ಜನವರಿ 16ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ಇರಿತವಾಗಿತ್ತು. ಬಾಂದ್ರಾ ನಿವಾಸದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಅರೆಸ್ಟ್ ಆಗಿರುವ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30)ಗೆ ಹೋಲಿಕೆಯಾಗಿದೆ. ಫೇಶಿಯಲ್ ರೆಕಗ್ನಿಷನ್ ಟೆಸ್ಟ್ನಲ್ಲಿ ಆರೋಪಿ ಮುಖ ಮತ್ತು ಸಿಸಿಟಿವಿ ದೃಶ್ಯ ಮ್ಯಾಚ್ ಆಗಿದೆ ಎಂದು ಮುಂಬೈ ಪೊಲೀಸರು ದೃಢಪಡಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಹೀಗಿದೆ: ಪೊಲೀಸರ ಪ್ರಕಾರ, ಜನವರಿ 16ರ ಮುಂಜಾನೆ ಈ ಘಟನೆ ನಡೆದಿದೆ. ಆರೋಪಿ, ಸತ್ಗುರು ಶರಣ್ ಕಟ್ಟಡದಲ್ಲಿರುವ ಖಾನ್ ಅವರ 12ನೇ ಮಹಡಿಯ ನಿವಾಸಕ್ಕೆ ನುಗ್ಗಿ ನಟನಿಗೆ ಆರು ಬಾರಿ ಇರಿದು ಪರಾರಿಯಾಗಿದ್ದ. ನಟನನ್ನು ಆ ಕೂಡಲೇ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು. ಜನವರಿ 21ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರು.
VIDEO | Attack on Saif Ali Khan: CCTV footage shows the alleged attacker fleeing the building through staircase.
— Press Trust of India (@PTI_News) January 16, 2025
(Source: Third Party)#SaifAliKhanInjured pic.twitter.com/VHpAenxFdu
ಪ್ರಕರಣವನ್ನು ಬಗೆಹರಿಸುವಲ್ಲಿ ಫೇಶಿಯಲ್ ರೆಕಗ್ನಿಷನ್ ಟೆಸ್ಟ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಬಂಧಿತ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ನ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಟೆಸ್ಟ್ ಪ್ರಕಾರ, ಸಿಸಿಟಿವಿ ದೃಶ್ಯಾವಳಿಯಲ್ಲಿರುವ ವ್ಯಕ್ತಿ ಮತ್ತು ಅರೆಸ್ಟ್ ಆಗಿರೋ ಆರೋಪಿ ಇಬ್ಬರೂ ಒಬ್ಬರೇ ಎಂಬುದು ದೃಢಪಟ್ಟಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು, ಆರೋಪಿಯನ್ನು ಜನವರಿ 19ರಂದು ಥಾಣೆಯಲ್ಲಿ ಬಂಧಿಸಿದರು. ಬಾಂಗ್ಲಾದೇಶದ ತನ್ನ ಹುಟ್ಟೂರಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಭೋಪಾಲ್‌ನಲ್ಲಿ 15,000 ಕೋಟಿ ಮೌಲ್ಯದ ಆಸ್ತಿ ಕಳೆದುಕೊಳ್ತಾರಾ ಸೈಫ್ ಅಲಿ ಖಾನ್?
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 311, 312, 331(4), 331(6) ಮತ್ತು 331(7) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ. ಜನವರಿ 24ರಂದು ಆತನನ್ನು ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಉಗ್ರಂ ಮಂಜು ಜೊತೆ ಗೌತಮಿ ಜಾಧವ್ ದಂಪತಿ: ಟ್ರೋಲಿಗರು ರೋಸ್ಟ್ - ಫೋಟೋ ನೋಡಿ
ಬಾಲಿವುಡ್ನ ಪವರ್ಫುಲ್ ಸೆಲೆಬ್ರಿಟಿ ಕಪಲ್ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ತಮ್ಮ ಮನೆಯ ಭದ್ರತೆ ಹೆಚ್ಚಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಸತ್ಗುರು ಶರಣ್ ಅಪಾರ್ಟ್ಮೆಂಟ್ನ 12ನೇ ಮಹಡಿಯಲ್ಲಿರುವ ಇವರ ಮನೆಯ ಬಾಲ್ಕನಿಯಲ್ಲಿ ವೈರಿಂಗ್‌ನಿಂದ ತಡೆ ನಿರ್ಮಿಸುತ್ತಿರುವ ವಿಡಿಯೋಗಳು ಇತ್ತೀಚೆಗೆ ವ್ಯಾಪಕವಾಗಿ ವೈರಲ್ ಆಗಿದ್ದವು. ಜೊತೆಗೆ ತಮ್ಮ ಪ್ರೈವಸಿ ಗೌರವಿಸುವಂತೆ ಪಾಪರಾಜಿಗಳಲ್ಲಿ ಕರೀನಾ ಅವರ ತಂಡ ಮನವಿ ಮಾಡಿದೆ.