ಉಡುಪಿ: ವೈದ್ಯರು, ನರ್ಸ್ ಸೇರಿ 14 ಮಂದಿಗೆ ಸೋಂಕು... ಜಿಲ್ಲಾಸ್ಪತ್ರೆಯೇ ಸೀಲ್​ಡೌನ್​! - ಉಡುಪಿ ಜಿಲ್ಲಾ ಆಸ್ಪತ್ರೆ ಸೀಲ್​​ಡೌನ್​

🎬 Watch Now: Feature Video

thumbnail

By

Published : Jul 16, 2020, 7:57 PM IST

ಉಡುಪಿ: ಜಿಲ್ಲಾಸ್ಪತ್ರೆಗೂ ಕೋವಿಡ್-19 ಬಾಧೆ ತಟ್ಟಿದ್ದು, ಆಸ್ಪತ್ರೆಯ ವೈದ್ಯರು, ರೋಗಿಗಳು ಸೇರಿ 14 ಮಂದಿಗೆ ಸೋಂಕು ತಗಲಿದೆ. ಹೀಗಾಗಿ, ಆಸ್ಪತ್ರೆಯನ್ನು ಸೀಲ್​ಡೌನ್​ ಮಾಡಲಾಗಿದೆ. ಗ್ಯಾಂಗ್ರೀನ್​​ ಸಮಸ್ಯೆಗೆ ದಾಖಲಾಗಿದ್ದ ರೋಗಿನೇ ಸೂಪರ್ ಸ್ಪ್ರೆಡರ್ ಆಗಿರುವುದು ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಯ ನಂತರ ಜ್ವರಕ್ಕೆ ತುತ್ತಾದ ರೋಗಿಗೆ ಸೋಂಕು ತಗಲಿದ್ದು, ಈತನ ವಾರ್ಡ್​​​ನಲ್ಲಿದ್ದ ಒಟ್ಟು 9 ರೋಗಿಗಳಿಗೂ ಅಂಟಿದೆ. ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್, ವಾರ್ಡ್​​ನಲ್ಲಿ ಸ್ವಚ್ಛತಾ ಕೆಲಸ ಮಾಡಿದ ಸಿಬ್ಬಂದಿ, ಅಡುಗೆ ಭಟ್ಟರಿಗೂ ಸೋಂಕು ತಗಲಿದೆ. ಈ ಕುರಿತು ನಮ್ಮ ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.