ETV Bharat / international

ಹಮಾಸ್​ನಿಂದ ಶನಿವಾರ ಮತ್ತೆ 3 ಒತ್ತೆಯಾಳುಗಳ ಬಿಡುಗಡೆ: ಇಸ್ರೇಲ್ ತಲುಪಿದ ಪಟ್ಟಿ - GAZA CEASEFIRE

ಶನಿವಾರದಂದು ಹಮಾಸ್ ಮತ್ತೆ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ.

ಹಮಾಸ್​ನಿಂದ ಶನಿವಾರ ಮತ್ತೆ 3 ಒತ್ತೆಯಾಳುಗಳ ಬಿಡುಗಡೆ: ಇಸ್ರೇಲ್ ತಲುಪಿದ ಪಟ್ಟಿ
ಹಮಾಸ್​ನಿಂದ ಶನಿವಾರ ಮತ್ತೆ 3 ಒತ್ತೆಯಾಳುಗಳ ಬಿಡುಗಡೆ: ಇಸ್ರೇಲ್ ತಲುಪಿದ ಪಟ್ಟಿ (ians)
author img

By ETV Bharat Karnataka Team

Published : Jan 31, 2025, 8:01 PM IST

ಜೆರುಸಲೇಂ : ಹಮಾಸ್ ಶನಿವಾರ ಬಿಡುಗಡೆ ಮಾಡಲಿರುವ ಮೂವರು ಇಸ್ರೇಲಿ ನಾಗರಿಕ ಒತ್ತೆಯಾಳುಗಳ ಪಟ್ಟಿಯು ಇಸ್ರೇಲ್​ಗೆ ತಲುಪಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಶುಕ್ರವಾರ ತಿಳಿಸಿದೆ. ಈ ಪಟ್ಟಿಯಲ್ಲಿ ಇಸ್ರೇಲಿ-ಫ್ರೆಂಚ್ ಪ್ರಜೆ ಒಫರ್ ಕಾಲ್ಡೆರಾನ್ (54), ಇಸ್ರೇಲಿ-ಅಮೆರಿಕನ್ ಪ್ರಜೆ ಕೀತ್ ಸೀಗಲ್ (65) ಮತ್ತು ಇಸ್ರೇಲಿ ನಾಗರಿಕ ಯಾರ್ಡೆನ್ ಬಿಬಾಸ್ (35) ಸೇರಿದ್ದಾರೆ.

ಬೀಬಾಸ್ ಅವರ ಅವರ ಪತ್ನಿ ಶಿರಿ ಮತ್ತು ಇಬ್ಬರು ಪುತ್ರರಾದ ಐದು ವರ್ಷದ ಏರಿಯಲ್ ಮತ್ತು ಎರಡು ವರ್ಷದ ಕಾಫಿರ್ ಅವರನ್ನು ಕೂಡ ಅಕ್ಟೋಬರ್ 7, 2023 ರ ದಾಳಿಯಲ್ಲಿ ಹಮಾಸ್​ ಒತ್ತೆಯಾಳಾಗಿ ಗಾಜಾಗೆ ಅಪಹರಿಸಿಕೊಂಡು ಹೋಗಿತ್ತು. ಆದರೆ ಇವರು ಇನ್ನೂ ಬದುಕಿದ್ದಾರಾ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ತಿಳಿದಿಲ್ಲ.

ಜನವರಿ 19 ರಿಂದ ಜಾರಿಗೆ ಬಂದ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳುಗಳ ಬಿಡುಗಡೆಯ ಗಾಜಾ ಕದನ ವಿರಾಮ ಒಪ್ಪಂದದ ಪ್ರಕಾರ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಆರು ವಾರಗಳ ಕದನ ವಿರಾಮ ಒಪ್ಪಂದದ ಮೊದಲ ಹಂತ ಪ್ರಾರಂಭವಾದಾಗಿನಿಂದ, ಐವರು ಇಸ್ರೇಲಿ ನಾಗರಿಕರು, ಐವರು ಮಹಿಳಾ ಇಸ್ರೇಲಿ ಸೈನಿಕರು ಮತ್ತು ಐವರು ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಗಾಜಾದಲ್ಲಿರುವ ಒಟ್ಟು 33 ಇಸ್ರೇಲಿ ಒತ್ತೆಯಾಳುಗಳು ಮತ್ತು ಇಸ್ರೇಲಿ ಜೈಲುಗಳಿಂದ ಸುಮಾರು 2,000 ಪ್ಯಾಲೆಸ್ಟೈನಿಯರನ್ನು ಬಿಡುಗಡೆ ಮಾಡುವ ಪ್ರಸ್ತಾಪವಿದೆ.

ಏತನ್ಮಧ್ಯೆ, ವೆಸ್ಟ್ ಬ್ಯಾಂಕ್​ನ ಉತ್ತರ ದಿಕ್ಕಿನಲ್ಲಿರುವ ಜೆನಿನ್​​ನಲ್ಲಿ ಇಬ್ಬರು ಪ್ಯಾಲೆಸ್ಟೈನ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಮತ್ತು ಇಸ್ರೇಲ್ ಭದ್ರತಾ ಸಂಸ್ಥೆ (ಐಎಸ್ಎ) ಶುಕ್ರವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಗುರುವಾರ ಐಎಸ್ಎ ಜೊತೆಗೆ ಜಂಟಿ ಕಾರ್ಯಾಚರಣೆ ನಡೆಸಿದ ಐಡಿಎಫ್ ಮತ್ತು ಹೆಚ್ಚುವರಿ ಪಡೆಗಳು ಕಟ್ಟಡವನ್ನು ಸುತ್ತುವರಿದು ಒಳಗಿದ್ದ ಇಬ್ಬರು ಉಗ್ರರನ್ನು ಕೊಂದು ಹಾಕಿವೆ.

ಐಡಿಎಫ್ ಸೈನಿಕರು ಇಬ್ಬರು ಉಗ್ರರನ್ನು ಕೊಲ್ಲುವ ಮೊದಲು ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಈ ಹೋರಾಟದಲ್ಲಿ ಓರ್ವ ಇಸ್ರೇಲಿ ಸೈನಿಕ ಸಾವನ್ನಪ್ಪಿದ್ದು, ಇತರ ಐದು ಜನ ಗಾಯಗೊಂಡಿದ್ದಾರೆ.

ಜನವರಿ 21 ರಿಂದ ಐಡಿಎಫ್, ಐಎಸ್ಎ ಮತ್ತು ಇಸ್ರೇಲ್ ಬಾರ್ಡರ್ ಪೊಲೀಸರು ಆಕ್ರಮಿತ ಪ್ರದೇಶದಲ್ಲಿನ ಭಯೋತ್ಪಾದಕರ ಗುಂಪುಗಳನ್ನು ನಿರ್ಮೂಲನೆ ಮಾಡಲು ವೆಸ್ಟ್ ಬ್ಯಾಂಕ್​ನ ಜೆನಿನ್ ಮತ್ತು ತುಲ್ಕರ್ಮ್​ನಲ್ಲಿ 'ಐರನ್ ವಾಲ್' ಹೆಸರಿನ ಮಿಲಿಟರಿ ಅಭಿಯಾನವನ್ನು ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಡಜನ್​ಗಟ್ಟಲೆ ಪ್ಯಾಲೆಸ್ಟೈನ್ ಉಗ್ರಗಾಮಿಗಳು ಕೊಲ್ಲಲ್ಪಟ್ಟಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ. ಅಲ್ಲದೆ ಹಲವಾರು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.

ಇದನ್ನೂ ಓದಿ : 'ಐಡಿಎಫ್ ಸಿರಿಯಾದಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಳಿಯಲಿದೆ': ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ - IDF IN SYRIA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.