ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಡಿಸೆಂಬರ್ 26, 2024 ರಂದು ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ದೂರದೃಷ್ಟಿಯ ಮಹಾನ್ ನಾಯಕನ ನಿಧನ ರಾಷ್ಟ್ರದ ಮೇಲೆ ಭಾರೀ ಪ್ರಭಾವ ಬೀರಿದೆ. 2004 ರಿಂದ 2014ರವರೆಗೆ ಸತತ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಸಿಂಗ್, ದೇಶದ ಬೆಳವಣಿಗೆಯ ಪಥವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಕಂಡ ಶ್ರೇಷ್ಠ ಆರ್ಥಿಕ ತಜ್ಞನ ನಿಧನಕ್ಕೆ ಜನಸಾಮಾನ್ಯರೂ ಸೇರಿದಂತೆ ರಾಷ್ಟ್ರದಾದ್ಯಂತ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತೀಯ ಚಿತ್ರರಂಗ ಕೂಡಾ ಇದರಿಂದ ಹೊರತಲ್ಲ.
ಡಾಲಿ ಧನಂಜಯ್ ಸಂತಾಪ: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಮನಮೋಹನ್ ಸಿಂಗ್ ಫೋಟೋ ಹಂಚಿಕೊಂಡು, ಕೈಮುಗಿಯುವ ಎಮೋಜಿ ಬಳಸಿ ತಮ್ಮ ಸಂತಾಪ ಸೂಚಿಸಿದ್ದಾರೆ.
ಚಿರಂಜೀವಿ ಪೋಸ್ಟ್: ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರೂ ಕೂಡಾ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಸಿಂಗ್ ಅವರನ್ನು 'ನಮ್ಮ ದೇಶ ನಿರ್ಮಿಸಿದ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು' ಎಂದು ಉಲ್ಲೇಖಿಸಿದ್ದಾರೆ. "ಭಾರತದ 13ನೇ ಪ್ರಧಾನ ಮಂತ್ರಿಯಾಗಿ ಸತತ ಎರಡು ಅವಧಿಗೆ ಅವರ ಅತ್ಯಂತ ಯಶಸ್ವಿ ಅಧಿಕಾರಾವಧಿಯು ಇತಿಹಾಸದಲ್ಲಿ ಉಳಿಯುತ್ತದೆ" ಎಂದು ಬರೆದುಕೊಂಡಿದ್ದಾರೆ. ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
Deeply anguished by the passing away of one of the greatest statesmen Our country has ever produced, highly educated, most graceful,
— Chiranjeevi Konidela (@KChiruTweets) December 26, 2024
soft spoken and humble leader
Dr Manmohan Singh Ji!
His visionary and game changing contributions as the Finance Minister and then his highly… pic.twitter.com/75CZwyp6en
ಅಲ್ಲು ಅರ್ಜುನ್ ಕಂಬನಿ: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಅವರು ಇನ್ಸ್ಟಾ ಸ್ಟೋರಿ ಹಂಚಿಕೊಂಡಿದ್ದಾರೆ. ಮಾಜಿ ಪ್ರಧಾನಿಯ ಫೋಟೋ ಶೇರ್ ಮಾಡಿ, "ಅವರ ನಾಯಕತ್ವ ಮತ್ತು ರಾಷ್ಟ್ರಕ್ಕೆ ಅವರ ಸಮರ್ಪಣೆ ಸದಾ ಸ್ಮರಣೆಯಲ್ಲಿರುತ್ತದೆ. ರೆಸ್ಟ್ ಇನ್ ಪೀಸ್ ಸರ್" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಪ್ರಕರಣ: 'ಸೆಲೆಬ್ರಿಟಿಗಳು ಅಭಿಮಾನಿಗಳನ್ನು ನಿಯಂತ್ರಿಸಬೇಕು'; ಸಿಎಂ ರೇವಂತ್ ರೆಡ್ಡಿ
ದಿಲ್ಜಿತ್ ದೋಸಾಂಜ್ ದುಃಖ: ಪಂಜಾಬಿ ಗಾಯಕ-ನಟ ದಿಲ್ಜಿತ್ ದೋಸಾಂಜ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಸಿಂಗ್ ಅವರ ಫೋಟೋದೊಂದಿಗೆ "ಓ ವಹೆಗುರು" ಎಂದು ಬರೆದು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 35 ಕೋಟಿ ಬಜೆಟ್, 90 ಕೋಟಿಗೂ ಅಧಿಕ ಕಲೆಕ್ಷನ್: ಈ ಸಿನಿಮಾ ಸೆಟ್ನಲ್ಲಿ 35 ಸೀರೆಗಳನ್ನು ವಿತರಿಸಿದ್ದ ಸಲ್ಮಾನ್ ಖಾನ್
ಕಪಿಲ್ ಶರ್ಮಾ ಪೋಸ್ಟ್: ಕಾಮಿಡಿಯನ್, ನಟ ಕಪಿಲ್ ಶರ್ಮಾ ಕೂಡಾ ಸೋಷಿಯಲ್ ಮೀಡಿಯಾದಲ್ಲಿ, "ಭಾರತ ಇಂದು ತನ್ನ ಅತ್ಯುತ್ತಮ ನಾಯಕರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಭಾರತದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ ಮತ್ತು ಸಮಗ್ರತೆ, ನಮ್ರತೆಯ ಸಂಕೇತವಾದ ಡಾ.ಮನಮೋಹನ್ ಸಿಂಗ್ ಅವರು ಭರವಸೆ, ಪ್ರಗತಿಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ'' ಎಂದು ತಿಳಿಸಿದ್ದಾರೆ. ಅವರ ಈ ಪೋಸ್ಟ್, ಸಿಂಗ್ ಅವರ ಆರ್ಥಿಕ ಬೆಳವಣಿಗೆಯ ಪರಂಪರೆ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಒತ್ತಿಹೇಳಿತು.