ಬಿಗ್ ಬಾಸ್, ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಕೋಟ್ಯಂತರ ಪ್ರೇಕ್ಷಕರನ್ನು ಸಂಪಾದಿಸಿರುವ ಈ ಕಾರ್ಯಕ್ರಮ ಇದೀಗ ಮೊದಲ ವಾರಾಂತ್ಯ ತಲುಪಿದೆ. 'ಹೆಲ್ ಆ್ಯಂಡ್ ಹೆವೆನ್' ಕಾನ್ಸೆಪ್ಟ್ ಮೂಲಕ ಶುರುವಾಗಿರುವ ಕನ್ನಡ ಕಿರುತೆರೆಯ ಅರಮನೆಯಲ್ಲಿ ಮೊದಲ ವಾರವೇ ಕಿಚ್ಚು ಹೊತ್ತಿದೆ. ಈಗಾಗಲೇ ಸೋಮವಾರದಿಂದ ಶುಕ್ರವಾರದವರೆಗಿನ ಸಂಚಿಕೆಗಳನ್ನು ನೀವು ವೀಕ್ಷಿಸಿದ್ದೀರಿ. ಇಂದು ಕಿಚ್ಚನ ಪಂಚಾಯಿತಿ ಜರುಗಲಿದ್ದು, ಸಂಚಿಕೆ ಮೇಲೆ ಸಾಕಷ್ಟು ಕುತೂಹಲ ಮೂಡಿದೆ.
'ನರಕ ಮತ್ತು ಸ್ವರ್ಗ' ಎಂಬ ಕಾನ್ಸೆಪ್ಟ್ ಮೂಲಕ ಶುಭಾರಂಭ ಮಾಡಿರುವ ಕಾರ್ಯಕ್ರಮದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ವಾದ - ವಾಗ್ವಾದಗಳು ಜರುಗಿವೆ. ಕಳೆದ ವಾರಾಂತ್ಯ ನಗುಮೊಗದಲ್ಲಿ ಮನೆಯೊಳಗೆ ಬಲಿಗಾಲಿಟ್ಟಿರುವ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ. ಇದೀಗ ಎಲಿಮಿನೇಶನ್ಗೆ ಕ್ಷಣಗಣನೆ ಶುರುವಾಗಿದೆ.
ಎಲಿಮಿನೇಶನ್ಗೆ ನಾಮಿನೇಟ್ ಆದವರು?
- ಗೌತಮಿ ಜಾದವ್
- ಶಿಶಿರ್ ಶಾಸ್ತ್ರೀ
- ಯಮುನಾ ಶ್ರೀನಿಧಿ
- ಹಂಸಾ
- ಭವ್ಯಾ ಗೌಡ
- ಲಾಯರ್ ಜಗದೀಶ್
- ಮಾನಸಾ
- ಮೋಕ್ಷಿತಾ ಪೈ
- ಚೈತ್ರಾ ಕುಂದಾಪುರ
ಹಂಸಾ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆಲುವು ಕಂಡಿರುವ ಹಿನ್ನೆಲೆಯಲ್ಲಿ, ಎಲಿಮಿನೇಶನ್ನಿಂದ ಪಾರಾಗಿದ್ದಾರೆ. ಉಳಿದವರ ಮೇಲೆ ಎಲಿಮಿನೇಶನ್ ತೂಗುಗತ್ತಿಯಿದೆ.
ಕಳೆದ ದಿನ ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪ್ರೋಮೋವೊಂದನ್ನು ಅನಾವರಣಗೊಳಿಸಿದ್ದ ಕಲರ್ಸ್ ಕನ್ನಡ, ''ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಬಿಗ್ ಬಾಸ್ ಕನ್ನಡದ ಮನೆಯಲ್ಲೇ ಉಳಿಸಲು, ಜಿಯೋ ಸಿನಿಮಾ ಆ್ಯಪ್ನಲ್ಲಿ ಅವರಿಗೆ ವೋಟ್ ಮಾಡಿ. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ'' ಎಂದು ಬರೆದುಕೊಂಡಿತ್ತು.
''ಹೈ-ಡ್ರಾಮಾ ತುಂಬಿದ ಮೊದಲ ವಾರಕ್ಕೆ ಕಿಚ್ಚನ ಮೊದಲ ಪಂಚಾಯ್ತಿ. ವಾರದ ಕತೆ ಕಿಚ್ಚನ ಜೊತೆ. ಇಂದು ರಾತ್ರಿ 9ಕ್ಕೆ'' ಎಂಬ ಕ್ಯಾಪ್ಷನ್ನೊಂದಿಗೆ ಇಂದು ಪ್ರೋಮೋ ಒಂದನ್ನು ಅನಾವರಣಗೊಳಿಸಿದ್ದು, ಯಾರು ಎಲಿಮಿನೇಶನ್ ಆಗಬಹುದೆಂಬ ಕುತೂಹಲ ಮೂಡಿದೆ.
''ಕಿಚ್ಚನ ಪಂಚಾಯ್ತಿಯಲ್ಲಿ ಯಾರ ವಿಷ್ಯ ಚರ್ಚೆ ಆಗಲೇಬೇಕು ಕಮೆಂಟ್ ಮಾಡಿ. ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9'' ಎಂಬ ಶೀರ್ಷಿಕೆಯಡಿ ಹೊಸ ಪ್ರೋಮೋ ಅನಾವರಣಗೊಂಡಿದೆ.
ಪ್ರೋಮೋಗಳಿಗೆ ನೆಟ್ಟಿಗರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, ''ಕಿಚ್ಚನ ಕಥೆ.....ಜಗದೀಶ್ ವ್ಯಥೆ'' ಎಂದು ತಿಳಿಸಿದ್ದಾರೆ. ''ಜಗದೀಶ್ ಕಥೆ ಕಿಚ್ಚನ ಜೊತೆ'' ಎಂದು ಮತ್ತೋರ್ವರು ಎಂದು ಪ್ರತಿಕ್ರಿಯಿಸಿದ್ದಾರೆ. ನರಕವಾಸಿಗಳಿಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ಮತ್ತೊರ್ವರು ಹೇಳಿದ್ದಾರೆ.
ಇದನ್ನೂ ಓದಿ: 'ಕಲ್ಟ್' ಸೆಟ್ನಲ್ಲಿ ರಚಿತಾರಾಮ್ ಬರ್ತ್ಡೇ: ನಟಿಗೆ ಜಮೀರ್ ಪುತ್ರ ಝೈದ್ ಸಾಥ್ - Rachitha Ram Birthday
ಲಾಯರ್ ಜಗದೀಶ್ ಅವರು ತಾನೇ ಬಿಗ್ ಬಾಸ್ ಎಂಬಂತೆ ಅಬ್ಬರಿಸಿದ್ದಾರೆ. ಬಿಗ್ ಬಾಸ್ ಅನ್ನೇ ಎಕ್ಸ್ಪೋಸ್ ಮಾಡುತ್ತೇನೆಂದು ತಿಳಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅವರದ್ದೇ ಚರ್ಚೆ. ಹಾಗಾಗಿ, ಇಂದು ಜಗದೀಶ್ ವಿಚಾರ ಹೆಚ್ಚು ಚರ್ಚೆಗೊಳಗಾಗುವ ಸಾಧ್ಯತೆಗಳಿವೆ.