ಗಣೇಶನೋತ್ಸವದಲ್ಲಿ ಟಗರು ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ ಶಿವಣ್ಣ! - ಶಿವರಾಜ್ಕುಮಾರ್ ಡ್ಯಾನ್ಸ್
🎬 Watch Now: Feature Video
ಗಣೇಶನೋತ್ಸವದಲ್ಲಿ ಕಳೆದ ಕೆಲ ದಿನಗಳ ಹಿಂದೆ ದೊಡ್ಮನೆ ಮಕ್ಕಳು, ಮೊಮ್ಮಕ್ಕಳು ತಮಟೆ ಸದ್ದಿಗೆ ಜನಸಾಮನ್ಯರಂತೆ ಕುಣಿದು ಕುಪ್ಪಳಿಸಿದ್ರು. ಇನ್ನು ಈ ಡ್ಯಾನ್ಸ್ ನೋಡಿದ್ದ ದೊಡ್ಮನೆ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ರು. ಜೊತೆಗೆ ಸ್ವಲ್ಪ ಬೇಜಾರ್ ಕೂಡ ಆಗಿದ್ರು. ಯಾಕಪ್ಪ ಅಂದ್ರೆ ಸದಾಶಿವನಗರದಲ್ಲಿ ನಡೆದ ಗಣೇಶನೋತ್ಸವದಲ್ಲಿ ಶಿವಣ್ಣನ ಹೊರತುಪಡಿಸಿ ಅಪ್ಪು, ರಾಘಣ್ಣ, ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್, ಹಾಗೂ ಧೀರೇನ್ ರಾಜ್ಕುಮಾರ್ ತಮಟೆ ಸದ್ದಿಗೆ ಸ್ಟೆಪ್ ಹಾಕಿದ್ರು. ಆದ್ರೆ ಶಿವಣ್ಣ ಇದೀಗ ಗಣೇಶನ ಸಂಭ್ರಮಾಚರಣೆಯಲ್ಲಿ ಟಗರು ಚಿತ್ರದ ಹಾಡಿಗೆ ಸಖತ್ ಸ್ಟೇಪ್ಸ್ ಹಾಕಿದ್ದಾರೆ.
Last Updated : Sep 8, 2019, 8:15 PM IST