ETV Bharat / bharat

ಮಹಾರಾಷ್ಟ್ರದ ಬಳಿಕ ರಾಂಚಿಯಲ್ಲೂ ಪತ್ತೆಯಾಯ್ತು GBS​; ಐದು ವರ್ಷದ ಬಾಲಕಿ ಆಸ್ಪತ್ರೆಗೆ ದಾಖಲು - GUILLAIN BARRE SYNDROME

ಮಹಾರಾಷ್ಟ್ರದಲ್ಲಿ ವರದಿಯಾಗಿದ್ದ ಗುಯಿಲಿನ್ ಬಾರ್​ ಸಿಂಡ್ರೋಮ್ ಇದೀಗ ರಾಂಚಿಯಲ್ಲೂ ಐದು ವರ್ಷದ ಬಾಲಕಿಗೆ ತಗುಲಿದ್ದು, ಆಕೆ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

After Maharashtra GUILLAIN BARRE SYNDROME Reported IN RANCHI
ಸಾಂದರ್ಭಿಕ ಚಿತ್ರ (CANAV)
author img

By ETV Bharat Karnataka Team

Published : Jan 31, 2025, 5:45 PM IST

ರಾಂಚಿ, ಜಾರ್ಖಂಡ್​: ಮಹಾರಾಷ್ಟ್ರದಲ್ಲಿ ವರದಿಯಾಗಿದ್ದ ನಿಗೂಢ ಕಾಯಿಲೆ ಗುಯಿಲಿನ್ ಬಾರ್​ ಸಿಂಡ್ರೋಮ್​ಗೆ ಪುಣೆಯಲ್ಲಿ ನಿನ್ನೆ ಒಬ್ಬರು ಮೃತಪಟ್ಟಿದ್ದಾರೆ. ಇದೀಗ ಈ ಸಿಂಡ್ರೋಮ್​ ರಾಂಚಿಯಲ್ಲಿ ವರದಿಯಾಗಿದೆ. ಐದೂವರೆ ವರ್ಷದ ಬಾಲಕಿ ಈ ಸಮಸ್ಯೆಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಸದ್ಯ ಬಾಲಕಿಯಲ್ಲಿ ವೆಂಟಿಲೇಟರ್​ ಬೆಂಬಲದೊಂದಿಗೆ ಚಿಕಿತ್ಸೆಗೆ ಒಳಪಡಿಸಲಾಗಿದೆ. ಬಾಲಕಿಯನ್ನು ಪರಿಶೀಲಿಸುತ್ತಿರುವ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು , ಯಾವುದೇ ಆತಂಕ ಇಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಆರಂಭಿಸಿದಲ್ಲಿ ಈ ರೋಗವನ್ನು ತಡೆಗಟ್ಟಬಹುದು ಎಂದಿದ್ದಾರೆ.

ಗುಯಿಲಿನ್ ಬಾರ್ ಸಿಂಡ್ರೋಮ್​ಗೆ ಒಳಗಾದ ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಮಕ್ಕಳ ತಜ್ಞ ಡಾ ರಾಜೇಶ್ ಈಟಿವಿ ಭಾರತ್​​ ಜೊತೆ ಮಾತನಾಡಿ, ಎಂಟು ದಿನದ ಹಿಂದೆ ದಂಪತಿಗಳು ಮಗುವನ್ನು ಕರೆ ತಂದಿದ್ದರು. ಈ ಸಂದರ್ಭದಲ್ಲಿ ಬಾಲಕಿ ಸ್ಥಿತಿ ಚಿಂತಾಜನಕವಾಗಿತ್ತು. ಆಕೆ ನಡೆಯಲು ಸಾಧ್ಯವಾಗದೇ, ಉಸಿರಾಡಲು ಕಷ್ಟಪಡುತ್ತಿದ್ದಳು. ತಕ್ಷಣಕ್ಕೆ ಬಾಲಕಿಗೆ ಐವಿಐಜಿ ನೀಡಿ ವೆಂಟಿಲೇಟರ್​ ಚಿಕಿತ್ಸೆಗೆ ಒಳಪಡಿಸಿ, ಚಿಕಿತ್ಸೆ ಆರಂಭಿಸಲಾಯಿತು. ಸದ್ಯ ಬಾಲಕಿ ಸ್ಥಿತಿ ಉತ್ತಮವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾರೆ.

ವೈದ್ಯರು ಹೇಳುವುದೇನು?: ಇದೊಂದು ಅಪರೂಪದ ಕಾಯಿಲೆಯಾಗಿದೆ. ಗುಯಿಲಿನ್ ಬಾರ್ ಸಿಂಡ್ರೋಮ್ ಅಥವಾ ಜಿಬಿಎಸ್​ ಎಂಬುದು ಆಟೋಇಮ್ಯೂನ್ ನ್ಯೂರೋಲಾಜಿಕಲ್​ ಕಾಯಿಲೆಯಾಗಿದೆ. ಇದು ಪ್ರತಿರೋಧಕ ವ್ಯವಸ್ಥೆಯ ನರದ ಮೇಲೆ ದಾಳಿ ಮಾಡುತ್ತದೆ. ಇದರಿಂದ ರೋಗಿ ಓಡಾಡುವುದು ಮತ್ತು ಉಸಿರಾಡುವುದು ಕಷ್ಟವಾಗುತ್ತದೆ. ಇದು ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಅಪಾಯಕಾರಿಯಾಗಿದೆ. ಬಾಲಕಿಯನ್ನು ಕರೆತಂದಾಗ ಆಕೆಯ ಲಕ್ಷಣದ ಆಧಾರದ ಮೇಲೆ ರೋಗದ ತೀವ್ರತೆ ಅಂದಾಜಿಸಲಾಯಿತು ಎಂದಿದ್ದಾರೆ.

ಪರಿಸ್ಥಿತಿ ಹೀಗಿದ್ದರೆ ತಕ್ಷಣ ಅವರನ್ನ ವೈದ್ಯರ ಬಳಿ ಕರೆದುಕೊಂಡು ಹೋಗಿ: ಮಕ್ಕಳು ಅಥವಾ ಹಿರಿಯರು ಓಡಾಡಲು ಕಷ್ಟ ಪಡುತ್ತಿದ್ದರೆ ಅಥವಾ ಸುಸ್ತಾಗಿದ್ದಾರೆ ತಕ್ಷಣಕ್ಕೆ ಅವರನ್ನು ವೈದ್ಯರ ಬಳಿ ಕರೆ ತನ್ನಿ. ಕಾರಣ ಈ ರೋಗವೂ ನರದ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ. ತಕ್ಷಣಕ್ಕೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಪ್ರಮಾದಕ್ಕೆ ಗುರಿಯಾಗುತ್ತದೆ ಎಂದಿದ್ದಾರೆ. ರೋಗಕ್ಕೆ ತುತ್ತಾಗಿರುವ ಬಾಲಕಿ ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಕುರ್ಲಾದಿಂದ ರಾಂಚಿಗೆ ಮರಳಿದ್ದಳು

ಏನಿದು ಗುಯಿಲಿನ್ ಬಾರ್ ಸಿಂಡ್ರೋಮ್?: ಸದ್ಯ ಈ ಗುಯಿಲಿನ್ ಬಾರ್ ಸಿಂಡ್ರೋಮ್ ರೋಗಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ತಿಳಿದಿಲ್ಲ, ಇದು ಸೋಂಕಿನಿಂದ ಹರಡುತ್ತದೆ. ದೇಹದ ಪ್ರತಿರೋಧಕ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಇದು ನರ ವ್ಯವಸ್ಥೆ ಮೇಲೆ ಹಾನಿ ಮಾಡುತ್ತದೆ. ಇದರ ಮೊದಲ ಸೂಚನೆ ಎಂದರೆ, ಅಂಗೈ ಮತ್ತು ಪಾದ ಜುಮ್ಮೆನಿಸುತ್ತದೆ. ಬಳಿಕ ಇದು ವೇಗವಾಗಿ ಹರಡಿ, ಪಾರ್ಶ್ವವಾಯುಗೂ ಕಾರಣವಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ವ್ಯಕ್ತಿಯ ಸೋಂಕಿನ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು.

ಸಿಂಡ್ರೋಮ್​​ ಲಕ್ಷಣ: ಅತಿಸಾರ, ಹೊಟ್ಟೆ ನೋವು, ಜ್ವರ ಮತ್ತು ವಾಂತಿ. ಇದು ಕಲುಷಿತ ನೀರು ಮತ್ತು ಆಹಾರದಿಂದ ರೋಗದ ಸಂಪರ್ಕಕ್ಕೆ ಒಳಗಾಗಬಹುದು.

ಮುನ್ನೆಚ್ಚರಿಕೆ ವಹಿಸಿ: ಕಾಯಿಸಿ, ಆರಿಸಿದ ನೀರು ಸೇವನೆ. ಸುರಕ್ಷಿತ ಆಹಾರ ಸೇವನೆ ಅಗತ್ಯ. ಸ್ನಾಯು ಬಳಲಿಕೆ ಕಂಡು ಬಂದರೆ, ತಕ್ಷಣಕ್ಕೆ ವೈದ್ಯರ ಸಂಪರ್ಕಕ್ಕೆ ಒಳಗಾಗುವುದು ಅವಶ್ಯಕ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಂಕಿತ ಜಿಬಿಎಸ್​ಗೆ ಮೊದಲ ಬಲಿ : 100ರ ಗಡಿ ದಾಟಿದ ಗುಯಿಲಿನ್​-ಬಾರ್ರೆ ಸಿಂಡ್ರೋಮ್​ ಪ್ರಕರಣ!

ಇದನ್ನೂ ಓದಿ: ದೇಶದಲ್ಲಿ ಹರಡುತ್ತಿರುವ ಅಪರೂಪದ ಕಾಯಿಲೆ: ವಾರದೊಳಗೆ 100 ಜನರಿಗೆ ತಗುಲಿದ ರೋಗ: ಏನಿದರ ಗುಣಲಕ್ಷಣ, ಕಾರಣಗಳೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.