ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಬಹುತೇಕ ಸಮಯದಲ್ಲಿ ನೀಲಿ ಬಣ್ಣದ ಪೇಟವನ್ನೇ ಧರಿಸುತ್ತಿದ್ದರು. ಇದರ ಹಿಂದಿನ ಕಥೆ ನಿಮಗೆ ತಿಳಿದಿದಿಯೇ? ಈ ಬಗ್ಗೆ ಸ್ವತಃ ಮನಮೋಹನ್ ಸಿಂಗ್ ಅವರೇ ಬಹಿರಂಗಪಡಿಸಿದ್ದಾರೆ.
2006 ರಲ್ಲಿ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ಮನಮೋಹನ್ ಸಿಂಗ್ ಅವರಿಗೆ 'Doctorate of Laws' ನೀಡಿತು. ಈ ಸಮಯದಲ್ಲಿ ಆಗಿನ ಡ್ಯೂಕ್ ಆಫ್ ಎಡಿನ್‌ಬರ್ಗ್ ಮತ್ತು ವಿಶ್ವವಿದ್ಯಾನಿಲಯದ ಕುಲಪತಿ ಪ್ರಿನ್ಸ್ ಫಿಲಿಪ್ ಅವರು ಮನಮೋಹನ್ ಸಿಂಗ್ ಅವರ ಪೇಟ ಮತ್ತು ಅದರ ಬಣ್ಣದ ಬಗ್ಗೆ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದರು. ಹೀಗಾಗಿ ಆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅವರು ಬಣ್ಣದ ಕಾರಣವನ್ನು ಬಿಚ್ಚಿಟ್ಟಿದ್ದರು .
ದೊರಕಿರುವ ಮಾಹಿತಿ ಪ್ರಕಾರ ಡಾ. ಮನಮೋಹನ್ ಸಿಂಗ್ ಅವರೇ, ತಾವು ಕೇಂಬ್ರಿಡ್ಜ್ನಲ್ಲಿ ಓದುತ್ತಿದ್ದಾಗ ನೀಲಿ ಪೇಟ ಧರಿಸುತ್ತಿದ್ದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಅವರ ಸ್ನೇಹಿತರೆಲ್ಲರೂ ಅವರಿಗೆ 'ಬ್ಲೂ ಟರ್ಬನ್' ಎಂದು ಅಡ್ಡ ಹೆಸರು ಇಟ್ಟಿದ್ದರಂತೆ. ಹೀಗಾಗಿ ನೆನಪಿಗೋಸ್ಕರ ಕಾಲೇಜು ದಿನಗಳಿಂದಲೂ ಕೇಂಬ್ರಿಡ್ಜ್ ಬಣ್ಣವನ್ನು ತನ್ನೊಂದಿಗೆ ಒಯ್ಯುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಹೇಳಿದ್ದರು.
ನೀಲಿ ಪೇಟ ಧರಿಸುವುದರ ಹಿಂದೆ ದೊಡ್ಡ ಕಾರಣವನ್ನು ನೀಡಿದ ಅವರು, 'ನೀಲಿ ನನ್ನ ನೆಚ್ಚಿನ ಬಣ್ಣ ಎಂದು ತಿಳಿಸಿದ್ದರು. ತಮ್ಮ ಇಳಿ ವಯಸ್ಸಿನಲ್ಲೂ ಡಾ.ಮನಮೋಹನ್ ಸಿಂಗ್ ಅವರಿಗೆ ನೀಲಿ ಬಣ್ಣದ ಮೇಲಿದ್ದ ಪ್ರೀತಿ ಕಡಿಮೆಯಾಗಲಿಲ್ಲ. ಇದಕ್ಕೆ ಅವರು ಯಾವಾಗಲೂ ನೀಲಿ ಪೇಟವನ್ನು ಧರಿಸುತ್ತಿದ್ದದ್ದೇ ಸಾಕ್ಷಿ.
ನಾಳೆ ಅಂತಿಮ ಸಂಸ್ಕಾರ!: ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಾಳೆ ಬೆಳಗ್ಗೆ 11 ಗಂಟೆಗೆ ನೆರವೇರಿಸಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಅವರಿಗೆ ಅಂತಿಮ ವಿದಾಯ ನೀಡಲಾಗುವುದು. ಅವರ ಪುತ್ರಿಯೊಬ್ಬರು ವಿದೇಶದಲ್ಲಿದ್ದಾರೆ. ಹೀಗಾಗಿ ಅವರ ಆಗಮನದ ನಂತರವೇ ಡಾ. ಮನಮೋಹನ್ ಸಿಂಗ್ ಅವರಿಗೆ ಅಂತಿಮ ವಿದಾಯ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
![DR MANMOHAN SINGH BLUE TURBAN FORMER PM MANMOHAN SINGH ಮನಮೋಹನ್ ಸಿಂಗ್ ನೀಲಿ ಬಣ್ಣದ ಪೇಟ](https://etvbharatimages.akamaized.net/etvbharat/prod-images/27-12-2024/23202394_blue.jpg)
ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ: ಡಾ. ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಅವರನ್ನು ಗುರುವಾರ ಸಂಜೆ ಏಮ್ಸ್ಗೆ ಕರೆತರಾಗಿತ್ತು. ಬಳಿಕ ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ತಮ್ಮ 92ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ.
ಇದನ್ನೂ ಓದಿ: ಆರ್ಥಿಕ ತಜ್ಞನ ರಾಜಕೀಯ ಹಾದಿ: 33 ವರ್ಷ ರಾಜ್ಯಸಭಾ ಸದಸ್ಯ, ಮೊದಲ ಲೋಕಸಭಾ ಚುನಾವಣೆಯಲ್ಲೇ ಸೋತಿದ್ದೇಕೆ?
ಇದನ್ನೂ ಓದಿ: ದೇಶದ ಆರ್ಥಿಕ ಚರಿತ್ರೆಯನ್ನೇ ಬದಲಿಸಿದ ಸಿಂಗ್: ಭಾರತದ ದೂರದೃಷ್ಟಿಯ ಮಹಾನ್ ನಾಯಕ ’ಮನಮೋಹನ’