ETV Bharat / state

ಕುಂಭಮೇಳ ಕಾಲ್ತುಳಿತ: ಚಿತ್ರದುರ್ಗದ ಬಂಜಾರ ಗುರುಪೀಠದ ನಾಗಾಸಾಧು ಸಾವು - MAHA KUMBH MELA STAMPEDE

ನಾಲ್ಕು ದಿನಗಳ ಹಿಂದೆಯಷ್ಟೇ ಕುಂಭಮೇಳಕ್ಕೆ ತೆರಳಿದ್ದ ನಾಗಾಸಾಧು ರಾಜನಾಥ್ ಮಹಾರಾಜ್ ಕಾಲ್ತುಳಿತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.

Died Nagasadhu
ಮೃತ ನಾಗಾಸಾಧು (ETV Bharat)
author img

By ETV Bharat Karnataka Team

Published : Jan 31, 2025, 7:51 PM IST

Updated : Jan 31, 2025, 8:04 PM IST

ಚಿತ್ರದುರ್ಗ: ಪ್ರಯಾಗ್​ರಾಜ್ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ಮತ್ತೊಬ್ಬರು ಮೃತಪಟ್ಟಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರದುರ್ಗ ತಾಲೂಕಿನ ಸಿಬಾರ ಬಳಿ ಇರುವ ಬಂಜಾರ ಗುರುಪೀಠದಲ್ಲಿ ವಾಸವಾಗಿದ್ದ ನಾಗಾಸಾಧು ರಾಜನಾಥ್ ಮಹಾರಾಜ್ (48) ಸಾವನ್ನಪ್ಪಿದ್ದಾರೆ.

ರಾಜನಾಥ್ ಮಹಾರಾಜ್ ಅವರು ಹದಿನೈದು ದಿನಗಳ ಹಿಂದೆಯಷ್ಟೇ ಕುಂಭಮೇಳಕ್ಕೆ ತೆರಳಿದ್ದರು. ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ತಿಳಿದು ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಸಂತಾಪ (ETV Bharat)

"ನಾಗಸಾಧುಗಳ ಸಾವಿನ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಆಘಾತವಾಗಿದೆ. ಕಳೆದ ಏಳು ವರ್ಷಗಳಿಂದಲೂ ಮಠದಲ್ಲಿಯೇ ಇದ್ದರು. ಅವರ ಮಾತುಗಳೇ ನಮಗೆ ಪ್ರೇರಣೆ. 15 ದಿನಗಳ ಹಿಂದೆ ಹೋಗುವಾಗ ನಮನ್ನೂ ಆಹ್ವಾನಿಸಿದ್ದರು. ಅವರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ, ಹಿಂದಿಯಲ್ಲಿಯೇ ಮಾತನಾಡುತ್ತಿದ್ದರು. ನಾಗಾಸಾಧುಗಳು, ಪವಾಡ ಪುರುಷರು ಅಲ್ಲಿಗೆ ಬರುತ್ತಾರೆ, ನಮ್ಮವರು ಸಿಗುತ್ತಾರೆ ಎಂದು ಹೇಳಿ ಹೋಗಿದ್ದರು" ಎಂದರು.

"ಉತ್ತರಪ್ರದೇಶದ ಸರ್ಕಾರ ಹಂತ ಹಂತವಾಗಿ ಭಕ್ತರಿಗೆ ಅವಕಾಶ ಕೊಟ್ಟರೆ ಈ ರೀತಿ ಸಾವಾಗಲ್ಲ. ಮಹಾನ್ ಜ್ಞಾನಿಯ ಪಾರ್ಥೀವ ಶರೀರ ಇಂದು ಅನಾಥವಾಗಿರುವುದು ಬೇಸರದ ಸಂಗತಿಯಾಗಿದೆ. ಕೂಡಲೇ ಸರ್ಕಾರಗಳು ನಾಗಾಸಾಧು ಮಹಾರಾಜ್ ಅವರ ಪಾರ್ಥೀವ ಶರೀರವನ್ನು ಮಠಕ್ಕೆ ತಲುಪಿಸಬೇಕಿದೆ. ಸಿಎಂ ಸಿದ್ದರಾಮಯ್ಯ ನಾಗಾಸಾಧುವಿನ ಪ್ರಾರ್ಥೀವ ಶರೀರ ತರುವಂತೆ ಕೆಲಸ ಮಾಡಬೇಕು" ಎಂದು ಆಗ್ರಹಿಸಿದರು.

"ಗುರು ಪರಂಪರೆಗೆ ಅವಮಾನ ಆಗಬಾರದು. ಅವರು ಸಿದ್ಧಿ ಸಾಧಕರು, ಅವರ ಸಂಸ್ಕಾರ ಮಾಡದಿದ್ದರೆ ನಾಡಿಗೆ ಶಾಪ ಆಗುತ್ತದೆ ಎನಿಸುತ್ತಿದೆ. ಅವರ ಮೂಲ ಗೊತ್ತಿಲ್ಲ. ಆದರೆ ಅವರ ವಿಳಾಸದಲ್ಲಿ ನಮ್ಮ ಮಠದ ಮಾಹಿತಿ ಇದ್ದ ಕಾರಣ ಮಾಹಿತಿ ತಿಳಿಯಿತು. ಘನವೆತ್ತ ಸರ್ಕಾರ ಕೂಡಲೇ ಅವರ ಪಾರ್ಥೀವ ಶರೀರ ಮಠಕ್ಕೆ ತಲುಪಿಸಿ, ನಾವು ಅಂತ್ಯಸಂಸ್ಕಾರ ಮಾಡುತ್ತೇವೆ" ಎಂದು ಮನವಿ ಮಾಡಿದರು.

ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಬೆಳಗಾವಿಯ ತಾಯಿ-ಮಗಳು ಸಾವು: ಮಧ್ಯರಾತ್ರಿ ಮೃತದೇಹಗಳ ಆಗಮನ, ಡಿಸಿ ನಮನ

Last Updated : Jan 31, 2025, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.