ಒಳಚರಂಡಿ ಮ್ಯಾನ್ಹೋಲ್ ಒಳಗೆ ಬಿದ್ದ ಐದು ವರ್ಷದ ಮಗು : ಕೈಹಿಡಿದ ಬೈಕ್ ಸವಾರ - ಮಗುವನ್ನು ಕಾಪಾಡಿದ ಬೈಕ್ ಸವಾರ
🎬 Watch Now: Feature Video
ಹರಿಯಾಣದ ಕೈಗಾರಿಕಾ ನಗರ ಎಂದು ಕರೆಯಲ್ಪಡುವ ಫರಿದಾಬಾದ್‌ನಲ್ಲಿ ತೆರೆದ ಒಳಚರಂಡಿ ಮ್ಯಾನ್‌ಹೋಲ್‌ಗಳು ಜನರಿಗೆ ಸಮಸ್ಯೆಯಾಗುತ್ತಿರುವುದು ಸಾಮಾನ್ಯ ವಿಷಯ. ಇತ್ತೀಚೆಗೆ ಇಂತಹದೇ ಒಂದು ಒಳಚರಂಡಿ ಮ್ಯಾನ್ಹೋಲ್ಗೆ ಐದು ವರ್ಷದ ಮಗು ಆಟವಾಡುತ್ತಿದ್ದಾಗ ಬಿದ್ದಿದೆ. ಅದೃಷ್ಟವಶಾತ್ ಆ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಸವಾರ ಮಗು ಮ್ಯಾನ್ಹೋಲ್ಗೆ ಬಿದ್ದಿರುವುದನ್ನು ಗಮನಿಸಿ ಕಾಪಾಡಿದ್ದಾನೆ. ಮಾರ್ಚ್ 20ರಂದು ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.