ರಾಮಾಯಣ ಚಿತ್ರಗಳಿರುವ ಸೀರೆಗಳಿಗೆ ಭಾರಿ ಬೇಡಿಕೆ
🎬 Watch Now: Feature Video
ರಾಯ್ಪುರ (ಛತ್ತೀಸ್ಗಢ): ರಾಮಾಯಣ ಸೀರೆಗಳು ಇದೀಗ ಛತ್ತೀಸ್ಗಢ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಕೋಸಾ ರೇಷ್ಮೆ ಸೀರೆಯ ಸೆರಗಿನ ಮೇಲೆ ಶ್ರೀ ರಾಮನ ದರ್ಬಾರನ್ನು ಕಟ್ಟಿಕೊಡುವ ಚಿತ್ರವನ್ನು ನೇಯ್ಗೆ ಮಾಡಲಾಗಿದ್ದು, ಜಂಜ್ಗೀರ್-ಚಂಪಾ ಜಿಲ್ಲೆಯ ಚಂದ್ರಪುರದ ನೇಕಾರರು ಈ ಸೀರೆಗಳನ್ನು 'ರಾಮಾಯಣ ಸೀರೆಗಳು' ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಸೀರೆಯ ಬೆಲೆ 15,316 ರೂ. ಆಗಿದ್ದು, ರಾಮಾಯಣ ಸೀರೆಯನ್ನು ಚಂದ್ರಪುರದ ಪರಮೇಶ್ವರಿ ವೀವರ್ಸ್ ಕೋ-ಆಪರೇಟಿವ್ ಸೊಸೈಟಿ ತಯಾರಿಸುತ್ತಿದೆ. ಈ ಸೀರೆಗಳು ರಾಯ್ಪುರದ ವಿಲಾಸ ಎಂಪೋರಿಯಂನಲ್ಲಿ ಲಭ್ಯವಿದ್ದು, ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು.