ಬಸವಕಲ್ಯಾಣದಲ್ಲಿ ದೀಪಾವಳಿ ಸಂಭ್ರಮ : ಗಮನಸೆಳೆದ ಎಮ್ಮೆ, ಕೋಣಗಳ ಓಟದ ಸ್ಪರ್ಧೆ - ಬೀದರ್ನಲ್ಲಿ ಎಮ್ಮೆ, ಕೋಣಗಳ ಓಟದ ಸ್ಪರ್ಧೆ
🎬 Watch Now: Feature Video
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಗೌಳಿ ಸಮಾಜದ ವತಿಯಿಂದ ಎಮ್ಮೆ, ಕೋಣಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಎಮ್ಮೆ, ಕೋಣಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕೊರಳಿಗೆ ಗೆಜ್ಜೆಕಟ್ಟಿ ಶೃಂಗರಿಸಿ, ವಾದ್ಯಗಳೊಂದಿಗೆ ನಗರದ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತದ ವರೆಗೆ ಮೆರವಣಿಗೆ ಮಾಡಲಾಯಿತು. ಗಾಂಧಿ ವೃತ್ತದಲ್ಲಿ ನಡೆದ ಎಮ್ಮೆ, ಕೋಣಗಳ ಓಟದ ಸ್ಪರ್ಧೆ ರೋಚಕವಾಗಿತ್ತು.