ಬಸವ ಜಯಂತಿ ನಿಮಿತ್ತ ಡ್ಯಾನ್ಸ್ ಮಾಡಿದ ರಮೇಶ ಕತ್ತಿ: ಡ್ಯಾನ್ಸ್ ವಿಡಿಯೋ ವೈರಲ್ - ರಮೇಶ ಕತ್ತಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
🎬 Watch Now: Feature Video
ಚಿಕ್ಕೋಡಿ: ಮಾಜಿ ಸಂಸದ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಬಸವ ಜಯಂತಿ ಪ್ರಯುಕ್ತ ಮಾಡಿರುವ ಡ್ಯಾನ್ಸ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಮದಲ್ಲಿ ಬಸವೇಶ್ವರ ಜಯಂತಿ ನಿಮಿತ್ತ ಗ್ರಾಮದಲ್ಲಿ ಆಯೋಜಿಸಿದ್ದ, ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಅವರು ಗ್ರಾಮದ ಯುವಕರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ರಮೇಶ ಕತ್ತಿ ಅವರು ಸಚಿವ ಉಮೇಶ ಕತ್ತಿಯವರ ಸಹೋದರರಾಗಿದ್ದಾರೆ.