ETV Bharat / state

ದೇವಸ್ಥಾನ ಹುಂಡಿ ಹೊತ್ತೊಯ್ಯುತ್ತಿದ್ದ ಕಳ್ಳರನ್ನು ಸಿನಿಮೀಯ ರೀತಿ ಚೇಸ್ ಮಾಡಿ ಬಂಧಿಸಿದ ಹೊಯ್ಸಳ ಪೊಲೀಸರು! - 112 HOYSALA ARREST THIEVES

ದೇವಸ್ಥಾನದ ಹುಂಡಿಯನ್ನು ಕದ್ದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಕಳ್ಳರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Temple hundi theft
ದೇವಸ್ಥಾನದ ಹುಂಡಿ ಕಳ್ಳತನ (ETV Bharat)
author img

By ETV Bharat Karnataka Team

Published : Jan 31, 2025, 5:28 PM IST

ದಾವಣಗೆರೆ: ದೇವಸ್ಥಾನದ ಹುಂಡಿ ಹೊತ್ತೊಯ್ಯುತ್ತಿದ್ದ 3 ಜನ ಕಳ್ಳರನ್ನು 112 ಹೊಯ್ಸಳ ಪೊಲೀಸರು ಸಿನಿಮೀಯ ರೀತಿ ಚೇಸ್ ಮಾಡಿ ಬಂಧಿಸಿದ್ದಾರೆ‌.

ನಾಗರಾಜ್ (47) ಶಿವಪ್ಪ ಎಂ. (38) ನರಸಿಂಹಪ್ಪ (42) ಬಂಧಿತ ಆರೋಪಿಗಳು. ಬಂಧಿತರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೂಲದವರು ಎಂದು ತಿಳಿದು ಬಂದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ.‌

ಹೊಯ್ಸಳ 112ರ ಸಿಬ್ಬಂದಿ ಮಂಜುನಾಥ ಪ್ರಸಾದ್ ಎ. ಮತ್ತು ಚಾಲಕ ಹಾಲೇಶ್ ರಾತ್ರಿ 11ರ ಹೊತ್ತಿಗೆ ಅಣಬೂರು ಗೊಲ್ಲರಹಟ್ಟಿಯಲ್ಲಿ ‌ಗಸ್ತು ತಿರುಗುತ್ತಿದ್ದರು. ಈ ವೇಳೆ ಅಣಬೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಕಳ್ಳರು ಬಂದಿರುವ ಬಗ್ಗೆ 112 ಹೊಯ್ಸಳಕ್ಕೆ ಕರೆ ಬಂದಿತ್ತು. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ತಡಮಾಡದೇ ತಕ್ಷಣ ಕಾರ್ಯ ಪ್ರವೃತ್ತರಾಗಿ, ಕರೆ ಬಂದ ಕೇವಲ 2-3 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ದೇವಸ್ಥಾನದ ಹುಂಡಿ ಒಡೆಯುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿನಿಮೀಯ ರೀತಿ ಚೇಸ್ ಮಾಡಿ ಬಂಧನ: ಪೊಲೀಸರು ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಾರಿನಲ್ಲಿ ಚೇಸ್ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯವೆಸಗಲು ಬಳಸಿದ್ದ ಕೆಎ16 ಇಎ 4081 ನಂಬರ್​ನ ದ್ವಿಚಕ್ರ ವಾಹನ, ಹುಂಡಿಯನ್ನು ಒಡೆಯಲು ತಂದಿದ್ದ ಒಂದು ಕಬ್ಬಿಣದ ರಾಡ್ ಮತ್ತು ಒಂದು ಉಳಿ, ಒಂದು ಸ್ಕ್ರೂ ಡ್ರೈವರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಿಸಿದಾಗ ದೇವಸ್ಥಾನದ ಹುಂಡಿ ಒಡೆಯಲು ಬಂದಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಂಗಡಿ ಶಟರ್ ಮುರಿದು 35 ಕೆಜಿ ಬೆಳ್ಳಿ ಹೊತ್ತೊಯ್ದ ಕಳ್ಳರು: ಬಂಗಾರದ ಅಂಗಡಿ ಶಟರ್ ಮುರಿದು ಒಳನುಗ್ಗಿದ ಕಳ್ಳರು ಚಿನ್ನ ಹಾಗೂ ಬೆಳ್ಳಿ ಆಭರಣ ದೋಚಿರುವ ಘಟನೆ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ನಗರದ ಮಂಡಿಪೇಟೆಯಲ್ಲಿರುವ ಸೈಯ್ಯದ್ ಶಹಬಾಜ್ ಎಂಬುವರಿಗೆ ಸೇರಿದ ಚಿನ್ನ, ಬೆಳ್ಳಿ ಅಂಗಡಿಯ ಶಟರ್​ ಮುರಿದು ಒಳ ಪ್ರವೇಶಿಸಿರುವ ಕಳ್ಳರು ಅಂಗಡಿಯಲ್ಲಿ ಇದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ.

ಬಸವನಗರ ಪೊಲೀಸ್ ಠಾಣೆಗೆ ಮಾಲೀಕ ದೂರು ನೀಡಿದ್ದು, 35 ಕೆಜಿ ಬೆಳ್ಳಿಯನ್ನು ಕಳ್ಳರು ದೋಚಿದ್ದಾರೆ. ಎಷ್ಟು ಬಂಗಾರವನ್ನು ದೋಚಲಾಗಿದೆ ಎಂದು ಇನ್ನಷ್ಟು ತಿಳಿಯಬೇಕಿದೆ. ಎಂದು ಮಾಲೀಕ ಸೈಯ್ಯದ್ ಸಹಬಾಜ್ ಮಾಹಿತಿ ನೀಡಿದ್ದಾರೆ. ಬಸವ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಹಾಸನ: ATM ಹೊತ್ತೊಯ್ದ ಖದೀಮರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.