thumbnail

ವಿಜಯನಗರ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಕರಡಿ

By

Published : May 11, 2022, 11:11 AM IST

ವಿಜಯನಗರ: ಕಡಾಕೋಳ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಕರಡಿ ಸೆರೆಯಾಗಿದೆ. ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ, ಕಡಾಕೋಳ, ಮಡ್ಲಾನಾಯಕನಹಳ್ಳಿ, ಭೀಮಸಮುದ್ರ, ಕುರಿಹಟ್ಟಿ ಭಾಗಗಳಲ್ಲಿ ಕರಡಿ ಕಾಣಿಸಿಕೊಂಡಿತ್ತು. ಚಿಕ್ಕಜೋಗಿಹಳ್ಳಿಯ ಪೆಟ್ರೋಲ್ ಬಂಕ್, ಲಕ್ಷ್ಮಣ್ ನಾಯಕ್ ಎಂಬುವರ ತೋಟದ ಬಳಿ ರಾತ್ರಿ ವೇಳೆ ಕರಡಿ ಓಡಾಡಿರುವ ವಿಡಿಯೊ ವೈರಲ್ ಆಗಿದ್ದವು. ಕೆಲವೆಡೆ ಹಗಲಲ್ಲಿಯೇ ಕರಡಿ ಕಾಣಿಸಿಕೊಂಡಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಗ್ರಾಮಗಳ ಬಳಿ ಬೋನು ಅಳವಡಿಸಿದ್ದರು. ಬೋನಿಗೆ ಬಿದ್ದಿರುವ ಕರಡಿಯನ್ನು ಗುಡೇಕೋಟೆ ಕರಡಿಧಾಮಕ್ಕೆ ಸಾಗಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸೆರೆ ಸಿಕ್ಕಿರುವ ಕರಡಿಯನ್ನು ಹೊರತುಪಡಿಸಿ ಇನ್ನು 8-10 ಕರಡಿಗಳು ಈ ಪ್ರದೇಶದಲ್ಲಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.