ETV Bharat / state

ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ: ಸಂತೋಷ್ ಲಾಡ್ - SANTHOSH LAD

ಸಿಎಲ್‌ಪಿ ಸಭೆಯಲ್ಲಿ ಯಾರ ಪರವಾಗಿ ಕೈ ಎತ್ತುತ್ತೇನೆ ಎಂಬುದು ಅಲ್ಲೇ ಗೊತ್ತಾಗುತ್ತದೆ ಎಂದು ಸಚಿವ ಸಂತೋಷ್​ ಲಾಡ್​ ತಿಳಿಸಿದರು.

Minister Santosh Lad
ಸಚಿವ ಸಂತೋಷ್ ಲಾಡ್ (ETV Bharat)
author img

By ETV Bharat Karnataka Team

Published : Jan 17, 2025, 7:11 PM IST

ಹುಬ್ಬಳ್ಳಿ: "ಅಧಿಕಾರ ಹಂಚಿಕೆಯನ್ನು ಹೈಕಮಾಂಡ್ ತೀರ್ಮಾನಿಸುತ್ತೆ. ಯಾರು ಸಿಎಂ ಆಗಬೇಕು ಯಾರು ಸಿಎಂ ಆಗಬಾರದು ಅನ್ನೋ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು. ದಲಿತ ಸಿಎಂ ಆಗಬೇಕೋ ಅಥವಾ ಆಗಬಾರದೋ ಅನ್ನೋದಕ್ಕೆ ನಾನು ಉತ್ತರ ಕೊಡಲ್ಲ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, "ಸಿಎಲ್‌ಪಿ ಸಭೆಯಲ್ಲಿ ಯಾರ ಪರವಾಗಿ ಕೈ ಎತ್ತುತ್ತೇನೆ ಅಂತ ಅಲ್ಲೇ ಗೊತ್ತಾಗುತ್ತೆ. ನಂತರ ನಾನು ನಿಮಗೆ ಹೇಳ್ತೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್​ಗೆ ಬಿಟ್ಟಿದ್ದು. ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಪಕ್ಷದ ವಿಚಾರದಲ್ಲಿ ಜಾರಕಿಹೊಳಿಯವರು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ. ಅವರ ಅಭಿಪ್ರಾಯದ ಬಗ್ಗೆ ಅವರನ್ನೇ ಪ್ರಶ್ನಿಸಿ" ಎಂದರು.

ಯಾವುದೋ ಒಂದು ಘಟನೆ ಇಟ್ಟುಕೊಂಡು ಮಾತನಾಡುವುದು ಸರಿಯಲ್ಲ: "ಯಾವುದೋ ಒಂದು ಘಟನೆ ಇಟ್ಟುಕೊಂಡು ಕಾನೂನು ವ್ಯವಸ್ಥೆ ಹದಗೆಟ್ಟಿದೆ ಅನ್ನೋಕೆ ಆಗಲ್ಲ. ಬೀದರ್​ನಲ್ಲಿ ದರೋಡೆ ಪ್ರಕರಣ ನಡೆಯಬಾರದಿತ್ತು. ಅಪರಾಧ ಪ್ರಕರಣ ನಡೆದ ಕೂಡಲೇ ಕಾನೂನು ವ್ಯವಸ್ಥೆ ಹರಿಗಟ್ಟಿದೆ ಅನ್ನೋದು ಸರಿಯಲ್ಲ. ಎಲ್ಲ ಸರ್ಕಾರಗಳಲ್ಲಿಯೂ ಅಪರಾಧ ಕೃತ್ಯಗಳು ನಡೆಯುತ್ತೆ. ಅಮೆರಿಕ, ಲಂಡನ್​ಗಳಲ್ಲಿಯೂ ಅಪರಾಧ ಕೃತ್ಯಗಳು ನಡೆಯುತ್ತದೆ" ಎಂದರು.

"ನಾಳೆ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರು ಹುಬ್ಬಳ್ಳಿಗೆ ಬರ್ತಾರೆ. ಜನವರಿ 21ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡುತ್ತಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಬರ್ತಾ ಇದ್ದಾರೆ. ಆ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಭಾಗದ ಮುಖಂಡರ ಸಭೆ ಮಾಡುತ್ತಾರೆ" ಎಂದರು.

"ಹುಬ್ಬಳ್ಳಿಯಲ್ಲಿ ಐದಾರು ತಿಂಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸುತ್ತೆ. ಎಲ್ ಆ್ಯಂಡ್ ಟಿ ಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆದಿಲ್ಲ. ಡಿಸೆಂಬರ್ ತಿಂಗಳಲ್ಲಿಯೇ ನಮಗೆ ಹ್ಯಾಂಡ್ ಓವರ್ ಮಾಡಬೇಕಿತ್ತು. ಐದಾರು ತಿಂಗಳಲ್ಲಿ ಶೇ. 70 ರಷ್ಟು ಪ್ರದೇಶಕ್ಕೆ ಸಮರ್ಪಕ ನೀರು ಸಿಗುತ್ತೆ. ಅವಳಿ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸುತ್ತೆ. ಕಾಂಕ್ರೀಟ್ ರೋಡ್​ ಹಾಕಿದ ಮೇಲೆ ಪೈಪ್​ಲೈನ್ ಹಾಕುವ ವ್ಯವಸ್ಥೆ ನಮ್ಮಲ್ಲಿದೆ.‌ ಇಡೀ ದೇಶದಲ್ಲಿ ಇದೇ ರೀತಿಯ ಕೆಲಸ ಆಗುತ್ತಿದೆ. ಇಂತಹ ವ್ಯವಸ್ಥೆ ಸುಧಾರಿಸಬೇಕಿದೆ" ಎಂದರು.

"ಫ್ಲೈ ಓವರ್ ಕಾಮಗಾರಿ ವಿಳಂಬ ವಿಚಾರಕ್ಕೆ ‌ಪ್ರತಿಕ್ರಿಯಿಸಿ, ಎಎಸ್ಐ ಸಾವಿನ ಪ್ರಕರಣದ ನಂತರ ಅವರು ತಲೆಮರೆಸಿಕೊಂಡಿದ್ದಾರೆ. ಅವಧಿ ಮುಗಿಯುವುದರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದರು.

ಇದನ್ನೂ ಓದಿ: ಯಾವ ರೇಸೂ ಇಲ್ಲ, ಸಿಎಂ ಕುರ್ಚಿ ಮೇಲೆ ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದಾರೆ: ಸಚಿವ ಮಹದೇವಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.