ಗುಜರಾತ್: ಗೋವು - ಮಗುವಿನ ವಾತ್ಸಲ್ಯಭರಿತ ಪ್ರೀತಿಯ ವಿಡಿಯೋ ವೈರಲ್ - Cow And Child Bond of unconditional love Viral Video
🎬 Watch Now: Feature Video
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದಕ್ಕೆ ಕಾರಣ ಹಸುವಿನಲ್ಲಿರುವ ಮಾತೃಪ್ರೇಮ. ಈ ಹಿನ್ನೆಲೆಯಿಂದ ಹಸುವನ್ನು ತಾಯಿ ಎಂದು ಕೂಡಾ ಕರೆಯಲಾಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಎಂಬಂತೆ ವಿಡಿಯೋವೊಂದರಲ್ಲಿ ಮಗುವೊಂದು ಹಸುವಿನೊಂದಿಗೆ ಮುದ್ದಾಗಿ ಆಟವಾಡುತ್ತಿರುವುದು ಕಂಡುಬಂದಿದೆ. ಅದಕ್ಕೆ ಪ್ರತಿಯಾಗಿ ಗೋವು ಕೂಡಾ ತಾಯಿಯ ವಾತ್ಸಲ್ಯವನ್ನು ತೋರಿಸುತ್ತಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.