Hero Karizma XMR 210 Combat Edition: ದೇಶದ ಅತಿದೊಡ್ಡ ಟೂ-ವ್ಹೀಲರ್ ತಯಾರಕರಾದ ಹೀರೋ ಮೋಟೋಕಾರ್ಪ್, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಎರಡು ಸ್ಕೂಟರ್‌ಗಳು ಮತ್ತು ಎರಡು ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಛಾಪು ಮೂಡಿಸಿತು. ಇವುಗಳ ಜೊತೆಗೆ ಕಂಪನಿಯು ಕೆಲವು ಪರಿಕಲ್ಪನಾ ವಾಹನಗಳನ್ನು ಸಹ ಪರಿಚಯಿಸಿತು. ಕಂಪನಿಯು ಈಗ ತನ್ನ ಸ್ಪೋರ್ಟ್ಸ್ ಬೈಕ್ ಹೀರೋ ಕರಿಜ್ಮಾ XMR ಕಾಂಬ್ಯಾಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸದ್ಯ ಈ ಮೋಟಾರ್‌ಸೈಕಲ್‌ನ ಟೀಸರ್ ಬಿಡುಗಡೆಯಾಗಿದೆ.
ಹೀರೋ ಕರಿಜ್ಮಾ XMR ಕಾಂಬ್ಯಾಟ್ ಎಡಿಷನ್ ಫೀಚರ್ಸ್ : ಈ ವಿಶೇಷ ಮಾದರಿಯು 'ಕಾಂಬ್ಯಾಟ್ ಎಡಿಷನ್' ಥೀಮ್ ಅನ್ನು ಆಧರಿಸಿದೆ. ಈ ಥೀಮ್ ಅನ್ನು ಮೊದಲು ಹೀರೋ ಜೂಮ್ 110 ಸ್ಕೂಟರ್‌ನೊಂದಿಗೆ ಪರಿಚಯಿಸಲಾಯಿತು. ಈಗ ಇದನ್ನು ಕಂಪನಿಯ ಮೋಟಾರ್‌ಸೈಕಲ್ ಲೈನ್ಅಪ್ನಲ್ಲಿಯೂ ಸೇರಿಸಲಾಗಿದೆ. ಹೀರೋ ಕರಿಜ್ಮಾ XMR ಕಾಂಬ್ಯಾಟ್ ಎಡಿಷನ್ನಲ್ಲಿ ಮ್ಯಾಟ್ ಶ್ಯಾಡೋ ಗ್ರೇ ಬಣ್ಣವನ್ನು ಬಳಸುತ್ತದೆ. ಇದರ ಬಾಡಿ ಪ್ಯಾನೆಲ್‌ಗಳು ವ್ಯತಿರಿಕ್ತ 'ಜೆಟ್ ಫೈಟರ್' ತರಹದ ಗ್ರಾಫಿಕ್ಸ್‌ಗಳನ್ನು ಹೊಂದಿವೆ. ಇವು Xoom 110 ಸ್ಕೂಟರ್‌ನಲ್ಲಿಯೂ ಕಂಡುಬರುತ್ತವೆ.
ಹೀರೋ ಕರಿಜ್ಮಾ XMR ಕಾಂಬ್ಯಾಟ್ ಎಡಿಷನ್ ಹಾರ್ಡ್ವೇರ್ : ಕಂಪನಿಯು ಈ ಆವೃತ್ತಿಗೆ 41 mm ಅಪ್ಸೈಡ್ ಡೌನ್ ಫ್ರಂಟ್ ಫೋರ್ಕ್‌ಗಳು, ಬಿಗ್ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು TFT ಕಲರ್ ಡಿಸ್ಪ್ಲೇ ನಂತಹ ಪಾರ್ಟ್ಗಳಿಗೆ ಗೋಲ್ಡ್ ಫಿನಿಷಿಂಗ್ ನೀಡಿದೆ. ಈಗ ಈ ಮೋಟಾರ್‌ಸೈಕಲ್‌ನ ತೂಕವನ್ನು 163.5 ಕೆಜಿಯಿಂದ 166 ಕೆಜಿಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಈ ಮಾಡೆಲ್ನಲ್ಲಿ ಶಾರ್ಪ್ ಫುಲ್-LED ಟೈಲ್ ಲ್ಯಾಂಪ್‌ಗಳ ಜೊತೆ ಫುಲ್-LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ನೀಡಿದೆ. ಇದರ ಸ್ಟ್ಯಾಂಡರ್ಡ್ ಮಾಡೆಲ್ ಡಿಸೈನ್ ಬೀಟ್ಸ್ ಸಹ ಇದರಲ್ಲಿ ಕಾಣುತ್ತವೆ.
ಹೀರೋ ಕರಿಜ್ಮಾ XMR ಕಾಂಬ್ಯಾಟ್ ಎಡಿಷನ್ ಎಂಜಿನ್ : ಹೀರೋ ಕರಿಜ್ಮಾ XMR ಕಾಂಬ್ಯಾಟ್ ಎಡಿಷನ್ 210cc, V4 ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಇದು 9,250 rpm ನಲ್ಲಿ 25.15 bhp ಪವರ್ ಮತ್ತು 7,250 rpm ನಲ್ಲಿ 20.4 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಸ್ಲಿಪ್ಪರ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.
ಹೀರೋ ಕರಿಜ್ಮಾ XMR ಕಾಂಬ್ಯಾಟ್ ಎಡಿಷನ್ ಬೆಲೆ : ಈ ಹೊಸ ಹೀರೋ ಕರಿಜ್ಮಾ XMR ಕಾಂಬ್ಯಾಟ್ ಎಡಿಷನ್ ಬೆಲೆ ಸ್ಟ್ಯಾಂಡರ್ಡ್ ಮಾಡೆಲ್ಗಿಂತ ಹೆಚ್ಚಾಗಿದೆ. ಇದರ ಪ್ರಸ್ತುತ ಬೆಲೆ ರೂ. 1.81 ಲಕ್ಷ (ಎಕ್ಸ್ ಶೋ ರೂಂ). ಹೀರೋ ಮೋಟೋಕಾರ್ಪ್ ಶೀಘ್ರದಲ್ಲೇ ತನ್ನ ಹೀರೋ ಕರಿಜ್ಮಾ XMR 250 ಅನ್ನು ಬಿಡುಗಡೆ ಮಾಡಲಿದೆ. ಇದರರ್ಥ ಈ ಕರಿಜ್ಮಾ XMR ಕಾಂಬ್ಯಾಟ್ 210cc ಮಾದರಿಯ ಕೊನೆಯ ಆವೃತ್ತಿಯಾಗಿರಬಹುದು.
ಓದಿ: ಪವರ್ಫುಲ್ ಸಿಎನ್ಜಿ ಕಮರ್ಶಿಯಲ್ ವಾಹನ ಪರಿಚಯಿಸಿದ ಮಹೀಂದ್ರಾ; 480 ಕಿ.ಮೀ ರೇಂಜ್, ಇದರ ಬೆಲೆ ಎಷ್ಟು ಗೊತ್ತಾ?