ನವದೆಹಲಿ: ಹರಿಯಾಣದ ಬಿಜೆಪಿ ಸರ್ಕಾರ ಯಮುನಾ ನದಿಯಲ್ಲಿ ವಿಷ ಬೆರೆಸುತ್ತಿದೆ ಎಂಬ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿದ್ದಕ್ಕೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ನನಗೆ ನೋಟಿಸ್ ಕಳುಹಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಆಯೋಗದ ವಿಶ್ವಾಸಾರ್ಹತೆಯನ್ನು ನಾಶ ಮಾಡಿದ್ದಾರೆ ಎಂದು" ಎಎಪಿ ಮುಖ್ಯಸ್ಥ ಆರೋಪಿಸಿದ್ದಾರೆ.
मैं जब तक ज़िंदा हूँ दिल्लीवालों को ज़हरीला पानी नहीं पीने दूँगा 🔥
— AAP (@AamAadmiParty) January 30, 2025
ये High Ammonia वाला पानी भेजकर दिल्ली के लोगों की ज़िंदगी के साथ खिलवाड़ करना चाहते हैं और मुझे धमकी दे रहे हैं कि Jail भेज देंगे।
इन्हें जो करना है कर लें, मैं जब तक ज़िंदा हूँ दिल्लीवालों को ज़हरीला पानी… pic.twitter.com/TkGEmuuSRf
ಗುರುವಾರ ಇಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ರಾಜೀವ್ಕುಮಾರ್ ಕೇಂದ್ರ ಚುನಾವಣಾ ಆಯೋಗದ ಮೇಲಿನ ವಿಶ್ವಾಸವನ್ನು ಹಾಳು ಮಾಡಿದ್ದಾರೆ. ನಿವೃತ್ತಿಯ ನಂತರ ಬಿಜೆಪಿಯಿಂದ ಮಹತ್ವದ ಹುದ್ದೆ ಪಡೆಯುವ ಬಯಕೆ ಹೊಂದಿದ್ದಾರೆ. ಹೀಗಾಗಿ, ವಿಪಕ್ಷ ನಾಯಕರ ಹೇಳಿಕೆಗಳ ವಿರುದ್ಧ ನೋಟಿಸ್ ಜಾರಿ ಮಾಡುತ್ತಿದ್ದಾರೆ" ಎಂದು ವೈಯಕ್ತಿಕ ದಾಳಿ ನಡೆಸಿದ್ದಾರೆ.
"ರಾಜೀವ್ ಅವರು ಆಯುಕ್ತರಾಗಿ ಚುನಾವಣಾ ಆಯೋಗವನ್ನು ನಾಶ ಮಾಡಿದ್ದಾರೆ. ಈ ಹಿಂದಿನ ಯಾರೊಬ್ಬರೂ ಹೀಗೆ ಮಾಡಿರಲಿಲ್ಲ. ಒಂದು ವೇಳೆ ಅವರು ರಾಜಕೀಯ ಮಾಡಲು ಬಯಸಿದಲ್ಲಿ ದೆಹಲಿಯ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಬಹುದು" ಎಂದು ಪಂಥಾಹ್ವಾನ ನೀಡಿದರು.
अपनी ही नौटंकी में फँसे हरियाणा के मुख्यमंत्री नायब सैनी‼️
— AAP (@AamAadmiParty) January 30, 2025
नायब सैनी पल्ला जाकर एक घूँट पानी नहीं पी सके और ये दिल्ली के लोगों को यही ज़हरीला पानी पिलाना चाहते हैं।@ArvindKejriwal pic.twitter.com/1uoeME1tlY
ಯಮುನಾ ನೀರು ಕುಡಿಯಲು ಸವಾಲು : ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರು ನಿನ್ನೆ ಯಮುನಾ ನದಿ ತಟದಲ್ಲಿ ನೀರು ಕುಡಿದಿದ್ದನ್ನು ಟೀಕಿಸಿದ ಕೇಜ್ರಿವಾಲ್, "ಹರಿಯಾಣ ಸಿಎಂ ನೀರು ಕುಡಿದಂತೆ ನಾಟಕವಾಡಿದರು. ಒಂದು ಗುಟುಕು ಸಹಿತ ಕುಡಿಯದೆ ಉಗಿದರು. ಅದರಲ್ಲಿ ವಿಷವಿದೆ ಎಂದು ಅವರಿಗೂ ಗೊತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್, ಹರಿಯಾಣ ಸಿಎಂ ನಯಾಬ್ ಸೈನಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನದಿ ನೀರನ್ನು ಕಳುಹಿಸುವೆ. ಅದನ್ನು ಕುಡಿಯಲಿ" ಎಂದು ಸವಾಲು ಹಾಕಿದರು.
"ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ದೆಹಲಿ ನಿವಾಸಿಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ. ಅಮೋನಿಯಾ ಮಿಶ್ರಿತ ಕಲುಷಿತ ನೀರನ್ನು ಜನರಿಗೆ ಸರಬರಾಜು ಮಾಡುತ್ತಿದ್ದಾರೆ. ನಾನು ಜೀವಂತ ಇರುವವರೆಗೂ ದೆಹಲಿ ಜನರ ರಕ್ಷಣೆ ಮಾಡುವೆ. ಅಂತಹ ನೀರನ್ನು ಕುಡಿಯಲು ಬಿಡುವುದಿಲ್ಲ. ಎರಡು ದಿನಗಳಲ್ಲಿ ನನ್ನನ್ನು ಬಂಧಿಸುವ ಸಾಧ್ಯತೆ ಇದೆ" ಎಂದು ಯಾರ ಹೆಸರನ್ನೂ ಹೇಳದೆ ಆರೋಪಿಸಿದರು.
ಕೇಜ್ರಿ ಉತ್ತರ ಸರಿಯಿಲ್ಲ - ಆಯೋಗ : ವಿಷ ಬೆರೆಸಿದ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ಸೂಚಿಸಿ ನೀಡಿದ್ದ ನೋಟಿಸ್ಗೆ ಅರವಿಂದ್ ಕೇಜ್ರಿವಾಲ್ ಸರಿಯಾದ ಉತ್ತರ ನೀಡಿಲ್ಲ ಎಂದು ಚುನಾವಣಾ ಆಯೋಗ, ಮತ್ತೊಮ್ಮೆ ಜನವರಿ 31 ರೊಳಗೆ ಸ್ಪಷ್ಟವಾಗಿ ಪ್ರತಿಕ್ರಿಯಿಸಲು ಸೂಚಿಸಿದೆ. ಇಲ್ಲವಾದಲ್ಲಿ ವಿವಾದಿತ ಹೇಳಿಕೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ತಮ್ಮ ವಿಷಕಾರಿ ಹೇಳಿಕೆಗೆ ಸ್ಪಷ್ಟನೆ ನೀಡಿ ಅರವಿಂದ್ ಕೇಜ್ರಿವಾಲ್ ಅವರು, 14 ಪುಟಗಳ ಉತ್ತರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಹರಿಯಾಣದಿಂದ ಬರುತ್ತಿರುವ ನೀರು ತೀವ್ರ ಕಲುಷಿತವಾಗಿದೆ. ಜನರು ಇದನ್ನ ಕುಡಿದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಉಲ್ಲೇಖಿಸಿದ್ದಾಗಿ ಅವರು ತಿಳಿಸಿದ್ದಾರೆ.