ETV Bharat / technology

ಬಾಹ್ಯಾಕಾಶದಲ್ಲಿ ಸುನೀತಾ, ಬುಚ್​: ಅವರಿಬ್ಬರನ್ನು ಆದಷ್ಟು ಬೇಗ ಕರೆತರುವಂತೆ ಮಸ್ಕ್​ ಸಹಾಯ ಕೋರಿದ ಟ್ರಂಪ್​ - BRING BACK STRANDED ASTRONAUTS

Bring Back Stranded Astronauts: ಐಎಸ್‌ಎಸ್‌ನಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ವಾಪಸಾತಿಗಾಗಿ ಡೊನಾಲ್ಡ್ ಟ್ರಂಪ್ ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರ ಸಹಾಯವನ್ನು ಕೋರಿದ್ದಾರೆ.

SPACEX  ELON MUSK DONALD TRUMP  US ASTRONAUTS  SUNITA WILLIAMS
ಅವರಿಬ್ಬರನ್ನು ಆದಷ್ಟು ಬೇಗ ಕರೆತರುವಂತೆ ಮಸ್ಕ್​ಗೆ ಸಹಾಯ ಕೋರಿದ ಟ್ರಂಪ್​ (Photo Credit: AP)
author img

By ETV Bharat Tech Team

Published : Jan 29, 2025, 4:36 PM IST

Bring Back Stranded Astronauts: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಾಹ್ಯಾಕಾಶದಲ್ಲಿ ಸಿಲುಕಿರುವ ನಾಸಾದ ಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ಟೆಕ್ ದೈತ್ಯ ಎಲಾನ್ ಮಸ್ಕ್ ಅವರ ಸಹಾಯವನ್ನು ಕೋರಿದ್ದಾರೆ ಮತ್ತು ಆ ಕೆಲಸವನ್ನು ಮಸ್ಕ್ ಅವರ ಸ್ಪೇಸ್‌ಎಕ್ಸ್‌ಗೆ ವಹಿಸಿದ್ದಾರೆ. ಇಬ್ಬರು ಪ್ರಯಾಣಿಕರು ಬಾಹ್ಯಾಕಾಶದಲ್ಲಿ ಸಿಲುಕಿಕೊಳ್ಳಲು ಜೋ ಬೈಡನ್ ಆಡಳಿತವೇ ಕಾರಣವೆಂದು ಟ್ರಂಪ್​ ಆರೋಪಿಸಿದ್ದಾರೆ.

ಈ ನಿಟ್ಟಿನಲ್ಲಿ ಎಲಾನ್ ಮಸ್ಕ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಆರಂಭಿಕ ವಾಪಸಾತಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಹಾಯವನ್ನು ಕೋರಿದ್ದಾರೆ ಮತ್ತು ಎರಡು ಬೋಯಿಂಗ್ ಸ್ಟಾರ್‌ಲೈನರ್‌ಗಳ ಸೌಲಭ್ಯವನ್ನು ಕೇಳಿದ್ದಾರೆ ಎಂದು ಮಸ್ಕ್​ ತಿಳಿಸಿದ್ದಾರೆ.

ಸುನೀತಾ ಮತ್ತು ಬುಚ್ 8 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಜೂನ್ 8, 2024 ರಂದು ಇಬ್ಬರೂ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದರು. ನಂತರ ಅವರಿಬ್ಬರು ಹಿಂತಿರುಗಲು ಸಾಧ್ಯವಾಗಲಿಲ್ಲ. ಇದನ್ನು ಮೊದಲು 10 ದಿನಗಳ ಮಿಷನ್ ಎಂದು ಪರಿಗಣಿಸಲಾಗಿತ್ತು. ಆದರೆ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ ಇಬ್ಬರೂ ಹಿಂತಿರುಗಲು ಸಾಧ್ಯವಾಗಲಿಲ್ಲ. ಈಗ ಅವರ ಮಿಷನ್​ ಒಂಭತ್ತು ತಿಂಗಳವರಿಗೆ ವೃದ್ಧಿಯಾಗಿದೆ.

ಜೋ ಬೈಡನ್ ಆಡಳಿತವು ಸುನೀತಾ ಮತ್ತು ಬುಚ್ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಇಷ್ಟು ದಿನ ಸಿಲುಕಿಸಿದ್ದು ಭಯಾನಕವಾಗಿದೆ. 'ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಇಬ್ಬರೂ ಗಗನಯಾತ್ರಿಗಳನ್ನು ಆದಷ್ಟು ಬೇಗ ಮನೆಗೆ ಕರೆತರುವಂತೆ ಅಮೆರಿಕ ಅಧ್ಯಕ್ಷರು ಸ್ಪೇಸ್‌ಎಕ್ಸ್‌ಗೆ ಕೇಳಿಕೊಂಡಿದ್ದಾರೆ. ನಾವು ಅವರಿಬ್ಬರನ್ನು ಆದಷ್ಟು ಬೇಗ ಕರೆತರುವ ಕೆಲಸ ಮಾಡುತ್ತೇವೆ' ಎಂದು ಮಸ್ಕ್ ಭರವಸೆ ನೀಡಿದ್ದಾರೆ.

ಬೈಡನ್​ ವಿರುದ್ಧ ಹರಿಹಾಯ್ದ ಟ್ರಂಪ್ ​: ಇದಕ್ಕೂ ಮೊದಲು ಟ್ರಂಪ್ ತಮ್ಮ ಸಾಮಾಜಿಕ ವೇದಿಕೆಯಲ್ಲಿ ಪೋಸ್ಟ್ ಮಾಡಿ, ಬೈಡನ್ ಆಡಳಿತದಿಂದ ಬಾಹ್ಯಾಕಾಶದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಟ್ಟ ಇಬ್ಬರು ಧೈರ್ಯಶಾಲಿ ಗಗನಯಾತ್ರಿಗಳನ್ನು ಕರೆತರಲು ನಾನು ಮಸ್ಕ್ ಅವರನ್ನು ಕೇಳಿದ್ದೇನೆ. ಅವರಿಬ್ಬರೂ ಹಲವು ತಿಂಗಳುಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಎಲಾನ್ ಮಸ್ಕ್​ ಶೀಘ್ರದಲ್ಲೇ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆಂದು ನಾನು ಭಾವಿಸುತ್ತೇವೆ ಎಂದು ಟ್ರಂಪ್​ ಹೇಳಿದ್ದಾರೆ.

ನಡೆದಿದ್ದೇನು?: ಥ್ರಸ್ಟರ್ ಅಸಮರ್ಪಕ ಕಾರ್ಯ ಮತ್ತು ಹೀಲಿಯಂ ಸೋರಿಕೆಯಿಂದಾಗಿ ನಾಸಾ ಯೋಜನೆಯನ್ನು ಬದಲಾಯಿಸಬೇಕಾಯಿತು. ಫೈನಲಿ ಸೆಪ್ಟೆಂಬರ್ 7 ರಂದು ಸ್ಟಾರ್‌ಲೈನರ್ ಕ್ಯಾಪ್ಸುಲ್ ಸುರಕ್ಷಿತವಾಗಿ ಭೂಮಿಗೆ ಮರಳಿತು. ಆದ್ರೆ ಅದರಲ್ಲಿ ಇಬ್ಬರೂ ಗಗನಯಾತ್ರಿಗಳು ಇರಲಿಲ್ಲ. ಕ್ಯಾಪ್ಸುಲ್​ ಖಾಲಿಯಾಗಿಯೇ ಭೂಮಿಗೆ ಮರಳಿತ್ತು.

ನಂತರ ಸೆಪ್ಟೆಂಬರ್‌ನಲ್ಲಿ ಸ್ಪೇಸ್‌ಎಕ್ಸ್‌ನ ನಾಲ್ಕು ಆಸನಗಳ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಅದರಲ್ಲಿ ಕೇವಲ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಲಾಗಿತ್ತು. ಕ್ರೂ ಡ್ರ್ಯಾಗನ್​ನಲ್ಲಿ ವಿಲಿಯಮ್ಸ್ ಮತ್ತು ವಿಲ್ಮೋರ್‌ಗಾಗಿ ಎರಡು ಸ್ಥಾನಗಳನ್ನು ಖಾಲಿ ಇಡಲಾಗಿತ್ತು. ಆದರೂ ಕ್ರೂ-10 ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವವರೆಗೆ ಕ್ರೂ-9 ಕ್ಯಾಪ್ಸುಲ್ ಹಿಂತಿರುಗಲು ಸಾಧ್ಯವಿಲ್ಲ. ಗಗನಯಾತ್ರಿಗಳು ಫೆಬ್ರವರಿ ಅಂತ್ಯದಲ್ಲಿ ಹಿಂತಿರುಗಬೇಕಿತ್ತು. ಆದ್ರೆ ಈ ಮಿಷನ್​ ಈಗ ಮಾರ್ಚ್ ಅಂತ್ಯದವರೆಗೆ ವೃದ್ಧಿಯಾಯಿತು.

ಓದಿ: ಬಾಹ್ಯಾಕಾಶದಲ್ಲಿ ಇಸ್ರೋ 'ಸೆಂಚುರಿ': ನ್ಯಾವಿಗೇಶನ್ ಉಪಗ್ರಹ ಉಡ್ಡಯನ ಯಶಸ್ವಿ, ಹೊಸ ಎತ್ತರಕ್ಕೇರಿದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.