನ

ಪ್ರತ್ಯೇಕ ಪ್ರಕರಣ: ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಮಾಡಿದ ಖದೀಮರನ್ನು ಸೆರೆ ಹಿಡಿಯುವಲ್ಲಿ ಹಲಗೂರು ಹಾಗೂ ಕೆ.ಎಂ.ದೊಡ್ಡಿ ಠಾಣೆಗಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, 2 ಪ್ರಕರಣಗಳಲ್ಲಿ ಬಂಧಿತ ಆರೋಪಿಗಳಿಂದ ಒಟ್ಟು 42 ಲಕ್ಷ ರೂ. ಮಾಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಹಲಗೂರು ಪೊಲೀಸರಿಂದ ಕಳ್ಳನ ಬಂಧನ : ಕಳೆದ ಆಗಸ್ಟ್ 22, 2024ರಲ್ಲಿ ಮಳವಳ್ಳಿ ತಾಲೂಕು ಅಗಸನಪುರ ಗ್ರಾಮದ ಚಿಕ್ಕಬಸವಣ್ಣ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ಒಟ್ಟು 45 ಗ್ರಾಂ ಚಿನ್ನದ ಆಭರಣಗ ಹಾಗೂ 5 ಕೆ.ಜಿ. 403 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 35,000 ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ಆರೋಪಿ ಮೈಸೂರಿನ ವಿದ್ಯಾರಣ್ಯಪುರದ ಅನಂತ ಆಲಿಯಾಸ್ ಗುರುವ ಆಲಿಯಾಸ್ ಮೆಡ್ಡ ಎಂಬಾತನನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಹೀಗೂ ಮಾಡ್ತಾರೆ ಹುಷಾರ್​: ಬೆಂಗಳೂರಿನ ಟೆಕ್ಕಿಗೆ ಮೊಬೈಲ್ ಫೋನ್ ಗಿಫ್ಟ್ ಕಳುಹಿಸಿ ₹2.8 ಕೋಟಿ ವಂಚನೆ - ಸೈಬರ್ ವಂಚಕರ ಹೊಸ ವರಸೆ

ಈತ ತನ್ನ ಸಹಚರನೊಂದಿಗೆ ಸೇರಿ 5 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಲಗೂರು ಪೊಲೀಸ್ ಠಾಣೆಯಲ್ಲಿ 3, ಬೆಳಕವಾಡಿ ಠಾಣೆಯಲ್ಲಿ 1, ಕಿರುಗಾವಲು ಠಾಣೆಯಲ್ಲಿ 1 ಪ್ರಕರಣವನ್ನು ಭೇದಿಸಲಾಗಿದೆ. ಆರೋಪಿಯಿಂದ ಒಟ್ಟು 301 ಗ್ರಾಂ. ತೂಕದ ಚಿನ್ನದ ಒಡವೆಗಳು (ಒಟ್ಟು ಮೌಲ್ಯ ₹22,37,634) ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕೆ.ಎಂ.ದೊಡ್ಡಿ ಪೊಲೀಸರಿಂದ ಸರಗಳ್ಳರ ಬಂಧನ : ಕಳೆದ ಡಿ.31ರಂದು ಮದ್ದೂರು ತಾಲೂಕಿನ ಕುರಿಕೆಂಪನದೊಡ್ಡಿ ಗ್ರಾಮದ ಸವಿತಾ ಎಂಬವರು ತಮ್ಮ ಟೀ ಅಂಗಡಿಯಲ್ಲಿದ್ದಾಗ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು, ಟೀ ಕೇಳುವ ನೆಪದಲ್ಲಿ ಅವರ ಕತ್ತಿನಲ್ಲಿದ್ದ 26 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕೆ.ಎಂ. ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು, ಬೆಂಗಳೂರಿನ ಬಾರ್​ವೊಂದರಲ್ಲಿ ಸಪ್ಲೆಯರ್ ಕೆಲಸ ಮಾಡುತ್ತಿದ್ದ ಮಂಡ್ಯ ತಾಲೂಕಿನ ಮುತ್ತೇಗೆರೆ ಗ್ರಾಮದವರಾದ ಸುದೀಪ್ ಹೆಚ್.ಪಿ., ಆಟೋ ಡ್ರೈವರ್ ಆಗಿದ್ದ ಹೆಚ್.ಆ‌ರ್.ಚೇತನ, ವ್ಯವಸಾಯ ಮಾಡಿಕೊಂಡಿದ್ದ ದರ್ಶನ್ ಹೆಚ್.ಎಸ್., ಕಿರಣ್ ಕುಮಾರ್ ಹೆಚ್.ಸಿ., ಹಾಗೂ ಎಂ.ಆರ್.ಚೇತನ್ ಎಂಬವರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯ ಪ್ರಕರಣವು ಸೇರಿದಂತೆ ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮಾಂತರದಲ್ಲಿ 02, ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ 02. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ 01 ಹಾಗೂ ಮದ್ದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣದಲ್ಲಿ ಭಾಗಿಯಾಗಿದ್ದರು.

ಆರೋಪಿಗಳಿಂದ ಒಟ್ಟು ₹22,12 ಲಕ್ಷ ಮೌಲ್ಯದ 278 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳು, 20 ಗ್ರಾಂ ತೂಕದ ಬೆಳ್ಳಿಯ ಕರಡಿಗೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ಮೋಟಾ‌ರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲಗೂರು ಹಾಗೂ ಕೆ.ಎಂ. ದೊಡ್ಡಿ ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಯವರ ಯಶಸ್ವಿ ಕಾರ್ಯಾಚರಣೆಗೆ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು : ಹಣ ಡಬಲ್ ಮಾಡಿಕೊಡುವ ಆಮಿಷ, ವ್ಯಕ್ತಿಗೆ 14.31 ಲಕ್ಷ ರೂ. ವಂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.