ಸೀಲ್ಲಾಕ್ ಭಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ..
🎬 Watch Now: Feature Video
ಬೆಂಗಳೂರು: ಬಾಪೂಜಿನಗರ, ಪಾದರಾಯನಪುರ ವಾರ್ಡ್ಗಳನ್ನು ಸೀಲ್ಲಾಕ್ ಮಾಡಿ ಬಿಬಿಎಂಪಿ ಆಯುಕ್ತರು ಆದೇಶ ನೀಡುತ್ತಿದ್ದಂತೆ ಚಾಮರಾಜಪೇಟೆ ಜನ ಆತಂಕಕ್ಕೊಳಗಾಗಿದ್ದಾರೆ. ನಿಜಾಮುದ್ದೀನ್ನಿಂದ ಬಂದಿದ್ದವರಲ್ಲಿ ಕೊರೊನಾ ಸೋಂಕು ಖಚಿತವಾದ ಹಿನ್ನೆಲೆ ಬಿಬಿಎಂಪಿ ಸೀಲ್ ಲಾಕ್ ಆದೇಶ ನೀಡಿದೆ. ಒಂದು ವೇಳೆ ಚಾಮರಾಜಪೇಟೆ ಸೀಲ್ಲಾಕ್ ಆದ್ರೆ ಎಲ್ಲಾ ಅಂಗಡಿಗಳು ಬಂದ್ ಆಗಲಿವೆ. ಇದರಿಂದ ಹೆದರಿರುವ ಇಲ್ಲಿನ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.