ಬೆಂಗಳೂರು : ಆಭರಣ ಪ್ರಿಯರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿರುವುದು, ಮದುವೆ ಸಮಾರಂಭದ ಸಿದ್ಧತೆಯಲ್ಲಿರುವವರಿಗೆ ಸಂತಸ ಉಂಟಾಗಿದೆ. ನಗರದಲ್ಲಿಂದು 24-ಕ್ಯಾರೆಟ್ ಚಿನ್ನದ ದರ ರೂ. 10 ಗ್ರಾಂಗೆ 14,70 ರೂ. ಇಳಿಕೆಯಾಗಿ 77,290ಕ್ಕೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,350 ರೂ. ಕಡಿಮೆಯಾಗಿ ₹ 70,750ಕ್ಕೆ ಮಾರಾಟವಾಗುತ್ತಿದೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ದರ ರೂ. 57,970 ರಷ್ಟಿದೆ.
ಬೆಂಗಳೂರಿನಲ್ಲಿ 24K/100 ಗ್ರಾಂ ಚಿನ್ನದ ದರ 14,700ರಷ್ಟು ಇಳಿಕೆಯಾಗಿದೆ. ಯುಎಸ್ ಡಾಲರ್ ರೂಪಾಯಿ ಮುಂದೆ ಬಲ ಪಡೆಯುತ್ತಲೇ ಇದೆ. ಅಧ್ಯಕ್ಷ ಟ್ರಂಪ್ ಆಡಳಿತದಲ್ಲಿ ಪ್ರಮುಖ ನೀತಿ ಬದಲಾವಣೆಗಳ ನಿರೀಕ್ಷೆಗಳ ನಡುವೆ ಸುಮಾರು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಡಾಲರ್ ಏರಿದೆ.
ಚಿನ್ನದ ಬೆಲೆಯಲ್ಲಿನ ಈ ಕುಸಿತವು ಇದಕ್ಕಾಗಿ ಕಾಯುತ್ತಿದ್ದ ಖರೀದಿದಾರರಿಗೆ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ. ಯುಎಸ್‌ನಿಂದ ಪ್ರಮುಖ ಆರ್ಥಿಕ ಸೂಚ್ಯಂಕಗಳ ನಿರೀಕ್ಷಿತ ಬಿಡುಗಡೆ ಮತ್ತು ಫೆಡರಲ್ ರಿಸರ್ವ್‌ನ ಮುಂದಿನ ಕ್ರಮವು ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ.
ನವದೆಹಲಿಯಲ್ಲಿ ಎಷ್ಟಿದೆ ಚಿನ್ನದ ದರ ? ದುರ್ಬಲ ಜಾಗತಿಕ ಸೂಚನೆಗಳ ನಡುವೆ ಭವಿಷ್ಯದ ವಹಿವಾಟಿನಲ್ಲಿ ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ 282 ರೂ. ಕಡಿಮೆಯಾಗಿ 75,069 ರೂ. ಗೆ ತಲುಪಿದೆ.
ದುರ್ಬಲ ಜಾಗತಿಕ ಸೂಚ್ಯಂಕಗಳು ಚಿನ್ನದ ಬೆಲೆ ಕುಸಿತಕ್ಕೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ. ಜಾಗತಿಕವಾಗಿ, ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್‌ಗೆ ಶೇಕಡಾ 0.18 ರಷ್ಟು ಕಡಿಮೆಯಾಗಿ USD 2,613.10 ಕ್ಕೆ ತಲುಪಿದೆ.
ಚಿನ್ನದ ಬೆಲೆ ಏಕೆ ಕುಸಿಯುತ್ತಿದೆ? ಚಿನ್ನವು ಇತ್ತೀಚೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗಮನಾರ್ಹ ಚಂಚಲತೆಯನ್ನು ಅನುಭವಿಸಿದೆ. ಹಬ್ಬದ ಋತುವಿನ ಆರಂಭದಲ್ಲಿ ಭಾರತದಲ್ಲಿ ಚಿನ್ನದ ಬೆಲೆಗಳು ತೀವ್ರ ಏರಿಕೆ ಕಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯು ಏಕೀಕರಣಗೊಳ್ಳುತ್ತಿದೆ.
ಆದಾಗ್ಯೂ, ಮಾರುಕಟ್ಟೆ ವಿಶ್ಲೇಷಕರು ಇದು ಅಲ್ಪಾವಧಿಯ ಏರಿಳಿತವಾಗಿರಬಹುದು ಎಂದು ನಂಬುತ್ತಾರೆ. ಮುಂಬರುವ ವಾರಗಳಲ್ಲಿ ಬೇಡಿಕೆ ಹೆಚ್ಚಾದಂತೆ ಬೆಲೆಗಳು ಮತ್ತೆ ಏರುಮುಖ ಕಾಣುವ ನಿರೀಕ್ಷೆಯಿದೆ. ವಿಶೇಷವಾಗಿ ಈ ವರ್ಷ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ವಿವಾಹಗಳು ನೆರವೇರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಮದುವೆ ಸೀಸನ್ನಲ್ಲಿ ಶುಭ ಸುದ್ದಿ: ಚಿನ್ನದ ಬೆಲೆ 77 ಸಾವಿರ ರೂ.ಗೆ ಇಳಿಕೆ, ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?