ETV Bharat / bharat

ದೆಹಲಿ ಚುನಾವಣೆಗೂ ಮುನ್ನ ಸಂಕಷ್ಟ; ಕೇಜ್ರಿವಾಲ್​ ವಿರುದ್ಧ ಇಡಿ ವಿಚಾರಣೆಗೆ ಕೇಂದ್ರ ಅಸ್ತು - DELHI LIQUOR POLICY CASE

ಈ ಪ್ರಕರಣ ಸಂಬಂಧ ಕಳೆದ ವರ್ಷ ಮಾರ್ಚ್​ನಲ್ಲಿ ಇಡಿ ಕೇಜ್ರಿವಾಲ್​ ವಿರುದ್ಧ ವಿಶೇಷ ಪಿಎಎಲ್​ಎ ನ್ಯಾಯಾಲಯದ ಮುಂದೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿತ್ತು.

Delhi liquor policy case Centres nod to ED to prosecute Arvind Kejriwal Manish Sisodia
ಅರವಿಂದ್​ ಕೇಜ್ರಿವಾಲ್​ (ಎಎನ್​ಐ)
author img

By ETV Bharat Karnataka Team

Published : Jan 15, 2025, 11:21 AM IST

ನವದೆಹಲಿ: ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮಾಜಿ ಸಿಎಂ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ಅವರನ್ನು ಜಾರಿ ನಿರ್ದೆಶನಾಲಯ ವಿಚಾರಣೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಕಳೆದ ವರ್ಷ ಮಾರ್ಚ್​ನಲ್ಲಿ ಕೇಜ್ರಿವಾಲ್​ ವಿರುದ್ಧ ವಿಶೇಷ ಪಿಎಎಲ್​ಎ ನ್ಯಾಯಾಲಯಕ್ಕೆ ಇಡಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿತ್ತು. ಇದೀಗ ದೆಹಲಿ ಚುನಾವಣೆ ಹೊತ್ತಲ್ಲಿ ಕೇಂದ್ರ ಗೃಹ ಸಚಿವಾಲಯವು ಕಾನೂನು ಪ್ರಕಾರ ಜಾರಿ ನಿರ್ದೇಶನಾಲಯಕ್ಕೆ ತನಿಖೆಗೆ ಒಪ್ಪಿಗೆ ನೀಡಿದೆ.

ಪ್ರಕರಣದಲ್ಲಿ ಕೇಜ್ರಿವಾಲ್​ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಈ ಹಗರಣದ ಪ್ರಮುಖ ಆರೋಪಿ ಎಂದು ಇಡಿ ದೂರಿದೆ. ಅಲ್ಲದೆ ಕೇಜ್ರಿವಾಲ್​ ತಮ್ಮ ಸರ್ಕಾರದ ಇತರೆ ಸಚಿವರು, ಎಎಪಿ ನಾಯಕರು ಮತ್ತು ಇತರರೊಂದಿಗೆ ಶಾಮೀಲಾಗಿದ್ದಾರೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ.

ಎಎಪಿ ರಾಜಕೀಯ ಪಕ್ಷವಾಗಿದ್ದು, ಇದನ್ನು ಪ್ರಜಾಪ್ರತಿನಿಧಿ ಕಾಯ್ದೆಯಡಿಯಲ್ಲಿ ಭಾರತದ ವೈಯಕ್ತಿಕ ನಾಗರಿಕರ ಸಂಘ ಅಥವಾ ಸಂಸ್ಥೆ ಎಂದು ಇಡಿ ಈ ಮೊದಲು ವ್ಯಾಖ್ಯಾನಿಸಿತ್ತು. ಇದರಿಂದ ಪಿಎಂಎಲ್​ಎ ಸೆಕ್ಷನ್​ 70ರ ಅಡಿಯಲ್ಲಿ ಇದನ್ನು ಕಂಪನಿ ಎಂದು ವರ್ಗೀಕರಿಸಬಹುದು ಎಂದು ತಿಳಿಸಿತು.

ಲೆಫ್ಟಿನೆಂಟ್​ ಗವರ್ನರ್​ ವಿಕೆ ಸಕ್ಸೆನಾ ಕೂಡ ಕಳೆದ ತಿಂಗಳು ಕೇಜ್ರಿವಾಲ್​ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದರು. ಗೋವಾ ಚುನಾವಣಾ ಪ್ರಚಾರಕ್ಕಾಗಿ ಕೆಲವು ಮಧ್ಯದ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಳ್ಳಲು ಲಂಚ ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಕೂಡ ಪಟ್ಟಿಯಲ್ಲಿದೆ. ಈ ಹಗರಣದಲ್ಲಿ ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್​ ಜವಾಬ್ದಾರರು ಎಂದು ತಿಳಿಸಿದೆ. (ಪಿಟಿಐ/ ಐಎಎನ್​ಎಸ್​)

ಇದನ್ನೂ ಓದಿ: ಮತಕ್ಕಾಗಿ ಬಿಜೆಪಿಯಿಂದ ಚಿನ್ನದ ಸರ ವಿತರಣೆ: ಕೇಜ್ರಿವಾಲ್​ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.