ETV Bharat / state

ಎಚ್​ಎಂಪಿವಿ ಸೋಂಕು: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ - DOS AND DONT TO PROTECT FROM HMPV

ಎಚ್​ಎಂಪಿವಿ ಸೋಂಕಿನ ಬಗ್ಗೆ ಯಾವುದೇ ಭಯ ಬೇಡ. ಆದರೆ ಮುಂಜಾಗ್ರತೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

Karnataka Health and Family Welfare Dept Release dos and Dont to protect from HMPV
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jan 6, 2025, 2:28 PM IST

ಬೆಂಗಳೂರು: ಎಚ್‌ಎಂಪಿವಿ ಸೋಂಕಿನ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದಲ್ಲಿ ಎಚ್​​ಎಂಪಿವಿ ಕುರಿತು ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ, ಎನ್​ಸಿಡಿಸಿ ಜೊತೆ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದೆ. ಚಳಿಗಾಲದ ಇತರೆ ಶ್ವಾಸಕೋಶ ಸೋಂಕಿನ ರೀತಿಯಲ್ಲಿಯೇ ಶೀತ ಮತ್ತು ಜ್ವರದ ಲಕ್ಷಣವನ್ನು ಎಚ್​ಎಂಪಿವಿ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.

Karnataka Health and Family Welfare Dept Release dos and Dont to protect from HMPV
ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆ (ಈಟಿವಿ ಭಾರತ್​)

ಏನು ಮಾಡಬೇಕು?:

  • ಮಾಸ್ಕ್​ ಧರಿಸಿ, ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್​ ಬಳಕೆ ಮಾಡಿ.
  • ಪದೇ ಪದೇ ಕೈಯನ್ನು ಸೋಪ್​ನಿಂದ ಅಥವಾ ಆಲ್ಕೋಹಾಲ್​ ಸ್ಯಾನಿಟೈಸರ್​ನಿಂದ ತೊಳೆಯಿರಿ.
  • ಜನನಿಬಿಡ ಪ್ರದೇಶದಿಂದ ದೂರವಿರಿ.
  • ನಿಮಗೆ ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದರೆ, ಜನನಿಬಿಡ ಪ್ರದೇಶದಿಂದ ದೂರವಿರಿ.
  • ನಿಮಗೆ ಹುಷಾರಿಲ್ಲದಿದ್ದರೆ, ಮನೆಯಲ್ಲಿ ಇರಿ ಮತ್ತು ಇತರರೊಂದಿಗೆ ಸೀಮಿತ ಸಂಪರ್ಕ ಸಾಧಿಸಿ.
  • ಸಾಧ್ಯವಾದಷ್ಟು ನೀರು ಮತ್ತು ಪೋಷಕಾಂಶಯುಕ್ತ ಆಹಾರ ಸೇವಿಸಿ.

ಇದನ್ನು ಮಾಡಬೇಡಿ:

  • ಒಮ್ಮೆ ಬಳಸಿದ ಕರವಸ್ತ್ರ ಮತ್ತು ಟಿಶ್ಯೂ ಮರುಬಳಕೆ ಬೇಡ.
  • ಅನಾರೋಗ್ಯಕ್ಕೆ ಒಳಗಾದ ನಿಮ್ಮ ಹತ್ತಿರದವರ ಟವೆಲ್​, ಸೇರಿದಂತೆ ಇತರೆ ವಸ್ತುಗಳ ಬಳಕೆ ಬೇಡ.
  • ಪದೇ ಪದೇ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ.
  • ಸಾರ್ವಜನಿಕ ಸ್ಥಳದಲ್ಲಿ ಉಗಿಯಬೇಡಿ.
  • ವೈದ್ಯರ ಸಂಪರ್ಕಕ್ಕೆ ಒಳಗಾಗದೇ ಸ್ವಯಂ ಚಿಕಿತ್ಸೆ ಬೇಡ.

ಇದನ್ನೂ ಓದಿ: ಕರ್ನಾಟಕದಲ್ಲಿ 2 ಹೆಚ್‌ಎಂಪಿವಿ ಸೋಂಕಿತ ಪ್ರಕರಣ ಪತ್ತೆ; ಮಧ್ಯಾಹ್ನ ಆರೋಗ್ಯ ಇಲಾಖೆ ಸಭೆ

ಈ ಸೂಚನೆಗಳನ್ನು ಪಾಲಿಸಿ ಎಂದ ಆರೋಗ್ಯ ಸಚಿವಾಲಯ: ICMR ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (IDSP) ನೆಟ್‌ವರ್ಕ್‌ನಿಂದ ಅಸ್ತಿತ್ವದಲ್ಲಿರುವ ಡೇಟಾದ ಪ್ರಕಾರ, ದೇಶದಲ್ಲಿ ಇನ್ಫ್ಲುಯೆನ್ಸ್​​ ತರಹದ ಅನಾರೋಗ್ಯ (ILI) ಅಥವಾ ತೀವ್ರ ಉಸಿರಾಟದ ಕಾಯಿಲೆ (SARI) ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಹೆಚ್ಚಳ ಕಂಡುಬಂದಿಲ್ಲ. ಪೀಡಿತ ರೋಗಿಗಳಲ್ಲಿ ಯಾರೂ ಅಂತಾರಾಷ್ಟ್ರೀಯ ಟ್ರಾವೆಲ್​ ಹಿಸ್ಟರಿ ಹೊಂದಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.

HMPV ವೈರಸ್ ಎಂದರೇನು?: 2001ರಲ್ಲಿ HMPV ವೈರಸ್​ ಮೊದಲು ನೆದರ್‌ಲ್ಯಾಂಡ್ಸ್‌ನಲ್ಲಿ ಪತ್ತೆಯಾಗಿದೆ. ಪ್ರಾಥಮಿಕವಾಗಿ ಉಸಿರಾಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ವೈರಸ್ ಎಲ್ಲಾ ವಯಸ್ಸಿನ ಜನರಿಗೆ ಸೋಂಕು ತಗುಲಬಹುದಾಗಿದೆ. ಆದರೆ, ಚಿಕ್ಕ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ. ರೋಗಲಕ್ಷಣಗಳೆಂದ್ರೆ ಕೆಮ್ಮು, ಜ್ವರ, ಮೂಗಿನ ದಟ್ಟಣೆ ಹಾಗೂ ಉಸಿರಾಟದ ತೊಂದರೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ತೊಂದರೆಗಳು ಉಂಟಾಗುತ್ತದೆ. ಸಾಮಾನ್ಯವಾಗಿ 3ರಿಂದ 6ದಿನಗಳ ಒಳಗಾಗಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.