ETV Bharat / state

ಕ್ರಿಫ್ಟೋ ಕರೆನ್ಸಿ ಹೂಡಿಕೆ ಆಮಿಷ: 10 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ - Investment Fraud

author img

By ETV Bharat Karnataka Team

Published : Jul 25, 2024, 7:22 PM IST

ಹೂಡಿಕೆಯಲ್ಲಿ ಲಾಭದ ಆಮಿಷ ತೋರಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

fraud case
ಸಾಂದರ್ಭಿಕ ಚಿತ್ರ (ETV Bharat)

ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ವಂಚಿಸಿರುವ ಪ್ರಕರಣ ನಡೆದಿದೆ.

ದೂರಿನಲ್ಲಿ ಏನಿದೆ?: ದೂರುದಾರರು 2023ರ ನವೆಂಬರ್‌ನಲ್ಲಿ ಓಶಿಯನ್ ಫೈನಾನ್ಸ್ ಅಕಾಡೆಮಿ ಎಂಬ ಕಂಪನಿಯ ವೆಬ್‌ಸೈಟ್‌ನಲ್ಲಿ ಕ್ರಿಪ್ಟೋ ಕರೆನ್ಸಿಯ ಬಗ್ಗೆ ಆನ್‌ಲೈನ್‌ನಲ್ಲಿ ತರಬೇತಿ ಪಡೆದಿದ್ದರು. ಆಗ ಕಂಪನಿಯವರು ದೂರುದಾರರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡು Viyako.com ಎಂಬ ಕ್ರಿಪ್ಟೋ ಕರೆನ್ಸಿಯ ವೆಬ್‌ಸೈಟ್ ಎಕ್ಸ್​ಚೇಂಜ್​ ಸೆಂಟರ್ ​ಅನ್ನು ಪರಿಚಯಿಸಿದ್ದಾರೆ. ಆನಂತರ ಅಡ್ಡಿರ್ ಕಾದಿರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಆನ್‌ಲೈನ್ ಮೂಲಕ ಮೆಸೇಜ್ ಮಾಡಿ ಹಣ ಹೂಡುವಂತೆ ತಿಳಿಸಿದ್ದ. ಅದರಂತೆ, ದೂರುದಾರರು 12,500 ರೂ.ಗಳನ್ನು ಹೂಡಿಕೆ ಮಾಡಿದ್ದರು. ಅದರ ಲಾಭಾಂಶವೆಂದು 46,000 ರೂ.ಗಳನ್ನು ದೂರುದಾರರ ಖಾತೆಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತದನಂತರ ಆರೋಪಿಗಳು 2024ರ ಮೇ ತಿಂಗಳಲ್ಲಿ ಮೆಸೇಜ್ ಮಾಡಿ ಕ್ರಿಪ್ಟೋ ಕರೆನ್ಸಿಯಲ್ಲಿ ಒಳ್ಳೆಯ ಲಾಭವಿದೆ ಎಂದು ನಂಬಿಸಿ ಕಾಯಿನ್ ಖರೀದಿಸುವಂತೆ ತಿಳಿಸಿದ್ದಾರೆ. ಮೇ 13ರಂದು ಎರಡು ಕಾಯಿನ್‌ಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 10 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದರು. ಅನಂತರ ಯಾವುದೇ ಹಣ ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರತ್ಯೇಕ ಪ್ರಕರಣ; ಪಾರ್ಟ್ ಟೈಮ್ ಕೆಲಸದ ಹೆಸರಲ್ಲಿ ವಂಚನೆ: ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ಹೇಳಿ ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ, ಬಳಿಕ 3.50 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಮಡ್ಯಳಮಜಲು ನಿವಾಸಿ ಯುವತಿ ವಂಚನೆಗೊಳಗಾದವರು. ಇನ್‌ಸ್ಟಾಗ್ರಾಂ ಖಾತೆಗೆ ಪಾರ್ಟ್ ಟೈಮ್ ಜಾಬ್‌ನ ಜಾಹೀರಾತು ಬಂದಿತ್ತು. ಇದನ್ನು ಸಂಪರ್ಕಿಸಿದಾಗ ಟಾರ್ಗೆಟ್ ಕಾರ್ಪೊರೇಶನ್ ಇಂಡಿಯಾ ಕಂಪನಿಯಲ್ಲಿ ಪಾರ್ಟ್ ಟೈಮ್ ಜಾಬ್ ವರ್ಕ್ ಹೋಂ ನೀಡುವುದಾಗಿ ವಾಟ್ಸ್​ಆ್ಯಪ್​ಗೆ ಸಂದೇಶದ ಲಿಂಕ್ ಕಳುಹಿಸಲಾಗಿತ್ತು. ಅದನ್ನು ಒತ್ತಿದಾಗ ಪ್ರತಿದಿನ ಟಾರ್ಗೆಟ್ ಟಾಸ್ಕ್ ಪೂರ್ಣಗೊಳಿಸಲು ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಂತ - ಹಂತವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಹೀಗೆ, ಒಟ್ಟು 3,50,596 ರೂ.ಗಳನ್ನು ಹಣ ವರ್ಗಾವಣೆ ಮಾಡಿದ ಬಳಿಕ ತಾನು ಮೋಸ ಹೋದ ಅರಿವಾಗಿದೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್​ ಷೇರು ಮಾರುಕಟ್ಟೆ ಹೂಡಿಕೆ ಆಮಿಷ: ಮಂಗಳೂರಿನ ವ್ಯಕ್ತಿಗೆ 1.50 ಕೋಟಿ ವಂಚನೆ - Online Stock Market Fraud

ETV Bharat Logo

Copyright © 2024 Ushodaya Enterprises Pvt. Ltd., All Rights Reserved.