ಗೆದ್ದ ಖುಷಿಯಲ್ಲಿ ಕಾರ್ಯಕರ್ತರೊಂದಿಗೆ ಶೋಭಾ ಸಖತ್ ಸ್ಟೆಪ್! - ಬಿಜೆಪಿ
🎬 Watch Now: Feature Video
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವಿನ ಖುಷಿಯಲ್ಲಿದ್ದು, ಕಾರ್ಯಕರ್ತರೊಂದಿಗೆ ಸಖತ್ ಸ್ಟೆಪ್ ಹಾಕಿದರು. ಶೋಭಾ ಕರಂದ್ಲಾಜೆ 7 ಲಕ್ಷದ 18 ಸಾವಿರದ 916 ಮತಗಳನ್ನ ಪಡೆದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ವಿರುದ್ಧ ಜಯ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು, ನಾಯಕರು ಗೆದ್ದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಹೂ ಮಾಲೆ ಹಾಕಿ ಮತ ಎಣಿಕಾ ಕೇಂದ್ರದಿಂದ ನಗರದ ಬ್ರಹ್ಮಗಿರಿ ಮೂಲಕ ಬಿಜೆಪಿ ಕಚೇರಿವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಗೆದ್ದ ಖುಷಿಯಲ್ಲಿ ಶೋಭಾ ಕೂಡ ಸ್ಟೆಪ್ ಹಾಕಿದರು.