ನ್ಯಾಯಬೆಲೆ ಅಂಗಡಿಗೆ ಅಲೆದಾಡಿದ್ರೂ ಸಿಗ್ತಿಲ್ಲವಂತೆ ಪಡಿತರ... ಫಲಾನುಭವಿಗಳ ಪರದಾಟ - ನ್ಯಾಯಬೆಲೆ ಅಂಗಡಿ
🎬 Watch Now: Feature Video
ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಕೊಡಲು ಸತಾಯಿಸಲಾಗುತ್ತಿದೆ ಎಂಬ ಆರೋಪ ಅರಸೀಕೆರೆಯಲ್ಲಿ ಕೇಳಿಬಂದಿದೆ. ಇಲ್ಲಿನ 15ನೆಯ ವಾರ್ಡ್‌ಗೆ ಸೇರಿದ ಬಿ ಜಿ ಹಟ್ಟಿ ಬಡಾವಣೆಯ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ವಿದ್ಯಾಧರ್ ಎಂಬುವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಗಾಗಿ ನ್ಯಾಯಬೆಲೆ ಅಂಗಡಿಯ ಪಡಿತರ ಉಳ್ಳವರ ಪಾಲಾಗುತ್ತಿದೆ ಎನ್ನುವುದು ಫಲಾನುಭವಿಗಳ ಆರೋಪವಾಗಿದೆ. ದೇವರು ಕೊಟ್ರು ಪೂಜಾರಿ ಕೊಡ್ಲಿಲ್ಲ ಅನ್ನೋ ಹಾಗೆ, ಸರ್ಕಾರದಿಂದ ಬಿಡುಗಡೆಯಾಗುವ ಪಡಿತರವನ್ನು ಫಲಾನುಭವಿಗಳಿಗೆ ಸರಿಯಾಗಿ ವಿತರಿಸುತ್ತಿಲ್ಲ ಅಂತಾರೆ ಸ್ಥಳೀಯರು.