ಕೋಟೆ ನಗರದ ಖಾಲಿ ರಸ್ತೆಗಳಲ್ಲಿ ಜಾಂಬವಂತನ ದರ್ಬಾರ್... ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಚಿತ್ರದುರ್ಗಕ್ಕೆ ಬಂದ ಕರಡಿ
🎬 Watch Now: Feature Video
ಚಿತ್ರದುರ್ಗ: ಕೊರೊನಾ ವೈರಸ್ನ ರಣಕೇಕೆಗೆ ಹೆದರಿ ದುರ್ಗದ ಜನ ಮನೆಯಿಂದ ಹೊರ ಬಾರದೆ ಇರುವುದರಿಂದ ಕಾಡು ಪ್ರಾಣಿಗಳು ನಗರಕ್ಕೆ ಲಗ್ಗೆ ಇಡುತ್ತಿವೆ. ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ರಸ್ತೆಯಲ್ಲಿ ಜಾಂಬವಂತ ರಾತ್ರಿ ಹಲವು ಬೀದಿಗಳನ್ನು ಸಂಚರಿಸಿದ್ದಾನೆ. ನಿರ್ಭಯವಾಗಿ ರಸ್ತೆಯಲ್ಲಿ ಕರಡಿ ಓಡಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ಭಾಗದ ಜನರ ನಿದ್ದೆಗೆಡಿಸಿದೆ. ಕಾಮನಬಾವಿ ಬಡಾವಣೆಯ ಕೋಟೆ ರಸ್ತೆಯಲ್ಲಿ ಕರಡಿ ಓಡಾಟದ ದೃಶ್ಯಗಳನ್ನು ಗಮನಿಸಿದ ಜನ ಬೆಚ್ಚಿಬಿದ್ದಿದ್ದಾರೆ. ಆಹಾರಕ್ಕಾಗಿ ನಗರ ಪ್ರದೇಶಕ್ಕೆ ಲಗ್ಗೆ ಇಡುತ್ತಿರುವ ಕರಡಿಯನ್ನು ಸೆರೆ ಹಿಡಿಯುವಂತೆ ಜನರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.