ಮೈಸೂರು: ನಂಜನಗೂಡಿನ ಜಮೀನುಗಳತ್ತ ಕಾಡಾನೆಗಳು - WILD ELEPHANTS
🎬 Watch Now: Feature Video
Published : Jan 17, 2025, 11:26 AM IST
ಮೈಸೂರು: ನಂಜನಗೂಡಿನ ಕಾಡಂಚಿನ ಗ್ರಾಮಗಳ ಜಮೀನಿನ ಸುತ್ತಮುತ್ತ ಕಾಣಿಸಿಕೊಂಡ ನಾಲ್ಕು ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡಿವೆ. ಹೆಡಿಯಾಲ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಆಂಜನಪುರ, ಈರೇಗೌಡನ ಹುಂಡಿ, ಮಡುವಿನಹಳ್ಳಿ ಗ್ರಾಮಸ್ಥರು ಗುರುವಾರ ಬೆಳಗ್ಗೆ 9ರ ಸಮಯದಲ್ಲಿ ಜಮೀನಿನಲ್ಲಿ ಹಾಗೂ ರಸ್ತೆಯಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ನೋಡಿ ಹೆದರಿದ್ದಾರೆ.
ಸಾರ್ವಜನಿಕರು, ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸಮಯದಲ್ಲಿ ಹಾಗೂ ರೈತರು ತಮ್ಮ ತಮ್ಮ ಜಮೀನಲ್ಲಿ ಕೆಲಸ ಮಾಡುವ ವೇಳೆಯಲ್ಲಿಯೇ ಆನೆಗಳು ಓಡಾಡಿ ಭಯ ಹುಟ್ಟಿಸುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಸಾರ್ವಜನಿಕರು ಕಾಡಾನೆಗಳು ಸಂಚರಿಸುವ ವೇಳೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.
ಹೆಡಿಯಾಲ ಗ್ರಾಮದಲ್ಲಿ ಆನೆಗಳ ಭೀತಿ : ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿರುವ ಹೆಡಿಯಾಲ ಗ್ರಾಮವು ಕಾಡಂಚಿನ ಪ್ರದೇಶದ ಸಮೀಪ ಇರುವುದರಿಂದ ಆಗಾಗ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಹಾಸನ : ಕಟಾವಿಗೆ ಬಂದ ಭತ್ತ ನಾಶಪಡಿಸಿದ ಕಾಡಾನೆಗಳು, ಚನ್ನರಾಯಪಟ್ಟಣದಲ್ಲಿ ಚಿರತೆ ಸೆರೆ - ELEPHANTS DESTROY PADDY CROP