ಬಳ್ಳಾರಿ ದಸರಾ: ಡೊಳ್ಳು ಬಾರಿಸಿ ಸಂಭ್ರಮಿಸಿದ ಮಾಜಿ ಸಚಿವ ಶ್ರೀರಾಮುಲು - SRIRAMULU BEATING DRUMS
🎬 Watch Now: Feature Video
Published : Oct 9, 2024, 11:14 AM IST
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಮದುರೈ ಗ್ರಾಮದಲ್ಲಿ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಗ್ರಾಮದ ಕೆಂಚಮಾಳೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಭಾಗವಹಿಸಿದ್ದು, ಡೊಳ್ಳು ಬಾರಿಸುವ ಮೂಲಕ ಭಕ್ತಿ ಮೆರೆದರು.
ಡೊಳ್ಳು ಬಾರಿಸುವವರಿಂದ ಡೊಳ್ಳು ಪಡೆದು ಹೆಗಲಿಗೇರಿಸಿಕೊಂಡ ಶ್ರೀರಾಮುಲು, ಅವರಂತೆಯೇ ಹಣೆಗೆ ಅರಶಿನ, ಕುಂಕುಮ ಹಚ್ಚಿಕೊಂಡು ಕೆಲ ಹೊತ್ತು ಡೊಳ್ಳು ಬಾರಿಸಿದರು. ತಾಳಕ್ಕೆ ತಕ್ಕಂತೆ ಹೆಜ್ಜೆ ಅವರ ಜೊತೆಗೆ ಹಾಕಿದರು. ಅವರ ಜೊತೆ ಡೊಳ್ಳು ಬಾರಿಸುವವರು ಹಾಗೂ ನೆರೆದಿದ್ದ ಭಕ್ತರು ಕೂಡ ಡೊಳ್ಳು ನಾದವನ್ನು ಸಂಭ್ರಮಿಸಿದರು. ಮಾಜಿ ಸಚಿವ ಬಿ. ಶ್ರೀರಾಮುಲು ಜೊತೆಗೆ ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಅವರು ಪಾಲ್ಗೊಂಡು ಡೊಳ್ಳು ಬಾರಿಸಿದರು. ಈ ಸಂದರ್ಭದಲ್ಲಿ ಮದುರೈ ಗ್ರಾಮಸ್ಥರು ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: ಚಾಮರಾಜನಗರ ಯುವ ದಸರಾಗೆ ಚಾಲನೆ ನೀಡಿದ ನಟ ನಾಗಭೂಷಣ್: 'ಇಲ್ಲೇ ಪಿಡಿಒ ಆಗಿದ್ದೆ' ಎಂದ ಟಗರುಪಲ್ಯ ನಟ