ETV Bharat / state

ಲಂಚ ಬೇಡಿಕೆ ಆರೋಪದಲ್ಲಿ ಬಂಧನ ಪ್ರಕರಣ : ಪೊಲೀಸ್ ಇನ್​ಸ್ಪೆಕ್ಟರ್, ಸಿಬ್ಬಂದಿಗೆ ಜಾಮೀನು - COURT GRANTED BAIL TO POLICE

ಲಂಚ ಬೇಡಿಕೆ ಆರೋಪದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಹಾಗೂ ಸಿಬ್ಬಂದಿಗೆ ನ್ಯಾಯಾಲಯ ಜಾಮೀನು ನೀಡಿದೆ.

court
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ETV Bharat)
author img

By ETV Bharat Karnataka Team

Published : Feb 6, 2025, 6:35 PM IST

ಮಂಗಳೂರು (ದಕ್ಷಿಣ ಕನ್ನಡ) : ನ್ಯಾಯಾಲಯದ ಆದೇಶದಂತೆ ಠಾಣೆಯಲ್ಲಿರುವ ವಾಹನವನ್ನು ಬಿಡಿಸಲು ಲಂಚದ ಬೇಡಿಕೆ ಇರಿಸಿ, ಲಂಚ ಪಡೆದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಮೊಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ್​​ಗೆ ಜಾಮೀನು ಲಭಿಸಿದೆ.

ಜ.27 ರಂದು ವಾಹನವನ್ನು ಬಿಡಿಸಲು ಉತ್ತರ ಪೊಲೀಸ್ ಠಾಣೆಗೆ ಹೋದಾಗ ಇನ್​ಸ್ಪೆಕ್ಟರ್ ಮೊಹಮ್ಮದ್ ಶರೀಫ್ ಲಂಚದ ಬೇಡಿಕೆ ಇಟ್ಟಿದ್ದು, ಅದನ್ನು ಪೊಲೀಸ್ ಕಾನ್​ಸ್ಟೇಬಲ್ ಪ್ರವೀಣ್ ನಾಯ್ಕ್​ ಅವರಿಗೆ ನೀಡುವಂತೆ ತಿಳಿಸಿದ್ದರು. ದೂರುದಾರರು ಲಂಚವನ್ನು ನೀಡದೆ ಇದ್ದಿದ್ದರಿಂದ ವಾಹನ ಬಿಡಿಸಲು ಸತಾಯಿಸಿರುತ್ತಾರೆ ಎಂದು ಲೋಕಾಯುಕ್ತ ಠಾಣೆಗೆ ದೂರನ್ನು ನೀಡಿದ್ದರು.

ಅದರಂತೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇನ್​ಸ್ಪೆಕ್ಟರ್ ಮೊಹಮ್ಮದ್​​ ಶರೀಫ್ ಹಾಗೂ ಕಾನ್​ಸ್ಟೇಬಲ್ ಪ್ರವೀಣ್ ನಾಯ್ಕ ಅವರನ್ನು ಜ. 28 ರಂದು ಬಂಧಿಸಿದ್ದರು.

ಆರೋಪಿ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಅರ್ಜಿಯನ್ನು ಪರಿಗಣಿಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ, ಇನ್​ಸ್ಪೆಕ್ಟರ್ ಮೊಹಮ್ಮದ್ ಶರೀಫ್‌ ಹಾಗೂ ಪೊಲೀಸ್ ಕಾನ್​ಸ್ಟೇಬಲ್​ ಪ್ರವೀಣ್ ನಾಯ್ಕರಿಗೆ ಜಾಮೀನು ಅರ್ಜಿ ಮಂಜೂರು ಮಾಡಿ ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಗಳ ಪರವಾಗಿ ವಾದ ಮಂಡಿಸಿದ ಖ್ಯಾತ ವಕೀಲರಾದ ಬಿ. ಅರುಣ್ ಬಂಗೇರ ಮತ್ತು ರಿಹಾನಾ ಪರ್ವಿನ್ ತಿಳಿಸಿದ್ದಾರೆ.

ಇದನ್ನೂ ಓದಿ : ಠಾಣೆಯಿಂದ ಬೈಕ್​ ಬಿಡುಗಡೆಗೆ ಲಂಚ ಸ್ವೀಕಾರ: ಪೊಲೀಸ್ ಇನ್ಸ್​ಪೆಕ್ಟರ್, ಸಿಬ್ಬಂದಿ ಲೋಕಾಯುಕ್ತ ಬಲೆಗೆ - POLICE INSPECTOR DETAIN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.