ಅಮ್ಮನ ಹುಡುಕುತ್ತಾ ಗ್ರಾಮಕ್ಕೆ ಬಂದ ಆನೆಮರಿ; ಅರಣ್ಯಾಧಿಕಾರಿಗಳಿಂದ ರಕ್ಷಣೆ - forest department
🎬 Watch Now: Feature Video
Published : Mar 7, 2024, 4:16 PM IST
ಅಂದಾಜು 3-4 ತಿಂಗಳ ಆನೆ ಮರಿಯೊಂದು ಅಮ್ಮನನ್ನು ಅರಸುತ್ತಾ ನಾಡಿಗೆ ಬಂದ ಪ್ರಸಂಗ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರಿನ ಅರೆಪಾಳ್ಯದಲ್ಲಿ ಗುರುವಾರ ಬೆಳಗ್ಗೆ 8 ಕ್ಕೆ ನಡೆದಿದೆ. ಕಳೆದ 5 ದಿನಗಳ ಹಿಂದೆ ತಮಿಳುನಾಡಿನ ಬಣ್ಣಾರಿ ಸಮೀಪ ಅನಾರೋಗ್ಯದಿಂದ ಹೆಣ್ಣಾನೆ ಅಸುನೀಗಿದೆ. ಈ ತಾಯಿ ಆನೆ ಮರಿ ಇದಾಗಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ.
ತಾಯಿ ಅರಸುತ್ತಾ ಬಂದ ಆನೆಮರಿ ಅರೆಪಾಳ್ಯ ಗ್ರಾಮದಲ್ಲಿ ಓಡಾಡಿದೆ. ಅಲ್ಲಿನ ಜನರು ಆನೆ ಮರಿ ಕಂಡು ಚಿನ್ನಾಟ ಆಡಿದ್ದಾರೆ. ಗ್ರಾಮದಲ್ಲಿ ಆನೆ ಮರಿ ಕೆಲಕಾಲ ಓಡಾಡಿದೆ. ಬಳಿಕ, ಆನೆ ಮರಿ ಗ್ರಾಮಕ್ಕೆ ಬಂದ ಕುರಿತು ಮಾಹಿತಿ ಅರಿತ ಆಸನೂರು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮರಿಯನ್ನು ರಕ್ಷಿಸಿದ್ದಾರೆ. ಬಳಿಕ ಆನೆ ಮರಿಯನ್ನು ಅರಣ್ಯ ಇಲಾಖೆ ಕಚೇರಿಗೆ ಕರೆತಂದಿದ್ದು ವೈದ್ಯರಿಂದ ಆರೈಕೆ ಮಾಡಿಸಿದ್ದಾರೆ. ಆನೆ ಮರಿ ಸುರಕ್ಷಿತವಾಗಿದೆ.
ಇನ್ನು, ಆನೆ ಮರಿಯನ್ನು ಬೇರೆ ಆನೆ ಗುಂಪಿಗೆ ಬಿಡುವುದೋ ಇಲ್ಲವೇ ಮೃಗಾಲಯಕ್ಕೆ ರವಾನೆ ಮಾಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿಲ್ಲ. ಗ್ರಾಮದಲ್ಲಿ ಆನೆ ಮರಿ ಓಡಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ವಿಡಿಯೋ: ಬಂಡೀಪುರದಲ್ಲಿ ಮರಿಗೆ ಹೊಂಚು ಹಾಕಿದ್ದ ವ್ಯಾಘ್ರನನ್ನು ಅಟ್ಟಾಡಿಸಿದ ಆನೆ