BCCI New Rules: ಭಾರತ ತಂಡ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿರುವ ಹಿನ್ನೆಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಂಡದಲ್ಲಿ ಶಿಸ್ತು, ಏಕತೆ ಮತ್ತು ಸಕಾರಾತ್ಮಕ ವಾತಾವರಣ ಸೃಷ್ಟಿಸಲು 10 ಹೊಸ ನಿಯಮಗಳನ್ನು ಜಾರಿ ಮಾಡಿದೆ.
ಈ ನಿಯಮಗಳನ್ನು ಚಾಚುತಪ್ಪದೇ ಪ್ರತಿಯೊಬ್ಬ ಆಟಗಾರ ಪಾಲಿಸೆಬೇಕು ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಒಂದು ವೇಳೆ ಪಾಲಿಸದಿದ್ದರೇ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ. ಹಾಗಾದರೆ ಆ ಹತ್ತು ನಿಯಮಗಳು ಯಾರೂ ಪಾಲಿಸದಿದ್ದರೇ ಆಟಗಾರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇದೀಗ ತಿಳಿಯಿರಿ.
ಬಿಸಿಸಿಐ ಜಾರಿಗೆ ತಂದ ಹತ್ತು ನಿಯಮಗಳು
1. ದೇಶಿಯ ಪಂದ್ಯ ಕಡ್ಡಾಯ: ಇನ್ಮುಂದೆ ಪ್ರತಿಯೊಬ್ಬ ಆಟಗಾರರು ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಮತ್ತು ಕೇಂದ್ರೀಯ ಗುತ್ತಿಗೆ ಪಡೆಯಲು ಬಯಸಿದರೇ ಕಡ್ಢಾಯವಾಗಿ ದೇಶೀಯ ಪಂದ್ಯಗಳಲ್ಲಿ ಆಡಲೇಬೇಕು. ಇದರಿಂದಾಗಿ ಸ್ಥಳೀಯ ಯುವಕರಿಗೆ ಸ್ಟಾರ್ ಕ್ರಿಕೆಟಿಗರೊಂದಿಗೆ ಆಡುವ ಅವಕಾಶ ಸಿಗುತ್ತದೆ ಮತ್ತು ಅವರ ಭವಿಷ್ಯಕ್ಕೆ ಸಹಾಯಕವಾಗಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
📢 THE BCCI RELEASES 10 NEW GUIDELINES FOR INDIAN PLAYERS. pic.twitter.com/5SXoPOrjz0
— Mufaddal Vohra (@mufaddal_vohra) January 16, 2025
2. ತಂಡದೊಂದಿಗೆ ಪ್ರಯಾಣ: ಪಂದ್ಯಗಳು ಮತ್ತು ಪ್ರವಾಸದ ಸಮಯದಲ್ಲಿ ಆಯ್ಕೆಯಾದ ಎಲ್ಲಾ ಆಟಗಾರರು ತಂಡದೊಂದಿಗೆ ಒಟ್ಟಿಗೆ ಪ್ರಯಾಣ ಬೆಳೆಸಬೇಕು ಪ್ರತ್ಯೇಕ ಪ್ರಯಾಣಕ್ಕೆ ಅನುಮತಿ ಇಲ್ಲ. ಇದರಿಂದ ಆಟಗಾರರ ನಡುವಿನ ಸಂಬಂಧ ಮತ್ತಷು ಸುಧಾರಿಸುತ್ತದೆ. ಒಂದು ವೇಳೆ ಆಟಗಾರರು ತಮ್ಮ ಕುಟುಂಬದೊಂದಿಗೆ ಪ್ರಯಾಣ ಮಾಡಲು ಬಯಸಿದರೆ ಮುಖ್ಯ ಕೋಚ್ ಮತ್ತು ಆಯ್ಕೆ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ.
3. ಹೆಚ್ಚಿನ ಲಗೇಜ್ಗೆ ಬ್ರೇಕ್: ಇನ್ಮುಂದೆ ದೇಶಿ ಮತ್ತು ವಿದೇಶಿ ಪ್ರವಾಸಕ್ಕೆ ಅನುಗುಣವಾಗಿ ಆಟಗಾರರು ಲಗೇಜ್ ತೆಗೆದುಕೊಂಡು ಹೋಗಬೇಕು. ದೇಶಿ ಪಂದ್ಯಗಳಲ್ಲಿ ಆಡುವುದಾದರೇ ಒಬ್ಬ ಆಟಗಾರ ತನ್ನೊಂದಿಗೆ 120 ಕೆಜಿ ಯಷ್ಟು ಲಗೇಜ್ ತೆಗೆದುಕೊಂಡು ಹೋಗಬೇಕು. 30 ದಿನಗಳಿಗಿಂತಲೂ ಹೆಚ್ಚಿನ ದಿನ ನಡೆಯುವ ವಿದೇಶಿ ಪಂದ್ಯಗಳಿಗೆ 150 ಕೆಜಿ ಲಗೇಜ್ಗೆ ಅನುಮತಿ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಲಗೇಜ್ ಇದ್ದರೆ, ಅದನ್ನು ಆಟಗಾರರೇ ಬರಿಸಬೇಕು ಎಂದು ತಿಳಿಸಿದೆ.
🚨 BIG UPDATE ON TEAM INDIA 🚨 (Sports Tak/PTI).
— Tanuj Singh (@ImTanujSingh) January 16, 2025
- Domestic Cricket is Mandatory for players.
- Players are not allowed to shoot during a series of Tour.
- Families allowed Only for 14 days in 45 days tour.
- No early return to home for players before series or tournament ends.… pic.twitter.com/KaTq9yg11Z
4. ವೈಯಕ್ತಿಕ ಸಿಬ್ಬಂದಿ ನಿಷೇಧ: ಆಟಗಾರರು ಪಂದ್ಯಗಳಿಗಾಗಿ ವಿದೇಶ ಪ್ರವಾಸಕ್ಕೆ ಹೋಗುವಾಗ ಅವರೊಂದಿಗೆ ಬಾಣಸಿಗರು, ಪರ್ಸನಲ್ ಮ್ಯಾನೇಜರ್, ಭದ್ರತಾ ಸಿಬ್ಬಂದಿಗಳನ್ನು ಜೊತೆಗೆ ಕರೆದುಕೊಂಡು ಹೋಗುವುದಕ್ಕೆ ನಿಷೇಧಿಸಲಾಗಿದೆ. ಕರೆದುಕೊಂಡು ಹೋಗಲು ಬಯಸಿದರೇ ಬಿಸಿಸಿಐ ಅನುಮತಿ ಕಡ್ಡಾಯವಾಗಿದೆ.
5. ಅಭ್ಯಾಸ ಕಡ್ಡಾಯ: ತಂಡದ ಅಭ್ಯಾಸ ಅವಧಿಗಳಲ್ಲಿ ಪ್ರತಿಯೊಬ್ಬ ಆಟಗಾರರು ಕಡ್ಡಾಯವಾಗಿ ಭಾಗವಹಿಸಬೇಕು. ಜೊತೆಗೆ ಅಭ್ಯಾಸ ಮುಗಿಯುವವರೆಗೂ ಎಲ್ಲಾ ಆಟಗಾರರು ಮೈದಾನದಲ್ಲೇ ಇರಬೇಕು. ಅಭ್ಯಾಸವಾದ ತಕ್ಷಣ ಹೋಟೆಲ್‌ಗೆ ಹೋಗಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಿಗೆ ಪ್ರಯಾಣಿಸಬೇಕು.
MAJOR UPDATES ON TEAM INDIA. [PTI]
— Johns. (@CricCrazyJohns) January 16, 2025
- Restrictions on personal staff & presence of players families on tour in new policy to promote discipline & unity in team.
- Participation in domestic games is mandatory.
- BCCI bars players from engaging in personal shoots during series or… pic.twitter.com/Jm89dOzyMg
6. ಜಾಹೀರಾತು ಶೂಟಿಂಗ್ ಕಟ್: ಯಾವುದೇ ಸರಣಿ ನಡೆಯುತ್ತಿದ್ದ ಅಥವಾ ತಂಡ ವಿದೇಶಿ ಪ್ರವಾಸದಲ್ಲಿರುವಾಗ, ಯಾವೊಬ್ಬ ಆಟಗಾರರು ಜಾಹೀರಾತು ಶೂಟ್ ಅಥವಾ ಪ್ರಾಯೋಜಕರ ಜೊತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಇದರಿಂದ ಆಟದ ಮೇಲೆ ಏಕಾಗ್ರತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
7. ಬಿಸಿಸಿಐ ಆಯೋಜಿಸುವ ಅಧಿಕೃತ ಶೂಟಿಂಗ್‌ಳಲ್ಲಿ ಪ್ರತಿಯೊಬ್ಬ ಆಟಗಾರರು ಭಾಗಿಯಾಗಬೇಕು.
8. ವೇಳಾಪಟ್ಟಿಗಿಂತ ಮುಂಚೆಯೇ ಪಂದ್ಯಗಳು ಮುಕ್ತಾಯಗೊಂಡರೂ ಆಟಗಾರರು ಸರಣಿ ಅಥವಾ ಪ್ರವಾಸದ ಕೊನೆಯವರೆಗೂ ತಂಡದೊಂದಿಗೆ ಇರಲೇಬೇಕು.
A player can be banned from the IPL, if he violates the new rules set by the BCCI. pic.twitter.com/PZpc2vPm3s
— Mufaddal Vohra (@mufaddal_vohra) January 16, 2025
9. 45 ದಿನ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ವಿದೇಶಿ ಪ್ರಾವಸದಲ್ಲಿದ್ದರೇ ಕುಟುಂಬ ಎರಡು ವಾರಗಳಿಗಿಂತ ಹೆಚ್ಚು ಕಾಲ ಆಟಗಾರರೊಂದಿಗೆ ಇರುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಒಂದು ವೇಳೆ, ಎರಡು ವಾರಕ್ಕೂ ಹೆಚ್ಚು ಉಳಿದುಕೊಂಡರೆ ಕುಟುಂಬ ವೆಚ್ಚವನ್ನು ಬಿಸಿಸಿಐ ಭರಿಸುವುದಿಲ್ಲ.
10. ಪ್ರತಿಯೊಬ್ಬ ಆಟಗಾರ ಉಪಕರಣಗಳು ಮತ್ತು ವೈಯಕ್ತಿಕ ವಸ್ತುಗಳು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸ್ಎಲೆನ್ಸ್ಗೆ ಹೋಗುತ್ತವೆ. ತಂಡದ ಆಟಗಾರರು ನಿರ್ವಹಣೆಯೊಂದಿಗೆ ಸಮನ್ವಯ ಸಾಧಿಸಬೇಕು.
ಕಠಿಣ ಕ್ರಮ: ಒಂದು ವೇಳೆ, ಈ ನಿಯಮಗಳನ್ನು ಉಲ್ಲಂಘಿಸಿದ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ಆಟಗಾರರು ಈ ನಿಯಮಗಳನ್ನು ಉಲ್ಲಂಘಿಸಿದರೇ, ಬಿಸಿಸಿಐ ನಡೆಸುವ ಎಲ್ಲ ಪಂದ್ಯಾವಳಿಗಳಿಗೆ ಮತ್ತು ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ. ಜೊತೆಗೆ ಆಟಗಾರರ ವೇತನ, ಒಪ್ಪಂದಗಳನ್ನು ಕಡಿತ ಮಾಡಲಾಗುತ್ತದೆ.
ಇದನ್ನೂ ಓದಿ: ಟಿ-20 ಕ್ರಿಕೆಟ್ನಲ್ಲಿ ಚರಿತ್ರೆ ಸೃಷ್ಟಿಸಿದ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್!